ಮುಂಬೈ : ಭಾರತ ತಂಡದ ಗೋಲ್ಡನ್ ಆರ್ಮ್ ಬೌಲರ್ ಶಾರ್ದೂಲ್ ಠಾಕೂರ್ ತಮ್ಮ ದೀರ್ಘಕಾಲದ ಪ್ರೇಯಸಿ ಮಿಥಾಲಿ ಪಾರುಲ್ಕರ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಿಕೆಸಿ ಹಾಲ್ನಲ್ಲಿ ಸೋಮವಾರ ನಿಶ್ಚಿತಾರ್ಥ ಕಾರ್ಯಕ್ರಮ ನಡಿದಿದೆ.
ಕೋವಿಡ್-19 ಭೀತಿ ಇರುವುದರಿಂದ ಶಾರ್ದೂಲ್-ಮಿಥಾಲಿಗೆ ಹತ್ತಿರದ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಜೋಡಿ ಆಸ್ಟ್ರೇಲಿಯಾದಲ್ಲಿ 2022ಕ್ಕೆ ನಡೆಯಲಿರುವ ವಿಶ್ವಕಪ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.
-
Happy and Cute couple 😍❤️
— SHARDUL THAKUR FC™ (@Don_Shardul) November 29, 2021 " class="align-text-top noRightClick twitterSection" data="
Shardul Thakur and Mittali #Shardulthakur @imShard pic.twitter.com/aMmLnC98w7
">Happy and Cute couple 😍❤️
— SHARDUL THAKUR FC™ (@Don_Shardul) November 29, 2021
Shardul Thakur and Mittali #Shardulthakur @imShard pic.twitter.com/aMmLnC98w7Happy and Cute couple 😍❤️
— SHARDUL THAKUR FC™ (@Don_Shardul) November 29, 2021
Shardul Thakur and Mittali #Shardulthakur @imShard pic.twitter.com/aMmLnC98w7
ಶಾರ್ದೂಲ್ ಠಾಕೂರ್ ಕೊನೆಯ ಬಾರಿ ಯುಎಇಯಲ್ಲಿ ನಡೆದಿದ್ದ 2021ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಕಾಣಿಸಿದ್ದರು. 2 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಅವರು, ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ನಂತರ ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ಟಿ20 ಸರಣಿ ಮತ್ತು ಟೆಸ್ಟ್ ಸರಣಿಯಿಂದ ಬಿಸಿಸಿಐ ವಿಶ್ರಾಂತಿ ನೀಡಿತ್ತು.
ಶಾರ್ದೂಲ್ ಭಾರತದ ಪರ 4 ಟೆಸ್ಟ್, 15 ಏಕದಿನ ಮತ್ತು 24 ಟಿ20 ಪಂದ್ಯಗಳನ್ನಾಡಿದ್ದು, 67 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಹರ್ಭಜನ್ ಸಿಂಗ್ ಹಿಂದಿಕ್ಕಿದ ಅಶ್ವಿನ್ : ಭಾರತದ ಪರ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್