ETV Bharat / sports

ಬಾಂಗ್ಲಾ ಬೌಲರ್​​ ಸಾಧನೆ: ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಕಬಳಿಸಿದ ಶಕೀಬ್​​​ ಅಲ್​ ಹಸನ್​ - ಬಾಂಗ್ಲಾ ಬೌಲರ್​​ ಸಾಧನೆ

ಐಸಿಸಿ ಟಿ-20 ವಿಶ್ವಕಪ್​​ ಟೂರ್ನಿಯಲ್ಲಿ ಬಾಂಗ್ಲಾದೇಶದ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಪಾಕ್​​ ಶಾಹಿದ್​ ಆಫ್ರಿದಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

Shakib
Shakib
author img

By

Published : Oct 25, 2021, 2:00 AM IST

ಶಾರ್ಜಾ: ಅರಬ್ ನಾಡು ದುಬೈನಲ್ಲಿ 7ನೇ ಆವೃತ್ತಿ ಐಸಿಸಿ ಟಿ-20 ವಿಶ್ವಕಪ್​ ಟೂರ್ನಿ ಆರಂಭಗೊಂಡಿದ್ದು, ಹೊಸ ಹೊಸ ದಾಖಲೆ ನಿರ್ಮಾಣಗೊಳ್ಳಲು ಆರಂಭಗೊಂಡಿವೆ. ಇದೀಗ ಬಾಂಗ್ಲಾದೇಶದ ಆಲ್​ರೌಂಡರ್ ಶಕೀಬ್​ ಅಲ್​ ಹಸನ್​​ ಹೊಸದೊಂದು ಸಾಧನೆ ನಿರ್ಮಿಸಿದ್ದಾರೆ.

ಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 2 ವಿಕೆಟ್​ ಪಡೆದುಕೊಳ್ಳುವ ಮೂಲಕ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್​ ಕಬಳಿಸಿದ ಬೌಲರ್​ ಆಗಿ ಹೊರಹೊಮ್ಮಿದ್ದಾರೆ.

2007ರಿಂದ 2021ರ ಅವಧಿಯಲ್ಲಿ ಒಟ್ಟು 29 ಪಂದ್ಯಗಳನ್ನಾಡಿರುವ ಶಕೀಬ್​ ಅಲ್​ ಹಸನ್​ 41 ವಿಕೆಟ್​ ಕಬಳಿಸಿದ್ದು, ಈ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ಗರಿಷ್ಠ ವಿಕೆಟ್​ ಪಡೆದ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಆಫ್ರಿದಿ 2007ರಿಂದ 2016ರವರೆಗೆ ಒಟ್ಟು 34 ಪಂದ್ಯಗಳಿಂದ 39 ವಿಕೆಟ್​ ಪಡೆದ ದಾಖಲೆ ಬರೆದಿದ್ದರು. ಇದೀಗ ಅವರ ಸಾಧನೆ ಅಳಿಸಿ ಹಾಕಿರುವ ಬಾಂಗ್ಲಾ ಆಲ್​ರೌಂಡರ್​​ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ಇದನ್ನೂ ಓದಿರಿ: ಮರುಕಳಿಸದ ಇತಿಹಾಸ: ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತಕ್ಕೆ ಮೊದಲ ಸೋಲು

ನಂತರದ ಸ್ಥಾನದಲ್ಲಿ ಶ್ರೀಲಂಕಾದ ಲಸಿತ ಮಾಲಿಂಗಾ ಇದ್ದು, 31 ಪಂದ್ಯಗಳಿಂದ 38 ವಿಕೆಟ್​ ಪಡೆದುಕೊಂಡಿದ್ದಾರೆ. ಈ ಸಾಧನೆ ಹೊರತಾಗಿ ಕೂಡ ಬಾಂಗ್ಲಾ ತಾನು ಆಡಿರುವ ಸೂಪರ್​​-12 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.