ಮುಂಬೈ : ಭಾರತದ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಶೆಫಾಲಿ ವರ್ಮಾ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಘೋಷಿಸಿರುವ ಮೂರು ಮಾದರಿಯಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮಹಿಳಾ ತಂಡ ಇಂಗ್ಲೆಂಡ್ನಲ್ಲಿ ಒಂದು ಟೆಸ್ಟ್, ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಕಳೆದುಕೊಂಡಿರುವುದರಿಂದ ಈ ಬಾರಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಟಿ20 ಕ್ರಿಕೆಟ್ನಲ್ಲಿ ನಂಬರ್ ಒನ್ ಆಗಿರುವ ಶೆಫಾಲಿ ವರ್ಮಾ ಇದೀಗ ಏಕದಿನ ಮತ್ತು ಟೆಸ್ಟ್ ತಂಡದಲ್ಲೂ ಅವಕಾಶಗಿಟ್ಟಿಸಿಕೊಂಡಿದ್ದಾರೆ. ಇವರ ಜೊತೆಗೆ ಶಿಖಾ ಪಾಂಡೆ ಮತ್ತು ತನಿಯಾ ಭಾಟಿಯಾ ಕೂಡ ತಂಡಕ್ಕೆ ಮರಳಿದ್ದಾರೆ.
ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಅನುಭವಿ ಮಿಥಾಲಿ ರಾಜ್ ನಾಯಕಿಯಾಗಿದ್ದಾರೆ. ಟಿ20 ತಂಡವನ್ನು ಹರ್ಮನ್ ಪ್ರೀತ್ ಕೌರ್ ಅವರು ಮುನ್ನಡೆಸಲಿದ್ದಾರೆ.
ಟೆಸ್ಟ್ ಮತ್ತು ಏಕದಿನ ತಂಡ : ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಮ್ ರಾವುತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ಸ್ನೇಹಾ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್) , ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್.
ಟಿ20 ತಂಡ : ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ(ಉಪನಾಯಕಿ), ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸ್ನೇಹಾ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಶಿಖಾ ಪಾಂಡೆ , ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್, ಸಿಮ್ರಾನ್ ದಿಲ್ ಬಹದ್ದೂರ್
ಇದನ್ನು ಓದಿ:ಮಂದಾನ, ಕೌರ್ ಜೊತೆಗೆ ಬಿಗ್ಬ್ಯಾಶ್ನಲ್ಲಿ ಆಡಲಿದ್ದಾರೆ ಶೆಫಾಲಿ ವರ್ಮಾ