ETV Bharat / sports

ಹರಿಣಗಳ ನಾಡಿನಲ್ಲಿ 7 ವಿಕೆಟ್​ ಪಡೆದ ಏಷ್ಯಾದ ಮೊದಲ ವೇಗಿ ಶಾರ್ದೂಲ್​ ಠಾಕೂರ್​ - ದಕ್ಷಿಣ ಆಫ್ರಿಕಾದಲ್ಲಿ ಶಾರ್ದೂಲ್ 7 ವಿಕೆಟ್ ದಾಖಲೆ

ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ 61 ರನ್​ ನೀಡಿ 7 ವಿಕೆಟ್​ ಪಡೆದದ್ದು ದಕ್ಷಿಣ ಅಫ್ರಿಕಾ ವಿರುದ್ಧ ಭಾರತೀಯ ಬೌಲರ್​ಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು. ಅಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾ ನೆಲದಲ್ಲಿ 7 ವಿಕೆಟ್ ಪಡೆದ ಏಷ್ಯಾದ ಮೊದಲ ವೇಗದ​ ಬೌಲರ್​ ಎನಿಸಿಕೊಂಡರು. ಇವರನ್ನು ಬಿಟ್ಟರೆ ಹರ್ಭಜನ್​ ಸಿಂಗ್ 2011ರಲ್ಲಿ ಹರಿಣಗಳ ನಾಡಿದಲ್ಲಿ 120 ರನ್​ 7 ವಿಕೆಟ್ ಪಡೆದಿದ್ದರು.

Shardul Thakur takes 7 for 61 is Best Bowling Figures By Asian pacer
ಶಾರ್ದೂಲ್ ಠಾಕೂರ್​ ದಾಖಲೆ
author img

By

Published : Jan 5, 2022, 4:48 AM IST

ಜೋಹನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಲಾರ್ಡ್​ ಖ್ಯಾತಿಯ ಶಾರ್ದೂಲ್​ ಠಾಕೂರ್​ 61 ರನ್​ ನೀಡಿದ 7 ವಿಕೆಟ್ ಪಡೆಯುವ ಮೂಲಕ ಹಲವಾರು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ಭಾರತದ ಪಾಲಿನ ಅದೃಷ್ಟದ ಮೈದಾನವಾಗಿರುವ ಜೋಹನ್ಸ್​ಬರ್ಗ್​ನಲ್ಲಿ ಶಾರ್ದೂಲ್​ ಠಾಕೂರ್ ಹರಿಣ ಪಡೆಯ 7 ವಿಕೆಟ್​ ಉಡಾಯಿಸಿ ಕ್ರಿಕೆಟ್​ ಜಗತ್ತನ್ನು ತನ್ನತ್ತ ನೋಡುವಂತೆ ಮಾಡಿದ್ದಾರೆ.

ಭಾರತದ 202ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ದಕ್ಷಿಣ ಅಫ್ರಿಕಾ 14ಕ್ಕೆ ತನ್ನ ಮೊದಲ ವಿಕೆಟ್​ ಕಳೆದುಕೊಂಡಿತ್ತು. ಶಮಿ ಆರಂಭಿಕ ಮಾರ್ಕ್ರಮ್​(7) ವಿಕೆಟ್​ ಪಡೆದುಕೊಂಡಿದ್ದರು.

ಆದರೆ 2ನೇ ವಿಕೆಟ್​ಗೆ ಎಲ್ಗರ್​(28) ಮತ್ತು ಕೀಗನ್ ಪೀಟರ್ಸನ್​ 74 ರನ್​ ಸೇರಿಸಿ ಅಪಾಯರಾಗುತ್ತಿದ್ದ ಸಂದರ್ಭದಲ್ಲಿ ದಾಳಿಗಿಳಿದ ಠಾಕೂರ್ ಇಬ್ಬರನ್ನು ಪೆವಿಲಿಯನ್​ಗಟ್ಟಿದರು. ನಂತರ ತನ್ನ ಸ್ವಿಂಗ್ ಮಾರಾಕಾಸ್ತ್ರದಿಂದ ಹರಿಣ ಪಡೆಯ ಬ್ಯಾಟರ್​ಗಳನ್ನು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್​ ಸೇರುವಂತೆ ಮಾಡಿದರು.

ಆಫ್ರಿಕಾ ತಂಡ ಜೊತೆಯಾಟ ನೀಡಿ ಸ್ಥಿರವಾಗುತ್ತಿದ್ದಂತೆ ನಾಯಕ ರಾಹುಲ್​ ಚೆಂಡನ್ನು ಠಾಕೂರ್​ಗೆ ನೀಡುತ್ತಿದ್ದರು. ಪ್ರತಿ ಸ್ಪೆಲ್​ನಲ್ಲಿ ಬೌಲಿಂಗ್ ಮಾಡಿದಾಗಲೆಲ್ಲಾ ಠಾಕೂರ್ ವಿಕೆಟ್ ಉಡಾಯಿಸಿದರು. ಅವರು ಡಾಸನ್​(1), ಬವುಮಾ(51), ವೆರಿನ್ನೆ(21), ಮಾರ್ಕೊ ಜಾನ್ಸನ್​(21) ಮತ್ತು ಲುಂಗಿ ಎಂಗಿಡಿ ವಿಕೆಟ್ ಪಡೆದರು.

7 ವಿಕೆಟ್ ಪಡೆದ ಏಷ್ಯಾದ ಮೊದಲ ಬೌಲರ್​

ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ 61 ರನ್​ ನೀಡಿ 7 ವಿಕೆಟ್​ ಪಡೆದದ್ದು ದಕ್ಷಿಣ ಅಫ್ರಿಕಾ ವಿರುದ್ಧ ಭಾರತೀಯ ಬೌಲರ್​ಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು. ಅಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾ ನೆಲದಲ್ಲಿ 7 ವಿಕೆಟ್ ಪಡೆದ ಏಷ್ಯಾದ ಮೊದಲ ವೇಗದ​ ಬೌಲರ್​ ಎನಿಸಿಕೊಂಡರು. ಇವರನ್ನು ಬಿಟ್ಟರೆ ಹರ್ಭಜನ್​ ಸಿಂಗ್ 2011ರಲ್ಲಿ ಹರಿಣಗಳ ನಾಡಿದಲ್ಲಿ 120 ರನ್​ 7 ವಿಕೆಟ್ ಪಡೆದಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್

ಶಾರ್ದೂಲ್​ ಕೇವಲ 61 ರನ್​​ ನೀಡಿ 7 ವಿಕೆಟ್ ಪಡೆಯುವ ಮೂಲಕ ದ. ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯ ಬೌಲರ್ ಎನಿಸಿಕೊಂಡರು. 2015ರ ನಾಗ್ಪುರ ಟೆಸ್ಟ್​ನಲ್ಲಿ ಸ್ಪಿನ್​ ಸ್ಟಾರ್ ರವಿಚಂದ್ರನ್ ಅಶ್ವಿನ್ 66 ರನ್​ ನೀಡಿ 7 ವಿಕೆಟ್ ಪಡೆದಿದ್ದದ್ದು ಇಲ್ಲಿಯವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಹರ್ಭಜನ್​ ಸಿಂಗ್​ ಕೋಲ್ಕತ್ತಾದಲ್ಲಿ 87 ರನ್​ ನೀಡಿ 7 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:SA vs IND 2nd Test: ವಾಂಡರರ್ಸ್‌ನಲ್ಲಿ ಹರಿಣಗಳ ಮೇಲೆ 'ಶಾರ್ದೂಲ' ದಾಳಿ; 7 ವಿಕೆಟ್‌ ಪಡೆದು ಮಿಂಚಿದ ಭಾರತೀಯ ವೇಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.