ಕಿಂಗ್ಸ್ಟನ್(ಜಮೈಕಾ): ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಗೆಲುವಿನ ಸನಿಹ ಬಂದಿದೆ. 2 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಕಳೆದುಕೊಂಡಿರುವ ಪಾಕಿಸ್ತಾನ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ 329ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 302 ರನ್ಗಳಿಸಿ ಡಿಕ್ಲೇರ್ ಘೋಷಿಸಿದ್ದ ಪಾಕಿಸ್ತಾನ, ವೆಸ್ಟ್ ಇಂಡೀಸ್ ತಂಡವನ್ನು ಕೇವಲ 150 ರನ್ಗಳಿಂದ ಆಲೌಟ್ ಮಾಡಿ 152 ರನ್ಗಳ ಮುನ್ನಡೆ ಸಾಧಿಸಿತ್ತು. ಮೊಹಮ್ಮದ್ ಅಬ್ಬಾಸ್ 44ಕ್ಕೆ3 ಶಹೀನ್ ಶಾ ಅಫ್ರಿದಿ 51ಕ್ಕೆ 6 ವಿಕೆಟ್ ಪಡೆದಿದ್ದರು.
152 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ವೇಗವಾಗಿ 6 ವಿಕೆಟ್ ಕಳೆದುಕೊಂಡು 176 ರನ್ಗಳಿಸಿ 4ನೇ ದಿನದಂತ್ಯಕ್ಕೆ ಒಂದು ಗಂಟೆ ಇರುವಾಗ ಡಿಕ್ಲೇರ್ ಘೋಷಿಸಿಕೊಂಡಿತು. ಒಟ್ಟಾರೆ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 130 ಓವರ್ಗಳಲ್ಲಿ 329 ರನ್ಗಳ ಗುರಿ ನೀಡಿತು.
ಇನ್ನು ಬೃಹತ್ ಗುರಿ ಪಡೆದ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ನಲ್ಲಿ ಈಗಾಗಲೇ 23 ರನ್ಗಳಿಸಿದ್ದ ಕೀರನ್ ಪೊವೆಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ನಾಯಕ ಕ್ರೈಗ್ ಬ್ರಾಥ್ವೇಟ್ ಅಜೇಯ 17 ರನ್ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಪ್ರಸ್ತುತ 49ಕ್ಕೆ 1ರನ್ಗಳಿಸಿದೆ. ಕೊನೆಯ ದಿನ ಪಂದ್ಯ ಗೆಲ್ಲಲು 90 ಓವರ್ಗಳಲ್ಲಿ ವೆಸ್ಟ್ ಇಂಡೀಸ್ 280 ರನ್ಗಳಿಸಬೇಕಿದೆ.
ಸಂಕ್ಷಿಪ್ತ ಸ್ಕೋರ್:
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 302/9 ಡಿಕ್ಲೇರ್: ಫವಾದ್ ಆಲಂ 124, ಬಾಬರ್ ಅಜಮ್ 75, ರೋಚ್ 68ಕ್ಕೆ3, ಜೇಡನ್ ಸೀಲ್ಸ್ 31ಕ್ಕೆ3
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 150ಕ್ಕೆ ಆಲೌಟ್: ಎನ್ಕ್ರುಮಾ ಬೋನರ್ 37, ಬ್ಲಾಕ್ವುಡ್ 33, ಶಹೀನ್ ಅಫ್ರಿದಿ 51ಕ್ಕೆ 6, ಮೊಹಮ್ಮದ್ ಅಬ್ಬಾಸ್ 44ಕ್ಕೆ 3
ಪಾಕಿಸ್ತಾನ 2ನೇ ಇನ್ನಿಂಗ್ಸ್ನಲ್ಲಿ 176ಕ್ಕೆ6 ಡಿಕ್ಲೇರ್: ಇಮ್ರಾನ್ ಬಟ್ 37, ಬಾಬರ್ ಅಜಮ್ 33, ಅಬಿದ್ ಅಲಿ 29, ಹೋಲ್ಡರ್ 27ಕ್ಕೆ2, ಅಲ್ಜಾರಿ ಜೋಸೆಫ್ 24ಕ್ಕೆ2
ವೆಸ್ಟ್ ಇಂಡೀಸ್ 49ಕ್ಕೆ1: ಕೀರನ್ ಪೋವೆಲ್ 23, ಕ್ರೈಗ್ ಬ್ರಾಥ್ವೇಟ್ 17*
ಇದನ್ನು ಓದಿ:ಅವಕಾಶಕ್ಕಾಗಿ 11 ವರ್ಷ ಕಾದಿದ್ದ ಕ್ರಿಕೆಟಿಗ... ಈಗ ವೇಗವಾಗಿ 5 ಶತಕ ಸಿಡಿಸಿದ ಏಷ್ಯಾ ಬ್ಯಾಟ್ಸ್ಮನ್