ETV Bharat / sports

ಪಾಕ್​ನ ಶಾಹೀನ್​ ಅಫ್ರಿದಿ ಡೆಡ್ಲಿ ಯಾರ್ಕರ್​ಗೆ ಆಸ್ಪತ್ರೆ ಸೇರಿದ ಆಫ್ಘನ್​ ಬ್ಯಾಟರ್​: ವಿಡಿಯೋ ನೋಡಿ

author img

By

Published : Oct 19, 2022, 2:18 PM IST

Updated : Oct 20, 2022, 10:05 AM IST

ಶಾಹೀನ್​ ಅಫ್ರಿದಿ ಅದೆಷ್ಟು ಡೆಡ್ಲಿ ಬೌಲರ್​ ಅಂದ್ರೆ ಯಾರ್ಕರ್​ ಬೌಲ್​ ಎಸೆದು ಅಭ್ಯಾಸ ಪಂದ್ಯದಲ್ಲಿ ಆಫ್ಘನ್​ ಆಟಗಾರನನ್ನು ಗಾಯಗೊಳಿಸಿದ್ದಾರೆ. ಸ್ಕ್ಯಾನ್​ ಮಾಡಲು ಬ್ಯಾಟರ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

shaheen-shah-afridis-deadly-yorker
ಪಾಕ್​ನ ಶಾಹೀನ್​ ಆಫ್ರಿದಿ ಡೆಡ್ಲಿ ಯಾರ್ಕರ್

ಪಾಕಿಸ್ತಾನದ ಖತರ್ನಾಕ್​ ವೇಗಿ ಶಾಹೀನ್​ ಅಫ್ರಿದಿಯ ಯಾರ್ಕರ್​ ಎಸೆತ ಅಫ್ಘಾನಿಸ್ತಾನದ ಆಟಗಾರನನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಆಫ್ಘನ್​ ಮತ್ತು ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯದ ವೇಳೆ ಶಾಹೀನ್​ ಅಫ್ರಿದಿ ಎಸೆದ ಮಾರಕ ಯಾರ್ಕರ್​ನಿಂದ ಬ್ಯಾಟರ್​ ರೆಹಮಾನುಲ್ಲಾ ಗುರ್ಬಾಜ್​ ಕಾಲಿಗೆ ಪೆಟ್ಟು ಬಿದ್ದಿದೆ. ಇದರಿಂದ ಅವರು ಮೈದಾನದಿಂದ ನಿರ್ಗಮಿಸಿ ಚಿಕಿತ್ಸೆ ಪಡೆಯುವಂತಾಗಿದೆ.

ಏಷ್ಯಾಕಪ್​ಗೂ ಮೊದಲು ಮೊಣಕಾಲು ಗಾಯಕ್ಕೀಡಾಗಿದ್ದ ಪಾಕ್​ ವೇಗಿ ಶಾಹೀನ್​ ವಿಶ್ವಕಪ್​ಗೆ ಸಂಪೂರ್ಣ ಫಿಟ್​ ಆಗಿದ್ದಾರೆ. ಅಭ್ಯಾಸ ಪಂದ್ಯದ ಮೊದಲ ಓವರ್‌ನ ಐದನೇ ಎಸೆತದಲ್ಲಿ ಶಾಹೀನ್ ಅಫ್ರಿದಿ ಎಸೆದ ಯಾರ್ಕರ್​ ಅನ್ನು ಗುರುತಿಸುವಲ್ಲಿ ಎಡವಿದ ಆಫ್ಘನ್​ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್​ ಕಾಲಿಗೆ ಪೆಟ್ಟು ಮಾಡಿಕೊಂಡರು.

ಚೆಂಡು ಹಾರಿ ಬಂದು ಗುರ್ಬಾಜ್​ ಬೆರಳಿಗೆ ಬಲವಾಗಿ ಬಡಿದಿದೆ. ಇದರಿಂದ ಕ್ರಿಕೆಟಿಗ ಮೈದಾನದಲ್ಲೇ ನರಳಾಡಿದ್ದಾರೆ. ಪರೀಕ್ಷೆ ನಡೆಸಿದ ಫಿಸಿಯೋಗಳು ಗಾಯ ಉಲ್ಬಣಿಸುವ ಮುನ್ನವೇ ಮೈದಾನದಿಂದ ಹೊತ್ತುಕೊಂಡು ಕರೆದೊಯ್ದಿದ್ದಾರೆ.

ಗುರ್ಬಾಜ್ ಅವರ ಎಡಪಾದಕ್ಕೆ ಗಾಯವಾಗಿದ್ದು, ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಫ್ಘಾನಿಸ್ತಾನದ ಬ್ಯಾಟರ್​, ವಿಕೆಟ್​ಕೀಪರ್​ ಗುರ್ಬಾಜ್​ ಗಾಯಗೊಂಡಿರುವುದು ತಂಡದಲ್ಲಿ ಆತಂಕ ಉಂಟು ಮಾಡಿದೆ. ಇನ್ನು ಆಫ್ಘನ್​ ತಂಡ ಶನಿವಾರ ಪರ್ತ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಸೂಪರ್ 12 ಪಂದ್ಯ ಆಡಲಿದೆ.

ಗುರ್ಬಾಜ್​ ಗಾಯಗೊಂಡ ಬಳಿಕ ದಾಳಿ ನಿಲ್ಲಿಸದ ಶಾಹೀನ್​ ಅಫ್ರಿದಿ ಮತ್ತೊಂದು ಯಾರ್ಕರ್​ ಹಾಕಿ ಇನ್ನೊಬ್ಬ ಆಟಗಾರ ಝಜೈ ಸ್ಟಂಪ್​ ಉರುಳಿಸಿದರು. ಅಲ್ಲದೇ. 4 ಓವರ್​ಗಳಲ್ಲಿ ಮಾರಕ ಎಸೆತಗಳನ್ನು ಹಾಕಿದ್ದಾರೆ. ಇನ್ನು 23 ರಂದು ಪಾಕಿಸ್ತಾನ ಮತ್ತು ಭಾರತ ಸೂಪರ್​ 12 ಹಂತದ ಮೊದಲ ಪಂದ್ಯದಲ್ಲಿ ಎದುರಾಗಲಿವೆ.

ಓದಿ: ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್​ಶಿಪ್​: ಸಜನ್​ ಭನ್ವಾಲಾಗೆ ಐತಿಹಾಸಿಕ ಕಂಚಿನ ಪದಕ

Last Updated : Oct 20, 2022, 10:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.