ETV Bharat / sports

Shafali Varma: ಚೊಚ್ಚಲ ಟೆಸ್ಟ್​​ ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದ 17ರ ಪೋರಿ! - ಭಾರತ ಮಹಿಳಾ ತಂಡ

ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​​ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡದ ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

Shafali Varma
Shafali Varma
author img

By

Published : Jun 18, 2021, 9:32 PM IST

ಬ್ರಿಸ್ಟೋಲ್​​(ಇಂಗ್ಲೆಂಡ್​): ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಸೆಹ್ವಾಗ್​ ಎಂದು ಖ್ಯಾತರಾಗಿರುವ 17 ವರ್ಷದ ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಚೊಚ್ಚಲ ಟೆಸ್ಟ್​​ ಪಂದ್ಯದಲ್ಲೇ ಮತ್ತೊಂದು ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್​​ನಲ್ಲಿ 96ರನ್​ಗಳಿಕೆ ಮಾಡಿದ್ದ ವರ್ಮಾ ಎರಡನೇ ಇನ್ನಿಂಗ್ಸ್​​ನಲ್ಲೂ ಅರ್ಧಶತಕ ಸಿಡಿಸುವ ಮೂಲಕ ಇನ್ನೊಂದು ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಹೌದು, ಇಂಗ್ಲೆಂಡ್​ ವಿರುದ್ಧ ಏಕೈಕ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲೂ ಅರ್ಧಶತಕ ಗಳಿಕೆ ಮಾಡಿರುವ ಶೆಫಾಲಿ ವರ್ಮಾ, ಈ ದಾಖಲೆ ಬರೆದಿರುವ ಅತಿ ಕಡಿಮೆ ವಯಸ್ಸಿನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡೆಬ್ಯು ಟೆಸ್ಟ್​​ ಪಂದ್ಯದ ಎರಡು ಇನ್ನಿಂಗ್ಸ್​​ಗಳಲ್ಲಿ ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅರ್ಧಶತಕ (96, 55*)ಗಳಿಕೆ ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಜೆಸ್ಸಿಕಾ ಲೂಯಿಸ್ ಜೊನಾಸ್ಸೆನ್ ಇಂಗ್ಲೆಂಡ್​ ವಿರುದ್ಧದ ಡೆಬ್ಯು ಟೆಸ್ಟ್​ನ ಎರಡು ಇನ್ನಿಂಗ್ಸ್​ಗಳಲ್ಲೂ ಅರ್ಧಶತಕ ಗಳಿಕೆ ಮಾಡಿದ್ದರು.

ಇದನ್ನೂ ಓದಿರಿ: ಶಹಬ್ಬಾಸ್ ಶೆಫಾಲಿ! ಚೊಚ್ಚಲ ಟೆಸ್ಟ್ ಪಂದ್ಯದಲ್ಲೆ ದಾಖಲೆ ಬರೆದ 17ರ ಪೋರಿ!

ಮಹಿಳಾ ಟೆಸ್ಟ್​ ಕ್ರಿಕೆಟ್​​ನಲ್ಲಿ ಶೆಫಾಲಿ ವರ್ಮಾ ಹೊರತುಪಡಿಸಿ ಆಸ್ಟ್ರೇಲಿಯಾದ ಜೊನಾಸ್ಸೆನ್, ಶ್ರೀಲಂಕಾದ ವನೆಸ್ಸಾ ಬೋವೆನ್​, ಇಂಗ್ಲೆಂಡ್​ನ ಲೆಸ್ಲೆ ಕುಕ್​ ಹಾಗೂ ಮತ್ತೆ ಇಬ್ಬರು ಮಹಿಳಾ ಕ್ರಿಕೆಟರ್ಸ್​ ಟೆಸ್ಟ್​ನ ಪದಾರ್ಪಣೆ ಪಂದ್ಯದ ಎರಡು ಇನ್ನಿಂಗ್ಸ್​​ಗಳಲ್ಲಿ ಅರ್ಧಶತಕ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್​​​ ಪಂದ್ಯ ಇದಾಗಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ 231ರನ್​ಗಳಿಗೆ ಆಲೌಟ್​ ಆಗಿ 165ರನ್​ಗಳ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ತಂಡ 396ರನ್​ಗಳಿಕೆ ಮಾಡಿದೆ.

ಫಾಲೋಆನ್​​ನೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಭಾರತೀಯ ತಂಡ ಮೊದಲ ವಿಕೆಟ್​ ಕಳೆದುಕೊಂಡು 83ರನ್​ಗಳಿಕೆ ಮಾಡಿದ್ದು, ಈಗಲೂ 82ರನ್​ಗಳ ಹಿನ್ನಡೆಯಲ್ಲಿದೆ. ಮೈದಾನದಲ್ಲಿ 55ರನ್​ಗಳಿಕೆ ಮಾಡಿರುವ ಶೆಫಾಲಿ ಹಾಗೂ 18 ರನ್​ಗಳಿಸಿರುವ ದೀಫ್ತಿ ಶರ್ಮಾ ಇದ್ದಾರೆ. 8ರನ್​ಗಳಿಕೆ ಮಾಡಿ ಸ್ಮೃತಿ ಮಂದಾನಾ ವಿಕೆಟ್​ ಒಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.