ETV Bharat / sports

21 ವರ್ಷಗಳ ನಂತರ ಕನಸು ನನಸಾಗಿಸಿಕೊಂಡ ಸಂಜು ಸ್ಯಾಮ್ಸನ್​​ - ETV Bharath Kannada news

7 ವರ್ಷದ ಆಸೆ ಈಡೇರಿಸಿಕೊಂಡ ಸಂಜು ಸ್ಯಾಮ್ಸನ್​ - ರಜಿನಿಕಾಂತ್​ ಜೊತೆಗಿನ ಫೋಟೋ ಹಂಚಿಕೊಂಡ ಕ್ರಿಕೆಟರ್​

Sanju Samson meet Rajinikanth share pitcher in twitter
21 ವರ್ಷಗಳ ನಂತರ ಕನಸು ನನಸಾಗಿಸಿಕೊಂಡ ಸಂಜು ಸ್ಯಾಮ್ಸನ್​​
author img

By

Published : Mar 13, 2023, 8:01 PM IST

ಕ್ರಿಕೆಟ್​ನಲ್ಲಿ ಅದ್ಭುತ ಕೌಶಲ್ಯ ಹೊಂದಿರುವ ಯುವ ಪ್ರತಿಭೆ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಅವಕಾಶ ಸಿಕ್ಕರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಈ ನಡುವೆ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗುವ ಮೂಲಕ ಬಾಲ್ಯದ ಕನಸಿನ್ನು ಈಡೇರಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮಿಳ್​ ಸೂಪರ್​ ಸ್ಟಾರ್​​ ರಜಿನಿಕಾಂತ್​ ಅವರನ್ನು ​ನಿನ್ನೆ ಭೇಟಿಯಾಗಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಕ್ರಿಕೆಟಿಗ ನನ್ನ ಬಹು ದಿನಗಳ ಆಸೆ ಈಡೇರಿದೆ, 7 ವರ್ಷದವನಾಗಿದ್ದಾಗ ಕಂಡಿದ್ದ ಕನಸು ಇಂದು ಈಡೇರಿದೆ ಎಂದಿದ್ದಾರೆ . 21 ವರ್ಷ ಕಾದು ಕನಸನ್ನು ನನಸಾಗಿಸಿಕೊಂಡ ಸಂತೋಷವನ್ನು ಹಂಚಿಕೊಂಡಿದ್ದಾರೆ.

  • At the age of 7 already being a Super Rajni fan,,I told my parents ..See one day I will go and meet Rajni sir in his house…
    After 21 years,that day has come when The Thalaivar invited me..☺️🙏🏽 pic.twitter.com/FzuWWqJkif

    — Sanju Samson (@IamSanjuSamson) March 12, 2023 " class="align-text-top noRightClick twitterSection" data=" ">

7 ವರ್ಷ ಇದ್ದಾಗ ಸಂಜು ಸ್ಯಾಮ್ಸನ್ ಪೋಷಕರಲ್ಲಿ ತಾನು ತಲೈವಾ ರಜಿನಿಕಾಂತ್​ರನ್ನು ಭೇಟಿಯಾಗುವುದಾಗಿ ಹೇಳಿಕೊಂಡಿದ್ದರಂತೆ. ಆದರೆ, ಆಗ ಸಣ್ಣ ಮಕ್ಕಳ ಮಾತಿನಂತೆ ಪೋಷಕರು ಭಾವಿಸಿದ್ದರು. ಈಗ ಸಂಜು ಪೊಷಕರಿಗೆ ಹೇಳಿದ ರೀತಿಯಲ್ಲೇ ತಮ್ಮ ಮಾತನ್ನು ಸಾಧಿಸಿದ್ದಾರೆ. ರಜಿನಿಕಾಂತ್​ ಅವರನ್ನು ಅವರ ಮನೆಯಲ್ಲಿಯೇ ಭೇಟಿಯಾಗಿದ್ದಾರೆ. ಟ್ವಿಟರ್​ನಲ್ಲಿ ಸಂಜು ಸ್ಯಾಮ್ಸನ್​ "7 ನೇ ವಯಸ್ಸಿನಲ್ಲಿ ಈಗಾಗಲೇ ಸೂಪರ್ ರಜನಿ ಅಭಿಮಾನಿ,, ನಾನು ನನ್ನ ಪೋಷಕರಿಗೆ ಹೇಳಿದೆ ..ನೋಡಿ ಒಂದು ದಿನ ನಾನು ಹೋಗಿ ರಜನಿ ಸರ್ ಅವರ ಮನೆಗೆ ಹೋಗುತ್ತೇನೆ... 21 ವರ್ಷಗಳ ನಂತರ ತಲೈವಾ ಅವರು ನನ್ನನ್ನು ಆಹ್ವಾನಿಸಿದರು. ಆ ದಿನ ಬಂದಿದೆ.." ಎಂದು ಬರೆದು ಕೊಂಡಿದ್ದಾರೆ.

ಸಂಜು ಸ್ಯಾಮ್ಸನ್​​ ಆಸೆ ತಿಳಿದ ತಲೈವ ತಮ್ಮ ಮನೆಗೆ ಬರುವಂತೆ ಆಹ್ವಾನ ಕಳುಹಿಸಿದ್ದಾರೆ. ಇದರೊಂದಿಗೆ ತಲೈವಾ ಕರೆ ಸ್ವೀಕರಿಸಿದಾಗ ಸಂಜು ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಏಕೆಂದರೆ ಅವರ 21 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ನಿನ್ನೆ (ಮಾರ್ಚ್​ 12) ಚೆನ್ನೈನಲ್ಲಿರುವ ಸೂಪರ್ ಸ್ಟಾರ್ ನಿವಾಸಕ್ಕೆ ಭೇಟಿಕೊಟ್ಟಿದ್ದಾರೆ. ಅಲ್ಲಿ ರಜನಿ ಸ್ಯಾಮ್ಸನ್ ಅವರೊಂದಿಗೆ ಕೆಲಕಾಲ ಮಾತನಾಡಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸ್ವತಃ ಸಂಜು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಕೇರಳದಲ್ಲಿ ಜನಿಸಿದ ಸಂಜು ಸ್ಯಾಮ್ಸನ್ ರಜನಿಕಾಂತ್ ಅವರನ್ನು ಬಾಲ್ಯದಿಂದಲೂ ತುಂಬಾ ಇಷ್ಟ. ಈ ವಿಷಯವನ್ನು ಸ್ವತಃ ಸಂಜು ಅವರೇ ಈ ಹಿಂದೆ ಹಲವು ಬಾರಿ ಮಾಧ್ಯಮಗಳಿಗೆ ಹೇಳಿದ್ದರು. ಕರೋನಾ ಲಾಕ್‌ಡೌನ್ ಸಮಯದಲ್ಲಿಯೂ ಸಹ, ಸಂಜು ಅವರು ಬಹಳಷ್ಟು ಧ್ಯಾನ ಮಾಡುತ್ತಿದ್ದರು. ಪುಸ್ತಕಗಳನ್ನು ಓದುತ್ತಿದ್ದರು. ಹೆಚ್ಚಾಗಿ ರಜನಿಕಾಂತ್ ಅವರ ಹಳೆಯ ಚಲನಚಿತ್ರಗಳು ಮತ್ತು ಮಲಯಾಳಂ ಚಲನಚಿತ್ರಗಳನ್ನು ವೀಕ್ಷಿಸಿದ್ದಾಗಿ ಹೇಳಿಕೊಂಡಿದ್ದರು.

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಯಾಮ್ಸನ್ ರಾಜಸ್ಥಾನ ತಂಡದ ನಾಯಕರಾಗಿರುತ್ತಾರೆ. ಅವರ ನಾಯಕತ್ವದಲ್ಲಿ, ರಾಜಸ್ಥಾನ ತಂಡ ಕಳೆದ ವರ್ಷ ಐಪಿಎಲ್ ಋತುವಿನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತ್ತು. ಅಂತಾರಾಷ್ಟ್ರೀಯ ಸ್ಟಾರ್ ಆಟಗಾರರನ್ನು ಹೊಂದಿರುವ ಈ ತಂಡ ಏಪ್ರಿಲ್ 2 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: ಟಾಸ್​ ಗೆದ್ದ ಡೆಲ್ಲಿ ಕ್ಷೇತ್ರ ರಕ್ಷಣೆ ಆಯ್ಕೆ: ಸೋಲಿನ ಸುಳಿಯಿಂದ ಹೊರ ಬರುತ್ತಾ ಆರ್​ಸಿಬಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.