ಲಾಹೋರ್: ವಿಶ್ವಕಂಡಂತಹ ಮಾರಕ ವೇಗಿಗಳಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಒಬ್ಬರು. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನವಾಗಿದ್ದರು. ಬೌನ್ಸರ್ ಮತ್ತು ಯಾರ್ಕರ್ಗಳಿಂದ ವಿಶ್ವದ ಸ್ಟಾರ್ ಬ್ಯಾಟ್ಸ್ಮನ್ಗಳ ನಿದ್ದೆಗೆಡಿಸಿದ್ದ ಅಖ್ತರ್ ತಾವೂ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ಗೆ ಬೌಲಿಂಗ್ ಮಾಡುವುದಕ್ಕೆ ತುಂಬಾ ಕಷ್ಟ ಪಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಮುತ್ತಯ್ಯ ಮುರುಳೀಧರನ್ ಶ್ರೀಲಂಕಾ ಪರ ಕೊನೆಯ ಬ್ಯಾಟ್ಸ್ಮನ್ ಆಗಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಅಖ್ತರ್ ಬ್ಯಾಟ್ಸ್ಮನ್ಗಳಿಗೆ ತಮ್ಮ ಬೌನ್ಸರ್ ಮೂಲಕ ವಿಕೆಟ್ ಪಡೆಯಲು ಸಜ್ಜಾಗುತ್ತಿದ್ದರು. ಆದರೆ ಮುರುಳಿ ತಮ್ಮ ಬಳಿ ಬಂದು ಫುಲ್ಲರ್ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದರಂತೆ. ಇದರ ಬದಲಾಗಿ ತಮ್ಮ ವಿಕೆಟ್ ಕೊಡುವುದಾಗಿ ಹೇಳುತ್ತಿದ್ದರೆಂದು ಖಾಸಗಿ ವೆಬ್ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
" ಮುತ್ತಯ್ಯ ಮುರುಳೀಧರನ್ ನಾನು ಎದುರಿಸಿದ ಅತ್ಯಂತ ಕಠಿಣ ಬ್ಯಾಟ್ಸ್ಮನ್. ನಾನು ತಮಾಷೆ ಮಾಡುತ್ತಿಲ್ಲ. ಆತ ನನ್ನ ಬಳಿ ಬಂದು ಬೌನ್ಸರ್ ಎಸೆದು ನನ್ನನ್ನು ಕೊಲ್ಲಬೇಡ, ಒಂದು ವೇಳೆ ನೀನು ಬೌನ್ಸರ್ ಹಾಕಿ, ಅದು ನನಗೆ ಬಡಿದರೆ ನಾನು ಸಾಯುತ್ತೇನೆ. ದಯವಿಟ್ಟು ಚೆಂಡನ್ನು ಫುಲ್ ಟಾಸ್ ಅಥವಾ ಪಿಚ್ ಆಗುವಂತೆ ಎಸೆದರೆ ನಾನು ವಿಕೆಟ್ ಒಪ್ಪಿಸುತ್ತೇನೆ ಎಂದು ಹೇಳುತ್ತಿದ್ದರು".
ಆದರೆ,ನಾನು ಚೆಂಡನ್ನು ಅವರು ಹೇಳಿದಂತೆ ಎಸೆದರೆ ಆತ ಜೋರಾಗಿ ಬಾರಿಸಿ, ನನ್ನತ್ತ ಬಂದು ತಪ್ಪಾಗಿ ಹೊಡೆದುಬಿಟ್ಟಿದ್ದೀನಿ ಎಂದು ಹೇಳುತ್ತಿದ್ದರು ಎಂದು ಶೋಯಬ್ ತಾವೆದುರಿಸಿದ ಧರ್ಮಸಂಕಟವನ್ನು ಹೇಳಿಕೊಂಡಿದ್ದಾರೆ.
ಜಾನಿ ಬೈರ್ಸ್ಟೋವ್ ಓವರ್ರೇಟೆಡ್ ಬ್ಯಾಟ್ಸ್ಮನ್
ಇದೇ ಸಂವಾದದಲ್ಲಿ ಪಾಕಿಸ್ತಾನ ಬೌಲರ್ ಇಂಗ್ಲೆಂಡ್ನ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಅವರನ್ನು ಓವರ್ರೇಟೆಡ್ ಬ್ಯಾಟ್ಸ್ಮನ್ ಎಂದು ಕರೆದಿದ್ದಾರೆ. ಆದರೆ ಬೈರ್ಸ್ಟೋವ್ 2015 ಏಕದಿನ ವಿಶ್ವಕಪ್ ನಂತರ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗುವವರೆಗೂ ತಂಡದ ಯಶಸ್ಸಿನ ಪ್ರಮುಖ ಭಾಗವಾಗಿದ್ದಾರೆ. ಹಾಗಾಗಿ ಅಖ್ತರ್ ಹೇಳಿಕೆಯನ್ನು ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳು ಒಪ್ಪುವಂತದಲ್ಲ ಎಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಐಸಿಸಿ ಟ್ರೋಫಿ ಬಿಡಿ, ಕೊಹ್ಲಿ ಇನ್ನೂ ಐಪಿಎಲ್ ಟ್ರೋಫಿ ಗೆದ್ದಿಲ್ಲ: ಸುರೇಶ್ ರೈನಾ