ದುಬೈ: 2021ರ ಟಿ20 ವಿಶ್ವಕಪ್ ಯುಎಇಯ ಮತ್ತು ಒಮಾನ್ನಲ್ಲಿ ನಡೆಯುತ್ತಿದ್ದು, 16 ತಂಡಗಳು 8 ಭಾಗವಹಿಸಿದ್ದು, ಎಲ್ಲಾ ತಂಡಗಳು ಕಲರ್ಫುಲ್ ಜರ್ಸಿಯಲ್ಲಿ ಮಿಂಚುತ್ತಿವೆ. ಆದರೆ ಸ್ಕಾಟ್ಲೆಂಡ್ ಜರ್ಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಏಕೆಂದರೆ ಅದನ್ನು ವಿನ್ಯಾಸ ಮಾಡಿದ್ದು ಕೇವಲ 12 ವರ್ಷದ ಬಾಲಕಿ.
ಟಿ20 ವಿಶ್ವಕಪ್ನಲ್ಲಿ ಸ್ಕಾಟ್ಲೆಂಡ್ ತಂಡದ ಜರ್ಸಿ ವಿನ್ಯಾಸಗೊಳಿಸಲು ಕ್ರಿಕೆಟ್ ಬೋರ್ಡ್ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ 12 ವರ್ಷದ ಬಾಲಕಿ ರೆಬೆಕ್ಕಾ ಡೌನಿ ವಿನ್ಯಾಸಗೊಳಿಸಿದ್ದ ಸ್ಕಾಟ್ಲೆಂಡ್ ರಾಷ್ಟ್ರಧ್ವಜದ ಬಣ್ಣಗಳನ್ನು ಒಳಗೊಂಡ ಜರ್ಸಿಯನ್ನು ತಂಡ ಸರ್ವಾನುಮತದಿಂದ ಆಯ್ಕೆ ಮಾಡಿತ್ತು.
-
Scotland's kit designer 👇
— Cricket Scotland (@CricketScotland) October 19, 2021 " class="align-text-top noRightClick twitterSection" data="
12 year-old Rebecca Downie from Haddington 👋
She was following our first game on TV, proudly sporting the shirt she designed herself 👏
Thank you again Rebecca!#FollowScotland 🏴 | #PurpleLids 🟣 pic.twitter.com/dXZhf5CvFD
">Scotland's kit designer 👇
— Cricket Scotland (@CricketScotland) October 19, 2021
12 year-old Rebecca Downie from Haddington 👋
She was following our first game on TV, proudly sporting the shirt she designed herself 👏
Thank you again Rebecca!#FollowScotland 🏴 | #PurpleLids 🟣 pic.twitter.com/dXZhf5CvFDScotland's kit designer 👇
— Cricket Scotland (@CricketScotland) October 19, 2021
12 year-old Rebecca Downie from Haddington 👋
She was following our first game on TV, proudly sporting the shirt she designed herself 👏
Thank you again Rebecca!#FollowScotland 🏴 | #PurpleLids 🟣 pic.twitter.com/dXZhf5CvFD
ನಾನು ಸ್ಪರ್ಧೆಯಲ್ಲಿ ಗೆದ್ದಿದ್ದೇನೆ ಎಂದು ತಿಳಿದಾಗ ತುಂಬಾ ಉತ್ಸುಕಳಾಗಿದ್ದೆ. ಅದು ನನಗೆ ನಂಬಲು ಸಾಧ್ಯವಾಗಿರಲಿಲ್ಲ. ನೈಜವಾಗಿ ನಾನು ವಿನ್ಯಾಸಗೊಳಿಸಿದ ಶರ್ಟ್ ನೋಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಅದು ನೋಡಲು ಅದ್ಭುತವಾಗಿದೆ ಎಂದು ಡೌನೀ ಸಂತಸ ವ್ಯಕ್ತಪಡಿಸಿದರು.
ನಾನು ಈ ಜರ್ಸಿಯನ್ನು ನಮ್ಮ ತಂಡ ವಿಶ್ವಕಪ್ನಲ್ಲಿ ಆಡುವಾಗ ತೊಟ್ಟು, ಅವರನ್ನು ಹುರಿದುಂಬಿಸುತ್ತೇನೆ ಎಂದು ಡೌನಿ ಹೇಳಿಕೊಂಡಿದ್ದರು. ಭಾನುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಪಂದ್ಯದ ವೇಳೆ ಅದನ್ನು ತೊಟ್ಟು ಸಂಭ್ರಮಿಸಿದ್ದರು.
ಈ ಫೋಟೋವನ್ನು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಉತ್ತಮ ಜರ್ಸಿ ಡಿಸೈನ್ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಿದೆ.
ಇದನ್ನು ಓದಿ:ಸ್ಫೋಟಕ ಆಲ್ರೌಂಡರ್ಗೆ ಗಾಯ: ವಿಶ್ವಕಪ್ಗೆ ಮುನ್ನವೇ ಇಂಗ್ಲೆಂಡ್ಗೆ ಆಘಾತ