ETV Bharat / sports

ನಾಲ್ಕನೇ ಟೆಸ್ಟ್​ನಲ್ಲಿ ಶಮಿಗೆ ಅವಕಾಶ, ಏಕದಿನ ಸರಣಿಗಾಗಿ ಸಿರಾಜ್​ಗೆ ವಿಶ್ರಾಂತಿ ಸಾಧ್ಯತೆ - Shami set to return in playing XI

ಏಕದಿನ ವಿಶ್ವ ಕಪ್​ ಹಿನ್ನಲೆ ವೇಗಿಗಳಿಗೆ ವಿರಾಮ ನೀಡಲು ಚಿಂತನೆ - ಶಮಿಗೆ ನಾಲ್ಕನೇ ಪಂದ್ಯದಲ್ಲಿ ಅವಕಾಶ ಸಾಧ್ಯತೆ - ಏಕದಿನ ಸರಿಣಿಗೆ ಸಿರಾಜ್​ಗೆ ಹೆಚ್ಚು ಪ್ರಾಶಸ್ತ್ಯ

Shami set to return in playing XI for next Test
ನಾಲ್ಕನೇ ಟೆಸ್ಟ್​ಗೆ ಶಮಿಗೆ ಅವಕಾಶ
author img

By

Published : Mar 4, 2023, 5:00 PM IST

ನವದೆಹಲಿ: ಏಕದಿನ ವಿಶ್ವಕಪ್​ನ ಉದ್ದೇಶದಿಂದ ವೇಗದ ಬೌಲರ್​ಗಳಿಗೆ ಹೆಚ್ಚಿನ ಒತ್ತಡ ನೀಡದಿರಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಪಂದ್ಯದ ನಡುವ ವಿರಾಮ ನೀಡಲು ಆಲೋಚಿಸಿದೆ. ಇದೇ ಉದ್ದೇಶದಿಂದ ಮೂರನೇ ಪಂದ್ಯದಿಂದ ಶಮಿಗೆ ವಿರಾಮ ನೀಡಿ ಉಮೇಶ್​ ಯಾದವ್​ಗೆ ಸ್ಥಾನ ಕೊಡುವ ಬಗ್ಗೆ ಚಿಂತಿಸಲಾಗಿತ್ತು ಎಂದು ತಿಳಿದು ಬಂದಿದೆ. ಐಪಿಎಲ್​ ಮತ್ತು ಏಕದಿನ ವಿಶ್ವ ಕಪ್​ ಇರುವುದರಿಂದ ಬೌಲರ್​ಗಳಿಗೆ ಹೆಚ್ಚು ಒತ್ತಡ ಉಂಟಾಗಲಿದೆ.

ಆದ್ದರಿಂದ, ಆಸ್ಟ್ರೇಲಿಯಾ ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಆಡಿದ್ದ ಮತ್ತು ಏಕದಿನ ತಂಡದ ಭಾಗವಾಗಿರುವ ಶಮಿಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನದಲ್ಲಿ ಉಮೇಶ್ ಯಾದವ್ ಅವರನ್ನು ಪ್ರಮುಖ ಬೌಲರ್​ ಆಗಿ ಮತ್ತು ಮೊಹಮ್ಮದ್ ಸಿರಾಜ್​ನನ್ನು ಎರಡನೇ ವೇಗಿಯಾಗಿ ಆಡಿಸಲಾಗಿತ್ತು. ಸಿರಾಜ್‌ಗೆ ಮೊದಲ ಮೂರು ಪಂದ್ಯಗಳಲ್ಲಿ ಕೇವಲ 24 ಓವರ್‌ಗಳನ್ನು ಹಾಕಿಸಲಾಗಿದೆ. ಸಿರಾಜ್​ಗೆ ಮಾರ್ಚ್ 17 ರಿಂದ 22 ರ ನಡುವಿನ ಎಲ್ಲ ಮೂರು ಏಕದಿನ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆಯಿದೆ. ಮುಂದಿನ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಆಸಿಸ್​ ಸೀರಿಸ್​ನಲ್ಲಿ 30 ಓವರ್​ ಮಾಡಿರುವ ಶಮಿ ಉಭಯ ತಂಡ ವೇಗದ ಬೌಲರ್​ಗಳಲ್ಲಿ ಉತ್ತಮ ಎಕಾನಮಿ ಹೊಂದಿದ್ದಾರೆ. ಮೊಟೆರಾದ ಒಣ ಮೇಲ್ಮೈ ಪಿಚ್​ನಲ್ಲಿ ಶಮಿಯ ಬೌಲಿಂಗ್​ ಹೆಚ್ಚು ಸ್ಕೂಪ್​ ಇರುವ ಕಾರಣ ಕಣಕ್ಕಿಳಿಯುವ ಸಾಧ್ಯತೆ ಇದೆ. ನರೇಂದ್ರ ಮೋದಿ ಕ್ರೀಡಾಂಗಣ ರಿವರ್ಸ್ ಸ್ವಿಂಗ್‌ಗೆ ಅನುಕೂಲಕರವಾಗಿರುವುದು ಶಮಿಗೆ ಹೆಚ್ಚು ವಿಕೆಟ್​ಗೆ ಪಡೆಯುವ ಸಾಧ್ಯತೆ ಇದೆ.

ಭಾರತ ಪ್ರಸ್ತುತ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಗೆದ್ದರೆ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ ಆಡಲಿದೆ, ಇಲ್ಲದಿದ್ದಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಣ ಟೆಸ್ಟ್​ ಸರಣಿಯ ಫಲಿತಾಂಶ ಭಾರತದ ಡಬ್ಲ್ಯೂಟಿಸಿ ಫೈನಲ್ ಭವಿಷ್ಯ ನಿರ್ಣಾಯಕವಾಗಲಿದೆ. ಇಂದೋರ್‌ನ ಹೋಳ್ಕರ್​ ಪಿಚ್​ನ್ನು "ಕಳಪೆ" ಟ್ರ್ಯಾಕ್ ಎಂದು ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್‌ ವರಿದಿ ನೀಡಿದ್ದಾರೆ. ಇದೀಗ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (GCA) ಪಿಚ್​ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಮೂರನೇ ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್​ ಶರ್ಮಾ ಭಾರತದಲ್ಲಿ ಸ್ಪಿನ್​ ಪಿಚ್​ನಲ್ಲಿ ಕ್ರಿಕೆಟ್​ ಆಡಲು ಹೆಚ್ಚು ಉತ್ಸುಕವಾಗಿರುತ್ತದೆ ಎಂದಿದ್ದಾರೆ. ಗುಜರಾತ್​ ಸ್ಟೇಡಿಯಂ ಯಾವ ರೀತಿ ವರ್ತಿಸಲಿದೆ ಎಂದು ಕಾದು ನೋಡಬೇಕಿದೆ.

"ಪಿಚ್​ ಇದೇ ರೀತಿ ಇರಬೇಕು ಎಂದು ಆಡಳಿತ ಮಂಡಳಿಯಿಂದ ಯಾವುದೇ ಆದೇಶ ಬಂದಿಲ್ಲ. ಯಾವಾಗಲೂ ಮಾಡುವ ರೀತಿಯ ಪಿಚ್​ ತಯಾರಿಸಿದ್ದೇವೆ. ಜನವರಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ರೈಲ್ವೇಸ್ ಮೊದಲು ಬ್ಯಾಟಿಂಗ್ 500 ಪ್ಲಸ್ (508) ಗಳಿಸಿತು ಮತ್ತು ಗುಜರಾತ್ ಸೋತಿದ್ದರೂ ಎರಡೂ ಇನ್ನಿಂಗ್ಸ್‌ಗಳಲ್ಲಿ 200 ಪ್ಲಸ್ ಗಳಿಸಿತ್ತು. ಬಿಸಿಸಿಐ ಪಿಚ್​ ಕ್ಯುರೇಟರ್‌ಗಳಾದ ತಪೋಶ್ ಚಟರ್ಜಿ ಮತ್ತು ಭೌಮಿಕ್ ಅವರು ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ನಾವು ಉತ್ತಮ ಟೆಸ್ಟ್​ ಪಿಚ್​ ಮಾಡುತ್ತೇವೆ" ಎಂದು ಮೈದಾನದ ಆಡಳಿತ ತಿಳಿಸಿದೆ.

ಇದನ್ನೂ ಓದಿ: ಹೋಳ್ಕರ್​ ಪಂದ್ಯ ಗೆಲುವಿನ ಕೀ ಅಂಶ ಹೇಳಿದ ಮಾಜಿ ಕ್ರಿಕೆಟಿಗ ಇಯಾನ್​ ಚಾಪೆಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.