ನವದೆಹಲಿ : ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ಕಾನ್ಪುರ್ದ ಗ್ರೀನ್ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್ ಕಿವೀಸ್ ಆಟಗಾರರನ್ನ ಕೊಂಡಾಡಿದ್ದಾರೆ.
-
Hats off to the two Kiwis of Indian origin Rachin Ravindra & @AjazP for resisting our bowlers for 9 overs to save the Test. And nightwatchman Will Somerville whose surviving 110 balls earlier proved vital. India must make changes to do better in the Mumbai Test.
— Shashi Tharoor (@ShashiTharoor) November 29, 2021 " class="align-text-top noRightClick twitterSection" data="
">Hats off to the two Kiwis of Indian origin Rachin Ravindra & @AjazP for resisting our bowlers for 9 overs to save the Test. And nightwatchman Will Somerville whose surviving 110 balls earlier proved vital. India must make changes to do better in the Mumbai Test.
— Shashi Tharoor (@ShashiTharoor) November 29, 2021Hats off to the two Kiwis of Indian origin Rachin Ravindra & @AjazP for resisting our bowlers for 9 overs to save the Test. And nightwatchman Will Somerville whose surviving 110 balls earlier proved vital. India must make changes to do better in the Mumbai Test.
— Shashi Tharoor (@ShashiTharoor) November 29, 2021
ಟ್ವಿಟರ್ನಲ್ಲಿ ಈ ವಿಷಯ ಬರೆದುಕೊಂಡಿರುವ ಶಶಿ ತರೂರ್, ಭಾರತ ವಿರುದ್ಧದ ಟೆಸ್ಟ್ ಪಂದ್ಯ ಉಳಿಸಿಕೊಳ್ಳಲು ಕೊನೆಯ 9 ಓವರ್ಗಳವರೆಗೆ ನಮ್ಮ ಬೌಲರ್ಗಳಿಗೆ ಪ್ರತಿರೋಧವೊಡ್ಡಿದ ಭಾರತ ಮೂಲದ ಇಬ್ಬರು ನ್ಯೂಜಿಲ್ಯಾಂಡ್ ಆಟಗಾರರಾದ ರಚಿನ್ ರವೀಂದ್ರ ಹಾಗೂ ಅಜಾಜ್ ಪಟೇಲ್ಗೆ ಹ್ಯಾಟ್ಸ್ಆಫ್.
ನೈಟ್ ವಾಚ್ಮ್ಯಾನ್ ಆಗಿ ಬಂದಿದ್ದ ವಿಲ್ ಸೋಮ್ರ್ವಿಲೆ ಕೂಡ 110 ಎಸೆತ ಎದುರಿಸಿರುವುದು ಇಲ್ಲಿ ಪ್ರಮುಖವಾಗಿತ್ತು. ಮುಂಬೈ ಟೆಸ್ಟ್ಗಾಗಿ ಟೀಂ ಇಂಡಿಯಾ ಕೆಲವೊಂದು ಬದಲಾವಣೆ ಮಾಡುವುದು ಅಗತ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಉತ್ತರಾಖಂಡ: ಮದ್ಯಪಾನ, ತಂಬಾಕು ವ್ಯಸನಿಗಳಾಗ್ತಿದ್ದಾರೆ ಮಹಿಳೆಯರು
ಕೊನೆಯ ವಿಕೆಟ್ಗೆ ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್ 52 ಎಸೆತಗಳನ್ನೆದುರಿಸಿ ಭಾರತದ ಗೆಲುವಿಗೆ ಮುಳ್ಳಾದರು. ರವೀಂದ್ರ 91 ಎಸೆತಗಳಲ್ಲಿ ಅಜೇಯ 18 ರನ್ಗಳಿಸಿದರೆ ಪಟೇಲ್ 23 ಎಸೆತಗಳಲ್ಲಿ ಅಜೇಯ 2 ರನ್ಗಳಿಸಿ ನ್ಯೂಜಿಲ್ಯಾಂಡ್ ಸೋಲು ತಪ್ಪಿಸಿದರು.
ಇಂದು ಬೆಳಗ್ಗೆ ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಸಂಸದ ಶಶಿ ತರೂರ್ ಅದನ್ನ ಟ್ವಿಟರ್ನಲ್ಲಿ ಹಾಕಿ ಅದಕ್ಕೊಂದು ಶೀರ್ಷಿಕೆ ನೀಡಿ ಟೀಕೆಗೊಳಗಾಗಿದ್ದರು. ಇದರ ಬೆನ್ನಲ್ಲೇ ಕ್ಷಮೆಯಾಚನೆ ಸಹ ಮಾಡಿದ್ದರು.