ETV Bharat / sports

Watch: ಸಂಜು ಸ್ಯಾಮ್ಸನ್​​ ಅದ್ಭುತ ಕ್ಯಾಚ್​.. ಎಲ್ಲರ ಗಮನ ಸೆಳೆದ ವಿಕೆಟ್​ ಕೀಪರ್​​! - ಸ್ಯಾಮ್ಸನ್​ ಕ್ಯಾಚ್​

ವಿಕೆಟ್​ ಕೀಪಿಂಗ್​ನಲ್ಲಿ ಚಾಣಾಕ್ಷ್ಯತೆ ಮೆರೆದಿರುವ ರಾಜಸ್ಥಾನ ರಾಯಲ್ಸ್​ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​ ಅದ್ಭುತ ಕ್ಯಾಚ್​ ಪಡೆದುಕೊಳ್ಳುವ ಮೂಲಕ ಶಿಖರ್​ ಧವನ್​ ಅವರನ್ನು ಔಟ್​ ಮಾಡಿದ್ದಾರೆ.

Sanju Samson
Sanju Samson
author img

By

Published : Apr 15, 2021, 10:13 PM IST

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಕ್ಯಾಪ್ಟನ್​, ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​ ಅದ್ಭುತ ಕ್ಯಾಚ್​ ಹಿಡಿದುಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಡೆಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಎಡಗೈ ಬ್ಯಾಟ್ಸ್​ಮನ್​ ಶಿಖರ್​ ಧವನ್​​ ಕ್ಯಾಚ್​ ಪಡೆದುಕೊಂಡಿರುವ ಸಂಜು ಸ್ಯಾಮ್ಸನ್​​ ತಮ್ಮ ವಿಕೆಟ್​ ಕೀಪಿಂಗ್​ ಕೌಶಲ್ಯ ಪ್ರದರ್ಶಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಧವನ್​ ಇಂದಿನ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್​ ನಡೆಸುವ ಉದ್ದೇಶದಿಂದ ಕಣಕ್ಕಿಳಿದಿದ್ದರು. 9ರನ್​ಗಳಿಕೆ ಮಾಡಿದ್ದ ವೇಳೆ ಉನಾದ್ಕತ್​ ಓವರ್​​ನಲ್ಲಿ ಬೌಂಡರಿ ಸಿಡಿಸುವ ಉದ್ದೇಶದಿಂದ ಸ್ಕೂಪ್ ಶಾಟ್​ ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ, ಅದ್ಭುತವಾಗಿ ಬಲ ಬದಿಯತ್ತ ಡೈವ್ ಹೊಡೆದ ಸ್ಯಾಮ್ಸನ್​​ ಕ್ಯಾಚ್​ ಪಡೆದುಕೊಂಡಿದ್ದಾರೆ.

ಇನ್ನು ಅರ್ಧಶತಕ ಸಿಡಿಸಿ ಬ್ಯಾಟಿಂಗ್​ ಮಾಡ್ತಿದ್ದ ಡೆಲ್ಲಿ ಕ್ಯಾಪ್ಟನ್​ ರಿಷಭ್​ ಪಂತ್​ ಅವ​ರನ್ನ ರನೌಟ್​ ಮೂಲಕ ಯುವ ಪ್ಲೇಯರ್​​ ರಿಯಾನ್​ ಪರಾಗ್ ಪೆವಿಲಿಯನ್​ ಹಾದಿ ತೋರಿಸಿದರು. 51ರನ್​ಗಳಿಕೆ ಮಾಡಿದ್ದ ವೇಳೆ ಒಂಟಿ ರನ್​ ಕದಿಯಲು ಯತ್ನಸಿದ ಪಂತ್​ರನ್ನ ಚುರುಕಿನ ಫೀಲ್ಡಿಂಗ್​ ಮೂಲಕ ಪರಾಗ್​ ಔಟ್ ಮಾಡಿದರು.

ಮುಂಬೈನ ವಾಖೆಂಡೆ ಮೈದಾನದಲ್ಲಿ ರಾಜಸ್ಥಾನ-ಡೆಲ್ಲಿ ನಡುವೆ ಐಪಿಎಲ್​ನ 6ನೇ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್​ ನಡೆಸಿರುವ ಡೆಲ್ಲಿ ನಿಗದಿತ 20 ಓವರ್​ಗಳಲ್ಲಿ 8ವಿಕೆಟ್ ಕಳೆದುಕೊಂಡು 147ರನ್​ಗಳಿಕೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.