ಅಲ್ ಅಮೆರಾತ್(ಒಮನ್): ಭಾನುವಾರದಿಂದ ಟಿ-20 ವಿಶ್ವಕಪ್(ಕ್ವಾಲಿಫೈಯರ್) ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಬಾಂಗ್ಲಾದೇಶ ಅಚ್ಚರಿಯ ಸೋಲು ಕಂಡಿದೆ. ಆದರೆ, ಆಲ್ರೌಂಡರ್ ಶಕಿಬ್ ಅಲ್ ಹಸನ್ ಈ ಪಂದ್ಯದಲ್ಲಿ 2 ವಿಕೆಟ್ ಪಡೆಯುವ ಮೂಲಕ 20 ಓವರ್ಗಳ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದಾಖಲೆಗೆ ಪಾತ್ರರಾದರು.
ಭಾನುವಾರ ಅಲ್ ಅಮೆರಾತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ರಿಚಿ ಬೆರಿಂಗ್ಟನ್ ಮತ್ತು ಮೈಕಲ್ ಲೀಸ್ಕ್ ವಿಕೆಟ್ ಪಡೆದ ಶಕಿಬ್, ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ್ ಅವರನ್ನು ಹಿಂದಿಕ್ಕಿ ಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.
-
On 🔝 of the charts 📈
— ICC (@ICC) October 18, 2021 " class="align-text-top noRightClick twitterSection" data="
Well done, Shakib Al Hasan 👏#BANvSCO #T20WorldCup #Bangladesh pic.twitter.com/yVuAVaiWtg
">On 🔝 of the charts 📈
— ICC (@ICC) October 18, 2021
Well done, Shakib Al Hasan 👏#BANvSCO #T20WorldCup #Bangladesh pic.twitter.com/yVuAVaiWtgOn 🔝 of the charts 📈
— ICC (@ICC) October 18, 2021
Well done, Shakib Al Hasan 👏#BANvSCO #T20WorldCup #Bangladesh pic.twitter.com/yVuAVaiWtg
ಶಕಿಬ್ 89 ಪಂದ್ಯಗಳಿಂದ 108 ವಿಕೆಟ್ ಪಡೆದಿದ್ದರೆ, ಮಾಲಿಂಗ 83 ಪಂದ್ಯಗಳಿಂದ 107 ವಿಕೆಟ್ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ವೇಗಿ ಟಿಮ್ ಸೌಥಿ(99), ಪಾಕಿಸ್ತಾನದ ಶಾಹಿದ್ ಅಫ್ರಿದಿ (98 ) ಮತ್ತು ಅಫಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ (95 ವಿಕೆಟ್) ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಪರ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 63 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಂಟ್ಲೆಂಡ್, ಬಾಂಗ್ಲಾದೇಶಕ್ಕೆ 141 ರನ್ಗಳ ಗುರಿ ನೀಡಿತ್ತು. ಆದರೆ, 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತವಾದ ಮಹಮದುಲ್ಲಾ ಪಡೆ 6 ರನ್ಗಳ ಸೋಲು ಕಂಡಿತು.