ಭರವಸೆಯ ಯುವ ಕ್ರಿಕೆಟರ್ ಸಂಜು ಸ್ಯಾಮ್ಸನ್ರನ್ನು ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಏಕದಿನ ಪಂದ್ಯದಿಂದ ಕೈಬಿಟ್ಟಿದ್ದು ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ನಾಯಕ ಶಿಖರ್ ಧವನ್ ಮತ್ತು ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮವಾಗಿ ಆಡುತ್ತಿದ್ದರೂ ಸ್ಯಾಮ್ಸನ್ರನ್ನು ಕೈಬಿಟ್ಟಿದ್ದರ ವಿರುದ್ಧ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿ ಬ್ಯಾನರ್ ಹಾಕಿ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಿವೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧವನ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಅಬ್ಬರದ ನಡುವೆಯೂ ಸ್ಯಾಮ್ಸನ್ 36 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಪಂದ್ಯದಲ್ಲಿ ಭಾರತ ಬೌಲಿಂಗ್ ವೈಫಲ್ಯದಿಂದಾಗಿ ಹೀನಾಯ ಸೋಲು ಕಂಡಿತ್ತು.
-
Sanju Samson fans at #FIFAWorldCup. pic.twitter.com/JxwCLUnVgs
— Johns. (@CricCrazyJohns) November 27, 2022 " class="align-text-top noRightClick twitterSection" data="
">Sanju Samson fans at #FIFAWorldCup. pic.twitter.com/JxwCLUnVgs
— Johns. (@CricCrazyJohns) November 27, 2022Sanju Samson fans at #FIFAWorldCup. pic.twitter.com/JxwCLUnVgs
— Johns. (@CricCrazyJohns) November 27, 2022
2ನೇ ಪಂದ್ಯದಲ್ಲಿ ಹೆಚ್ಚುವರಿ ಬೌಲರ್ಗಾಗಿ ಆಲ್ರೌಂಡರ್ ದೀಪಕ್ ಹೂಡಾಗೆ ಅವಕಾಶ ನೀಡಿ ಸಂಜು ಸ್ಯಾಮ್ಸನ್ರನ್ನು ಕೈಬಿಡಲಾಯಿತು. ಈ ನಿರ್ಧಾರ ಭಾರಿ ಟೀಕೆಗೆ ಗುರಿಯಾಗಿತ್ತು. ಬೌಲಿಂಗ್ ಬಲಪಡಿಸುವ ಬದಲಾಗಿ ಬ್ಯಾಟಿಂಗ್ ಲಯದಲ್ಲಿರುವ ಸ್ಯಾಮ್ಸನ್ ಅವರನ್ನು ಬೆಂಚ್ ಕಾಯಿಸಿದ್ದು, ಅಭಿಮಾನಿಗಳನ್ನು ಕೆರಳಿಸಿತ್ತು.
ಅರಬ್ ರಾಷ್ಟ್ರ ಕತಾರ್ನಲ್ಲಿ ಚಾಲ್ತಿಯಲ್ಲಿರುವ ಫಿಫಾ ವಿಶ್ವಕಪ್ನ ಪಂದ್ಯವೊಂದರಲ್ಲಿ ಅಭಿಮಾನಿಗಳು ಸಂಜು ಸ್ಯಾಮ್ಸನ್ ಫೋಟೋವುಳ್ಳ ಬ್ಯಾನರ್ ಅಳವಡಿಸಿ "ಯಾರೇ ಕೈಬಿಟ್ಟಿರೂ ನಾವು ನಿಮ್ಮೊಂದಿಗಿದ್ದೇವೆ" ಎಂಬ ಘೋಷವಾಕ್ಯದ ಮೂಲಕ ಬೆಂಬಲ ನೀಡಿದ್ದಾರೆ. ಇದನ್ನು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಐಪಿಎಲ್‌ನಲ್ಲಿ ಸ್ಯಾಮ್ಸನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಟಿ20 ಸರಣಿ ವೇಳೆಯೂ ತಂಡದಲ್ಲಿದ್ದ ಸಂಜು ಆಡುವ ಹನ್ನೊಂದರಲ್ಲಿ ಅವಕಾಶ ಪಡೆದಿರಲಿಲ್ಲ. ಈಗ ಏಕದಿನದಿಂದಲೂ ಕೊಕ್ ನೀಡಲಾಗಿದೆ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 7 ಸಿಕ್ಸರ್ ಸಿಡಿಸಿ ಋತುರಾಜ್ ಗಾಯಕ್ವಾಡ್ ವಿಶ್ವದಾಖಲೆ