ETV Bharat / sports

ಶ್ರೀಲಂಕಾ ಕ್ರಿಕೆಟ್‌ ತಂಡದ ವಿರುದ್ಧ ಜಯಸೂರ್ಯ ಕಿಡಿನುಡಿ: ಕಾರಣ ಇಲ್ಲಿದೆ..

ನಾಳೆಯಿಂದ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ತಂಡ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇದು ಮುಗಿದ ನಂತರ ಜುಲೈ 13 ರಿಂದ ಭಾರತದ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಗಳು ನಿಗದಿಯಾಗಿವೆ.

author img

By

Published : Jun 28, 2021, 12:33 PM IST

Sanath Jayasuriya on Twitter: We need immediate measures to save Sri Lanka cricket
ಜಯಸೂರ್ಯ ಕಿಡಿ

ಹೈದರಾಬಾದ್: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನದ ಬಗ್ಗೆ ಟ್ವೀಟ್​ ಮೂಲಕ ಚಾಟಿ ಬೀಸಿದ್ದಾರೆ. ಇತ್ತೀಚೆಗೆ ಲಂಕಾ ತಂಡ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರ ಬಗೆಗೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

  • Very sad day for Sri Lankan cricket. The situation is critical. We need immediate measures to save cricket

    — Sanath Jayasuriya (@Sanath07) June 27, 2021 " class="align-text-top noRightClick twitterSection" data=" ">

ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಆಂಗ್ಲ ಪಡೆ ಲಂಕಾ ತಂಡವನ್ನು 3-0 ಅಂತರದಿಂದ ಕ್ಲೀನ್​ ಸ್ವೀಪ್​ ಮಾಡಿತ್ತು. ಈ ಪಂದ್ಯಗಳಲ್ಲಿ ಲಂಕಾ ತಂಡ 130 ರನ್‌ಗಳ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಇದು ಜಯಸೂರ್ಯ ಕೋಪಕ್ಕೆ ಗುರಿಯಾಗಿದೆ.

“ಶ್ರೀಲಂಕಾ ಕ್ರಿಕೆಟ್‌ಗೆ ಬಹಳ ದುಃಖದ ದಿನಗಳು. ಈಗಿನ ಪರಿಸ್ಥಿತಿ ಕಠಿಣವಾಗಿದೆ. ಕ್ರಿಕೆಟ್ ಉಳಿಸಲು ನಮಗೆ ತಕ್ಷಣದ ಕ್ರಮಗಳು ಬೇಕಾಗುತ್ತವೆ” ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕಳೆದ ತಿಂಗಳು ಬಾಂಗ್ಲಾ ವಿರುದ್ಧ ಶ್ರೀಲಂಕಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2ರಿಂದ ಕಳೆದುಕೊಂಡಿತ್ತು. ನಾಳೆಯಿಂದ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು ಇದು ಮುಗಿದ ನಂತರ, ಜುಲೈ 13 ರಿಂದ ಭಾರತ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಯಾಡಲಿದೆ.

ಇದನ್ನೂ ಓದಿ : England vs Sri Lanka T-20: ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಇಂಗ್ಲೆಂಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.