ETV Bharat / sports

U19 ವಿಶ್ವಕಪ್ ವೇಳೆ ಭಾರತದ ಯುವಕರು ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟ ಟೀಮ್ ಮ್ಯಾನೇಜರ್

author img

By

Published : Feb 22, 2022, 9:58 PM IST

ವಿಶ್ವಕಪ್​ಗಾಗಿ ಕೆರಿಬಿಯನ್​ ನಾಡಿನಲ್ಲಿ ಕಾಲಿಟ್ಟ ದಿನದಿನವೇ ಮೊದಲು ವ್ಯಾಕ್ಸಿನೇಷನ ಹಾಕಿಸಿಕೊಂಡಿಲ್ಲ ಎನ್ನುವ ಕಾರಣದಿಂದ ವಿಶ್ವಕಪ್ ಎತ್ತಿ ಹಿಡಿಯಲು ಪ್ರಮುಖ ಪಾತ್ರವಹಿಸಿದ್ದ ಎಡಗೈ ವೇಗಿ ರವಿಕುಮಾರ್​, ಆರಂಭಿಕ ಅಂಗ್​ಕ್ರಿಶ್​ ರಘುವಂಶಿ ಸೇರಿದಂತೆ 7 ಭಾರತೀಯ ಆಟಗಾರರನ್ನು ವಿಮಾನ ಏರಲು ​ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಅವಕಾಶ ಕೊಟ್ಟಿರಲಿಲ್ಲ ಎಂದು ತೆನ್ಸಿಂಗ್​​ ಹೇಳಿದ್ದಾರೆ.

U-19 players
ಅಂಡರ್​ 19 ವಿಶ್ವಕಪ್​

ನವದೆಹಲಿ: ಭಾರತ ತಂಡದ ಕೆರಿಬಿಯನ್ ನಾಡಿನಲ್ಲಿ 2022ರ ಅಂಡರ್ 19 ವಿಶ್ವಕಪ್ ​ಗೆಲ್ಲುವ ಮೂಲಕ ದಾಖಲೆಯ 5ನೇ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ಪಯಣದಲ್ಲಿ ಭಾರತ ತಂಡದ ಯುವ ಪಡೆ ಮತ್ತು ಸಿಬ್ಬಂದಿ ಎದುರಿಸಿದ ಯಾತನೆಯನ್ನು ತಂಡದ ವ್ಯವಸ್ಥಾಪಕರಾಗಿದ್ದ ಸಿಕ್ಕೀಂ ಕ್ರಿಕೆಟ್​ ಅಸೋಸಿಯೇಷನ್ ಮುಖ್ಯಸ್ಥ ಲೋಬ್ಜಾಂಗ್ ಜಿ. ತೆನ್ಸಿಂಗ್ ಬಿಚ್ಚಿಟ್ಟಿದ್ದಾರೆ.

ವಿಶ್ವಕಪ್​ಗಾಗಿ ಕೆರಿಬಿಯನ್​ ನಾಡಿನಲ್ಲಿ ಕಾಲಿಟ್ಟ ದಿನದಿನವೇ ಮೊದಲು ವ್ಯಾಕ್ಸಿನೇಷನ ಹಾಕಿಸಿಕೊಂಡಿಲ್ಲ ಎನ್ನುವ ಕಾರಣದಿಂದ ವಿಶ್ವಕಪ್ ಎತ್ತಿ ಹಿಡಿಯಲು ಪ್ರಮುಖ ಪಾತ್ರವಹಿಸಿದ್ದ ಎಡಗೈ ವೇಗಿ ರವಿಕುಮಾರ್​, ಆರಂಭಿಕ ಅಂಗ್​ಕ್ರಿಶ್​ ರಘುವಂಶಿ ಸೇರಿದಂತೆ 7 ಭಾರತೀಯ ಆಟಗಾರರನ್ನು ವಿಮಾನ ಏರಲು ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಅವಕಾಶ ಕೊಟ್ಟಿರಲಿಲ್ಲ. ನಂತರ ಐಸಿಸಿ, ಬಿಸಿಸಿಐ ಹಾಗೂ ಟ್ರೆನಿಡಾಡ್​ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಇತ್ಯರ್ಥ ಮಾಡಿತು ಎಂದು ತೆನ್ಸಿಂಗ್​​ ಹೇಳಿದ್ದಾರೆ.

ನಾವು ಪೋರ್ಟ್​ ಆಫ್​ ಸ್ಪೇನ್ ತಲುಪಿದಾಗ ಚಾರ್ಟೆಡ್​ ವಿಮಾನದಲ್ಲಿ ಗಯಾನಗೆ ತೆರಳಬೇಕಿತ್ತು. ಆದರೆ 7 ಆಟಗಾರರು ಕೋವಿಡ್ ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ತಡೆಹಿಡಿದರು, ನಮ್ಮ ದೇಶದಲ್ಲಿ ಇನ್ನೂ ಈ ವರ್ಗದವರಿಗೆ ಲಸಿಕೆ ನೀಡುತ್ತಿಲ್ಲ ಎಂದರೂ ಅವರು ಕೇಳದೆ, ಮುಂದಿನ ವಿಮಾನದಲ್ಲಿ ವಾಪಸ್​ ತೆರಳುವಂತೆ ಸೂಚಿಸಿದರು. ಆದರೆ ನಾವು ಅಲ್ಲೇ ಹತ್ತಿರದ ಹೋಟೆಲ್​ನಲ್ಲಿ ತಂಗಿದ್ದು, ಐಸಿಸಿ, ಸ್ಥಳೀಯ ಸರ್ಕಾರದ ನೆರವಿನಿಂದ ಸಮಸ್ಯೆಯನ್ನು ಬಗೆಹರಿಸಿಕೊಂಡೆವು ಎಂದು ಸಿಕ್ಕೀಂ ಕ್ರಿಕೆಟ್​ ಅಸೋಸಿಯೇಷನ್ ಮುಖ್ಯಸ್ಥ ಪಿಟಿಐಗೆ ತಿಳಿಸಿದ್ದಾರೆ.

ಕೋವಿಡ್​ 19 ಪಾಸಿಟಿವ್​​.. ಆರಂಭದ ಸಮಸ್ಯೆಯನ್ನು ಹೇಗೋ ನಿವಾರಿಸಿಕೊಂಡು ಹೋದ ತಂಡಕ್ಕೆ ಮೊದಲ ಪಂದ್ಯದ ಬಳಿಕ ಕೋವಿಡ್​ 19 ವಕ್ಕರಿಸಿತು. ನಾಯಕ ಯಶ್​ ಧುಲ್, ಉಪನಾಯಕ ಶೇಕ್ ರಶೀದ್​ ಸೇರಿ 6 ಆಟಗಾರರು ಸೋಂಕಿಗೆ ತುತ್ತಾದರು. ಇದು ತಂಡದ ಎಸ್​ಎಲ್ಒ ರವೀಂದ್ರನ್​ ಅವರಿಂದ ತಂಡಕ್ಕೆಲ್ಲಾ ಹರಡಿಕೊಂಡಿತ್ತು. ಆದರೆ 2 ಲೀಗ್​ ಪಂದ್ಯಗಳಿಂದ ಹೊರ ಉಳಿದಿದ್ದ ಎಲ್ಲಾ ಆಟಗಾರರನ್ನು ಸೇರಿ ಆಡಿ ಭಾರತ ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆದುಕೊಂಡೆವು.

ಕೆರಿಬಿಯನ್​ ಬಯೋಬಬಲ್ ಒಂದು ಜೋಕ್​.. ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಐಸಿಸಿ ಕೆರಿಬಿಯನ್​ ನಲ್ಲಿ ಇಂತಹ ದೊಡ್ಡ ಇವೆಂಟ್​ ನಡೆಸುವುದು ಒಂದು ದೊಡ್ಡ ಸವಾಲು. ಅಂಡರ್​ 19 ಅಂತಹ ವಿಶ್ವಕಪ್​ ಅಂತಹ ಟೂರ್ನಿ ನಡೆಸಲು ಅದು ಒಳ್ಳೆಯ ಸ್ಥಳ ಅಲ್ಲವೆಂದು ತೆನ್ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ನಾಕೌಟ್​ ಪಂದ್ಯಗಳನ್ನಾಡಿದ ಆಂಟಿಗುವಾದಲ್ಲಿ ಅತ್ಯಂತ ಆರಾಮದಾಯಕವಾದ ವಾಸ್ತವ್ಯವನ್ನು ಹೊಂದಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು ಆಡುವ ಮೊದಲು ಅವರು ಗಯಾನಾದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗಿತ್ತು. ನಾನು ಮತ್ತು ನನ್ನ ಸಹಪಾಠಿಗಳು ಕೋವಿಡ್​ಗೆ ತುತ್ತಾದಾಗ ಅಲ್ಲಿ ವೈದ್ಯಕೀಯ ಸೌಲಭ್ಯ, ಔಷಧಗಳು ಮತ್ತು ವೈದ್ಯರು ಸಹ ಇರಲಿಲ್ಲ. ನಮ್ಮ ಪಿಸಿಯೋ ನಮ್ಮನ್ನು ರಕ್ಷಿಸಿದರು. ಇದೊಂದು ವ್ಯವಸ್ಥೆಯ ವೈಫಲ್ಯ ಎಂದು ಅವರು ಜರಿದಿದ್ದಾರೆ.

ನೀರು, ಆಹಾರದ ಸಮಸ್ಯೆ.. ನಾವಿದ್ದ ಹೋಟೆಲ್​ನಲ್ಲಿ ಆಟಗಾರರಿಗಾಗಿ ಪ್ರತ್ಯೇಖ ಮಹಡಿಗಳಿರಲಿಲ್ಲ. ಹೋಟೆಲ್​ಗೆ ಬರುವ ಅಥಿತಿಗಳನ್ನು ಅದೇ ಮಹಡಿಯಲ್ಲಿ ಇರಿಸಲಾಗುತ್ತಿತ್ತು. ಐಸೊಲೇಷನ್​ ಸಂದರ್ಭದಲ್ಲಿ ಯಾರು ಇರುತ್ತಿರಲಿಲ್ಲ. ರೂಮ್​ಗಳಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇರಲಿಲ್ಲ. ಆಟಗಾರರು ಕೆಲವು ಸಂದರ್ಭದಲ್ಲಿ ಆಹಾರದ ಸಮಸ್ಯೆಯನ್ನು ಅನುಭವಿಸಿದ್ದರು. ಅದೃಷ್ಟವಶಾತ್​ ಕೆಲವು ಭಾರತದ ರೆಸ್ಟೋರೆಂಟ್​ಗಳು ನಮಗೆ ನೆರವಾದವು ಎಂದು ತೆನ್ಸಿಂಗ್ ಹೇಳಿಕೊಂಡಿದ್ದಾರೆ.

ಬಯೋಬಬಲ್ ವ್ಯವಸ್ಥೆಯ ಬಗ್ಗೆ ಮಾತನಾಡಿ, ಅಭ್ಯಾಸ ಪಂದ್ಯದ ವೇಳೆ ವಾಶ್​ರೂಮ್​ಗಳಲ್ಲಿ ನೀರು ಇರುತ್ತಿರಲಿಲ್ಲ. ಭಾರತದಲ್ಲಿ ದೊಮೆಸ್ಟಿಕ್​ ಕ್ರಿಕೆಟ್​ ಆಯೋಜಿಸಲು ರಾಜ್ಯ ಕ್ರಿಕೆಟ್​ ಬೋರ್ಡ್​ ಮತ್ತು ಬಿಸಿಸಿಐ ಅತ್ಯುತ್ತಮ ಬಯೋಬಬಲ್​ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಿವೆ ಎಂದು ನಾನು ದೈರ್ಯವಾಗಿ ಹೇಳಬಲ್ಲೆ ಎಂದು ಕೆರಿಬಿಯನ್ ನಾಡಿನ ಅವ್ಯವಸ್ಥೆಯ ಬಗ್ಗೆ ತೆನ್ಸಿಂಗ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 11 ವರ್ಷದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂ. ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕೆ ಎಲ್ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.