ಕೊಲಂಬೊ: ಸದಾ ಲವಲವಿಕೆಯಿಂದ ಇರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್, ಮೈದಾನದಲ್ಲಿ ತಮಾಷೆ ಮಾಡುತ್ತಲೇ ಇರುತ್ತಾರೆ. ಲಂಕಾ ವಿರುದ್ಧ ನಡೆದ ಇಂದಿನ ಪಂದ್ಯದಲ್ಲೂ ಅವರು ವಿಭಿನ್ನವಾಗಿ ಸಂಭ್ರಮಿಸಿದರು.
-
#TeamIndia have won the toss and they will bat first #SLvIND pic.twitter.com/51qWQOtePK
— Doordarshan Sports (@ddsportschannel) July 23, 2021 " class="align-text-top noRightClick twitterSection" data="
">#TeamIndia have won the toss and they will bat first #SLvIND pic.twitter.com/51qWQOtePK
— Doordarshan Sports (@ddsportschannel) July 23, 2021#TeamIndia have won the toss and they will bat first #SLvIND pic.twitter.com/51qWQOtePK
— Doordarshan Sports (@ddsportschannel) July 23, 2021
ಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದು, ಈ ಹಿಂದಿನ ಎರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ಕಬಡ್ಡಿ ಶೈಲಿಯಲ್ಲಿ ತೊಡೆತಟ್ಟಿ ಕೈಮೇಲೆತ್ತಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಈ ಹಿಂದಿನ ಎರಡು ಪಂದ್ಯಗಳಲ್ಲಿ ಶಿಖರ್ ಧವನ್ ಟಾಸ್ ಸೋತಿದ್ದರಿಂದ ಅನೇಕರು ಟ್ರೋಲ್ ಮಾಡಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕಾರಣ ಈ ರೀತಿಯಾಗಿ ಸಂಭ್ರಮಿಸಿದ್ದಾರೆ. ಹಿಂದೆ ಅನೇಕ ಸಲ ಮೈದಾನದಲ್ಲಿ ಕ್ಯಾಚ್ ಪಡೆದ ವೇಳೆಯೂ ಶಿಖರ್ ಧವನ್ ಈ ರೀತಿಯಾಗಿ ತೊಡೆ ತಟ್ಟಿ ಕೈ ಮೇಲೆತ್ತಿ ಸಂಭ್ರಮಿಸಿದ್ದರು. ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ಕೇವಲ 13ರನ್ಗಳಿಕೆ ಮಾಡುವಲ್ಲಿ ಮಾತ್ರ ಶಕ್ತರಾದರು.
ಇದನ್ನೂ ಓದಿ: ಮಿಂಚಿದ ಲಂಕಾ ಸ್ಪಿನ್ನರ್ಸ್; 225 ರನ್ಗಳಿಗೆ ಆಲೌಟ್ ಆದ ಟೀಂ ಇಂಡಿಯಾ