ನವದೆಹಲಿ: ವಿಶ್ವಕಪ್ಗೆ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದರಲ್ಲಿ ಹೆಚ್ಚು ಬ್ಯಾಟಿಂಗ್ಗೆ ಒತ್ತು ಕೊಡಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತನಾಡಿದ್ದು, ಮೊದಲ ಐದು ಬ್ಯಾಟರ್ಗಳು ಮಾಡಲಾಗದ್ದನ್ನು ಕೆಳ ಕ್ರಮಾಂಕದ ಬ್ಯಾಟರ್ಗಳು ಮಾಡಬೇಕು ಎಂಬ ಲೆಕ್ಕಾಚಾರ ಎಷ್ಟು ಸರಿ, ಈ ಹಿನ್ನೆಲೆಯಲ್ಲಿ ಬೌಲರ್ಗಳನ್ನು ಕೈಬಿಟ್ಟಿರುವುದು ಸರಿ ಅಲ್ಲ ಎಂದು ಅವರು ಸ್ಟಾರ್ ಸ್ಪೋರ್ಟ್ಸ್ನ ಆನ್ಲೈನ್ ವೇದಿಕೆಯಲ್ಲಿ ಚರ್ಚಿಸಿದ್ದಾರೆ.
-
.@shoaib100mph emphasises the amount of pressure #TeamIndia might be under and recalls his playing days in 🇮🇳
— Star Sports (@StarSportsIndia) September 7, 2023 " class="align-text-top noRightClick twitterSection" data="
Don't forget to tune-in to the premier, on all our social media platforms #AsiaCupOnStar #Cricket pic.twitter.com/bqxQo2S5bQ
">.@shoaib100mph emphasises the amount of pressure #TeamIndia might be under and recalls his playing days in 🇮🇳
— Star Sports (@StarSportsIndia) September 7, 2023
Don't forget to tune-in to the premier, on all our social media platforms #AsiaCupOnStar #Cricket pic.twitter.com/bqxQo2S5bQ.@shoaib100mph emphasises the amount of pressure #TeamIndia might be under and recalls his playing days in 🇮🇳
— Star Sports (@StarSportsIndia) September 7, 2023
Don't forget to tune-in to the premier, on all our social media platforms #AsiaCupOnStar #Cricket pic.twitter.com/bqxQo2S5bQ
ತಂಡದಲ್ಲಿ ಯುಜುವೇಂದ್ರ ಚಹಾಲ್ಗೆ ಅವಕಾಶ ಸಿಗದಿರುವುದು ಅಚ್ಚರಿಯ ಸಂಗತಿ ಎಂದಿದ್ದಾರೆ. ಯುಜುವೇಂದ್ರ ಚಹಾಲ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದು ನನ್ನ ತಿಳಿವಳಿಕೆಯನ್ನು ಮೀರಿದೆ. ಭಾರತ ತಂಡ 150-200ಕ್ಕೆ ಔಟಾದಾಗ ಎದುರಾಳಿಯನ್ನು ಸಮರ್ಥವಾಗಿ ಕಟ್ಟಿಹಾಕಲು ಬೌಲರ್ಗಳ ಅಗತ್ಯ ಇದೆ. ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡುವುದರ ಅರ್ಥವೇನು? ಅಗ್ರ ಐವರು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ಏಳು ಮತ್ತು ಎಂಟನೇ ಕ್ರಮಾಂಕದಲ್ಲಿರುವ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಾರೆ? ಭಾರತ ಬೌಲರ್ಗಳನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಅಖ್ತರ್ ಹೇಳಿದ್ದಾರೆ.
ಅಕ್ಟೋಬರ್ 14 ರಂದು ಅಹಮದಾಬಾದ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತಕ್ಕೆ ಹೆಚ್ಚಿನ ಒತ್ತಡ ಇರಲಿದೆ ಎಂದಿದ್ದಾರೆ. ಈ ಒತ್ತಡದ ಕಾರಣ ಭಾರತವನ್ನು ಪಾಕಿಸ್ತಾನ ಸುಲಭವಾಗಿ ಮಣಿಸಲಿದೆ. ಪ್ರತಿ ಆಟಗಾರ ಮತ್ತು ನಾಯಕ ರೋಹಿತ್ ಶರ್ಮಾಗೆ ಹೆಚ್ಚಿನ ಒತ್ತಡ ಇರಲಿದೆ. ಇದನ್ನೇ ಪಾಕ್ ಲಾಭ ಮಾಡಿಕೊಂಡು ಪ್ರಶಸ್ತಿ ಗೆಲ್ಲಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ 2013 ರಿಂದ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ಭಾರತದಲ್ಲೇ ವಿಶ್ವಕಪ್ ನಡೆಯುತ್ತಿರುವುದರಿಂದ ಟೀಮ್ ಮೇಲೆ ಹೆಚ್ಚಿನ ಭರವಸೆ ಇದೆ. ಇದೇ ತಂಡಕ್ಕೆ ಒತ್ತಡವಾಗಿ ಪರಿಣಮಿಸುವ ಸಾಧ್ಯತೆ ಇದೆ. ಏಕೆಂದರೆ ಪ್ರತಿ ಪಂದ್ಯವನ್ನು ಗೆಲ್ಲಲೇ ಬೇಕು ಎಂದು ಅಭಿಮಾನಿಗಳು ಎದುರು ನೋಡುತ್ತಾರೆ. ಸೋತಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಟೀಕಾ ಪ್ರಹಾರವೇ ಆಗುತ್ತದೆ ಇದರಿಂದ ತಂಡದ ಆಟಗಾರರಿಗೆ ಹೆಚ್ಚು ಒತ್ತಡ ಆಗಲಿದೆ.
ಭಾರತ -ಪಾಕಿಸ್ತಾನ ಪಂದ್ಯ ಮಹಾ ಭಾರತದಂತೆ ಬಿಂಬಿಸಲಾಗುತ್ತಿದೆ:"ಅಕ್ಟೋಬರ್ 14 ರಂದು ನಡೆಯುವ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂಬತೆ ಈಗಲೇ ಬಿಂಬಿಸಲಾಗುತ್ತಿದೆ. ಇಂದು ತಂಡಕ್ಕೆ ಹೆಚ್ಚಿನ ಒತ್ತಡ ತರಲಿದೆ. ದೊಡ್ಡ ಮೈದಾನದಲ್ಲಿ ಸಂಪೂರ್ಣ ಪ್ರೇಕ್ಷಕರಿಂದ ತುಂಬಿರುತ್ತದೆ. ಟಿವಿ ಮತ್ತು ಮೊಬೈಲ್ನಲ್ಲಿ ಕೋಟಿಗಟ್ಟಲೆ ಜನ ಪಂದ್ಯವನ್ನು ನೋಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪೋಸ್ಟ್ಗಳು, ಮೀಮ್ಸ್ಗಳು ಹರಿದಾಡುತ್ತವೆ. ಪಂದ್ಯಕ್ಕೂ ಮುನ್ನ ಈ ರೀತಿಯ ವಿಚಾರಗಳು ಆಟಗಾರರ ಮೇಲೆ ಹೆಚ್ಚಿನ ಪ್ರೆಶರ್ಗೆ ಕಾರಣ ಆಗುತ್ತದೆ. ಪಾಕಿಸ್ತಾನ ತಂಡಕ್ಕೆ ಪಂದ್ಯ ಗೆಲ್ಲುವ ಅಗತ್ಯ ಅಷ್ಟೇ ಇದೆ. ಆದರೆ ಭಾರತಕ್ಕೆ ಹಾಗಿಲ್ಲ ಮೇಲಿನ ಎಲ್ಲ ಒತ್ತಡಗಳನ್ನು ಎದುರಿಸ ಬೇಕಿದೆ" ಎಂದು ಶೋಯಬ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ - ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ.. ಆದರೂ ಆತಂಕವಿಲ್ಲ.. ಮೀಸಲು ದಿನದಂದು ನಡೆಯಲಿದೆ ಮ್ಯಾಚ್