ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನ ಮತ್ತು ಭಾರತದ ನಡುವೆ ಸೆಪ್ಟೆಂಬರ್ 2 ರಂದು ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದರು. ಪಾಕಿಸ್ತಾನದ ಬೌಲರ್ಗಳನ್ನು ಎದುರಿಸಲು ಹಿಂಜರಿದಂತೆ ಕಂಡರು. ಗಿಲ್ಗೆ ಇದು ಪಾಕ್ ವಿರುದ್ಧದ ಮೊದಲ ಪಂದ್ಯವಾಗಿತ್ತು, ಅಲ್ಲದೇ ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರ ಬೌಲಿಂಗ್ನ್ನು ಮೊದಲ ಬಾರಿಗೆ ಎದುರಿಸುತ್ತಿದ್ದರು. ಹೀಗಾಗಿ ಇವರನ್ನು ಎದುರಿಸಲು ಸ್ವಲ್ಪ ಕಷ್ಟ ಪಟ್ಟರು. 32 ಬಾಲ್ ಎದುರಿಸಿ 10 ರನ್ ಗಳಸಿದ ಗಿಲ್ಗೆ ಪಿಚ್ ಅರಿಯಲು ಸಾಧ್ಯವಾಗದೇ ವಿಕೆಟ್ ಕೊಟ್ಟರು.
"ನಾವು ಇತರ ಕೆಲವು ತಂಡಗಳ ವಿರುದ್ಧ ಆಡುವಷ್ಟು ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ. ಅವರ ಬೌಲಿಂಗ್ ದಾಳಿಯು ಸಾಕಷ್ಟು ಉತ್ತಮವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ನೀವು ಅಂತಹ ದಾಳಿಗಳ ವಿರುದ್ಧ ಆಗಾಗ್ಗೆ ಆಡದಿದ್ದರೆ ಅದು ಮುಖ್ಯ ಪಂದ್ಯಾವಳಿಗಳಲ್ಲಿ ಸ್ವಲ್ಪ ವ್ಯತ್ಯಾಸವನ್ನುಂಟುಮಾಡುತ್ತದೆ" ಎಂದು ಪಾಕ್ನ ತ್ರಿವಳಿ ವೇಗಿಗಳನ್ನು ಎದುರಿಸಲು ಅನುಭವದ ಸಮಸ್ಯೆಯ ಬಗ್ಗೆ ಗಿಲ್ ಹೇಳಿಕೊಂಡರು.
"ಖಂಡಿತವಾಗಿಯೂ ತರಬೇತಿಯು ಸಹಾಯ ಮಾಡಿದೆ. ನುವಾನ್ ಕಳೆದ 7-8 ವರ್ಷಗಳಿಂದ ನಮ್ಮೊಂದಿಗೆ ಪ್ರಯಾಣಿಸುತ್ತಿದ್ದಾರೆ. ನಮ್ಮಲ್ಲಿ ಬಲಗೈ ಸ್ಪೆಷಲಿಸ್ಟ್ ರಘು, ಸೈಡ್ ಆರ್ಮ್ ಸ್ಪೆಷಲಿಸ್ಟ್ ದಯಾನಂದ್ ಗರಾನಿ ಮತ್ತು ಎಡಗೈ ತಜ್ಞರು ಇದ್ದಾರೆ. ನೀವು ಆಡುವ ಯಾವುದೇ ಪರಿಸ್ಥಿತಿಯಲ್ಲಿ ಅಭ್ಯಾಸ ಸಹಾಯವಾಗುತ್ತದೆ," ಎಂದಿದ್ದಾರೆ.
ಪಾಕಿಸ್ತಾನದ ವೇಗದ ಬೌಲರ್‌ಗಳು ಏಕೆ ಅಂತಹ ಪ್ರಭಾವ ಬೀರುತ್ತಿದ್ದಾರೆ ಎಂದು ಗಿಲ್ ವಿವರಿಸಿದ್ದಾರೆ. "ಅವರು ವಿಭಿನ್ನ ವೇಗದ ಬೌಲರ್‌ಗಳು ಮತ್ತು ಅವರು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿದ್ದಾರೆ. ಶಾಹೀನ್ ಚೆಂಡನ್ನು ಹೆಚ್ಚು ಸ್ವಿಂಗ್ ಮಾಡುತ್ತಾರೆ. ನಸೀಮ್ ವೇಗವನ್ನು ಹೊಂದಿದ್ದಾರೆ, ಅವರಿಗೆ ಪಿಚ್ ಸಹಕಾರಿ ಆದರೆ ಇನ್ನಷ್ಟೂ ಪ್ರಭಾವ ಬೀರುತ್ತಾರೆ. ಅವರು ವಿಭಿನ್ನ ಪರಿಸ್ಥಿತಿಗಳಲ್ಲಿ ವಿಭಿನ್ನ ಸವಾಲುಗಳನ್ನು ಕೊಡುತ್ತಾರೆ" ಎಂದು ಗಿಲ್ ಹೇಳಿದರು.
"ರೋಹಿತ್ ಆರಂಭದಲ್ಲೇ ಬಾಲ್ಗಳನ್ನು ಸಿಕ್ಸ್ಗೆ ಕಳಿಸಲು ನೋಡುತ್ತಾರೆ ಮತ್ತು ನಾನು ಪವರ್ ಪ್ಲೇನಲ್ಲಿ ಆದಷ್ಟು ನೆಲದಲ್ಲೇ ಆಡಲು ಇಷ್ಟಪಡುತ್ತೇನೆ. ಆ ಸಂಯೋಜನೆಯು ನಮಗೆ ಚೆನ್ನಾಗಿ ಕೆಲಸ ಮಾಡುತ್ತದೆ. ನಾವಿಬ್ಬರೂ ಸ್ವಲ್ಪ ವಿಭಿನ್ನರು, ನಾವು ನಮ್ಮ ಹೊಡೆತಗಳನ್ನು ಮತ್ತು ಟ್ಯಾಕಲ್‌ಗಳ ಮೂಲಕ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಹೀಗಾಗಿ ನಮ್ಮನ್ನು ತಡೆಯಲು ಎದುರಾಳಿಗಳಿಗೆ ಸ್ವಲ್ಪ ಕಷ್ಟವಾಗುತ್ತದೆ" ಎಂದರು.
"ಇದು ಸೀನಿಯರ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ನನ್ನ ಮೊದಲ ಪಂದ್ಯವಾಗಿದ್ದರಿಂದ ಒತ್ತಡವು ಸ್ವಲ್ಪ ಭಿನ್ನವಾಗಿದೆ. ಆದರೆ ಯಾವುದೇ ಪಂದ್ಯವನ್ನು ಆಡಿದರೂ ಒತ್ತಡವು ಇದ್ದೇ ಇರುತ್ತದೆ. ಅದು ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್ ಅಥವಾ ಪಾಕಿಸ್ತಾನ, ಆದರೆ ನಾವು ಪಂದ್ಯವನ್ನು ಯಾವ ರೀತಿಯ ನೋಡುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ" ಎಂದಿದ್ದಾರೆ.
ಇದನ್ನೂ ಓದಿ: ಮೂವರು ಪ್ರಮುಖ ವೇಗಿಗಳೊಂದಿಗೆ ಪಾಕಿಸ್ತಾನ ಎದುರಿಸಿ.. ರಾಹುಲ್ಗಿಂತ ಕಿಶನ್ ಆಡಿಸುವುದು ಉಚಿತ: ಸಂಜಯ್ ಬಂಗಾರ ಸಲಹೆ