ETV Bharat / sports

ಸಹಾ Vs ಕಾರ್ತಿಕ್: ಒಬ್ಬರ ಆಯ್ಕೆ ಇನ್ನೊಬ್ಬರ ಕಡೆಗಣನೆ ಬಗ್ಗೆ 'ಈಟಿವಿ ಭಾರತ್​' ಜೊತೆ ಮಾಜಿ ಆಟಗಾರರ ಮಾತು - ಭಾರತ ತಂಡದಿಂದ ಬ್ಯಾಟರ್​ ವೃದ್ಧಿಮಾನ್ ಸಹಾ ಕಡೆಗಣನೆ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ಉತ್ತಮ ಪ್ರದರ್ಶನ ತೋರಿರುವ ಕಾರ್ತಿಕ್ ಭಾರತದ ಟಿ - 20 ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದು, ಇನ್ನೊಂದೆಡೆ ಸಹಾ ಅವರನ್ನು ಟೆಸ್ಟ್​ ತಂಡದಿಂದ ಕಡೆಗಣಿಸಲಾಗಿದೆ.

Saha vs Karthik: Vengsarkar points to finishing skills, Raja Venkat calls it selectors' 'double standards'
ಸಹಾ Vs ಕಾರ್ತಿಕ್: ಒಬ್ಬರ ಆಯ್ಕೆ ಇನ್ನೊಬ್ಬರ ಕಡೆಗಣನೆ ಬಗ್ಗೆ 'ಈಟಿವಿ ಭಾರತ್​' ಜೊತೆ ಮಾಜಿ ಆಟಗಾರರ ಮಾತು
author img

By

Published : May 27, 2022, 7:48 PM IST

ಕೋಲ್ಕತ್ತಾ: ಕ್ರಿಕೆಟ್​​ ಅನ್ನೋದು ಅನಿಶ್ಚಿತತೆಯ ಆಟ, ಅಲ್ಲಿ ಹಲವು ಬಾರಿ ಆಟಗಾರರ ವಯಸ್ಸಿಗಿಂತಲೂ ಪ್ರದರ್ಶನವೇ ಅವರ ವೃತ್ತಿಜೀವನದ ಏರಿಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಮ್ಮೆ 36 - 37ರ ಹರೆಯದಲ್ಲೂ ಆಟದ ವೈಖರಿ, ಸ್ಥಿರತೆಯಿಂದ ಅತಿಯಾದ ಸ್ಪರ್ಧೆಯ ನಡುವೆಯೂ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ, ಕೆಲವೊಮ್ಮೆ ಸಾಧ್ಯವಾಗದಿರಬಹುದು. ಇದೀಗ ಭಾರತದಲ್ಲಿ ಹಿರಿಯ ವಿಕೆಟ್​ ಕೀಪರ್​ ಬ್ಯಾಟರ್​ ವೃದ್ಧಿಮಾನ್ ಸಹಾ ಕಡೆಗಣನೆ ಹಾಗೂ ದಿನೇಶ್ ಕಾರ್ತಿಕ್ ಕಮ್​ಬ್ಯಾಕ್​ ಬಗ್ಗೆ ಚರ್ಚೆ ಶುರುವಾಗಿದೆ.

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ಉತ್ತಮ ಪ್ರದರ್ಶನ ತೋರಿರುವ ಕಾರ್ತಿಕ್ (15 ಪಂದ್ಯಗಳಿಂದ 324 ರನ್‌) 25ನೇ ಸ್ಥಾನದಲ್ಲಿದ್ದರೆ, ಸಹಾ 10 ಪಂದ್ಯಗಳಲ್ಲಿ 312 ಗಳಿಸಿದ್ದಾರೆ. ಕಾರ್ತಿಕ್ ಅವರನ್ನು ಮುಂಬರುವ ಟಿ - 20 ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಇನ್ನೊಂದೆಡೆ ಸಹಾ ಅವರನ್ನು ಟೆಸ್ಟ್​ ತಂಡದಿಂದ ಕಡೆಗಣಿಸಲಾಗಿದೆ.

ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ 'ಆಯ್ಕೆಗಾರರ ​​ಆಲೋಚನೆ ಬಗ್ಗೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಪ್ರಸ್ತುತ ಫಾರ್ಮ್‌ ಪರಿಗಣಿಸಿ ಆರಿಸಿರಬಹುದು. ಕಾರ್ತಿಕ್​ ಉತ್ತಮ ಫಿನಿಶರ್ ಆಗಿರಬೇಕು ಎಂದು ತಿಳಿಸಿದ್ದಾರೆ. 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮತ್ತು ಕೆಎಲ್ ರಾಹುಲ್ ಅವರೊಂದಿಗೆ, 5 ಅಥವಾ 6ನೇ ಕ್ರಮಾಂಕದಲ್ಲಿ ಫಿನಿಶರ್‌ಗಾಗಿ ಆಯ್ಕೆಗಾರರು ಹುಡುಕಿರಬಹುದು. ಅದು ಕಾರ್ತಿಕ್ ಸೇರ್ಪಡೆಗೆ ಕಾರಣ ಇರಬಹುದು. ಕಾರ್ತಿಕ್ ಈ ಹಿಂದೆ​ ಎಂಎಸ್ ಧೋನಿಯ ಪಾತ್ರವನ್ನು ನಿರ್ವಹಿಸಬಹುದು ಎಂಬುದು ವೆಂಗ್‌ಸರ್ಕರ್ ಮಾತಾಗಿದೆ.

ಸಹಾ ಕೈಬಿಡುವ ನಿರ್ಧಾರ ಪ್ರತ್ಯೇಕ ಮಾನದಂಡದಂತಿದೆ: ಮತ್ತೊಬ್ಬ ಆಯ್ಕೆಗಾರ ರಾಜಾ ವೆಂಕಟ್ ಮಾತನಾಡಿ, ಟಿ - 20 ತಂಡಕ್ಕೆ ಕಾರ್ತಿಕ್ ಸೇರ್ಪಡೆ ಮತ್ತು ಸಹಾ ಅವರನ್ನು ದೀರ್ಘ ಆವೃತ್ತಿಯಿಂದ ಕೈಬಿಡುವ ನಿರ್ಧಾರವು ಪ್ರತ್ಯೇಕ ಮಾನದಂಡಂತಿದೆ ಎಂದಿದ್ದಾರೆ. ಸಹಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವೆಂಕಟ್, ಅವರನ್ನು ದೇಶದ ಅತ್ಯುತ್ತಮ ವಿಕೆಟ್ ಕೀಪರ್ ಎಂದಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ಉತ್ತಮ ಪ್ರದರ್ಶನ ನೀಡಿದ್ದಾರೆ. ಜನರು ಅವರ ಬ್ಯಾಟಿಂಗ್‌ನತ್ತ ಬೆರಳು ಮಾಡುತ್ತಾರೆ. ಆದರೆ, ಸಹಾ ಬ್ಯಾಟಿಂಗ್ ಸರಾಸರಿ 30ಕ್ಕಿಂತ ಹೆಚ್ಚಿದೆ. ಭಾರತಕ್ಕಾಗಿ ಆಡಿದ ಕೊನೆಯ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ್ದರು. ಆದರೆ, ಆಯ್ಕೆ ಮಾಡುವಾಗ ಬೇರೆ ಬೇರೆ ಆಟಗಾರರಿಗೆ ವಿಭಿನ್ನ ನಿಯಮಗಳಿದ್ದಂತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ರಿಷಬ್ ಪಂತ್​ಗೆ ಟೆಸ್ಟ್‌ನಲ್ಲಿ ಸಹಾಗಿಂತ ಹೆಚ್ಚಿನ ಆದ್ಯತೆ ನೀಡುವುದಕ್ಕೆ ಮಾಜಿ ಆಯ್ಕೆಗಾರ ವೆಂಕಟ್​​ ಸಹಮತ ವ್ಯಕ್ತಪಡಿಸಿಲ್ಲ. 'ರಿಷಭ್ ಭಾರತಕ್ಕಾಗಿ ಒಂದು ಅಥವಾ ಎರಡು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ, ಅವರು ಸಂಪೂರ್ಣವಾಗಿ ಅಸಮಂಜಸರಾಗಿದ್ದಾರೆ. ನನ್ನ ದೃಷ್ಟಿಯಲ್ಲಿ, ಸಹಾ ಮೊದಲ ಆಯ್ಕೆಯ ಕೀಪರ್ ಆಗಿರಬೇಕು ಮತ್ತು ರಿಷಭ್ ಯುವಕರಾಗಿದ್ದರಿಂದ ಇನ್ನಷ್ಟು ಸಮಯ ಕಾಯಬಹುದಿತ್ತು.

ಪಂತ್​ ವಿಕೆಟ್ ಕೀಪಿಂಗ್ ಸುಧಾರಣೆಗೆ ಸಮಯ ನೀಡಬೇಕು ಮತ್ತು ಬ್ಯಾಟಿಂಗ್ ಕೌಶಲ್ಯ ಮತ್ತು ಹೆಚ್ಚು ಸ್ಥಿರತೆ ಬಗ್ಗೆ ಗಮನ ಹರಿಸಬೇಕು. ಬಳಿಕ ಅವರು ತಂಡಕ್ಕೆ ಪುನರಾಗಮನ ಮಾಡಬಹುದು' ಎಂದು ವೆಂಕಟ್ ಈಟಿವಿ ಭಾರತ್‌ಕ್ಕೆ ತಿಳಿಸಿದರು. ಫಿಟ್‌ನೆಸ್‌ ವಿಚಾರದಲ್ಲಿ ಸಹಾ 37 ವರ್ಷ ವಯಸ್ಸಿನಲ್ಲೂ ಕೂಡ ದೈಹಿಕವಾಗಿ ಪರಿಪೂರ್ಣ ಆಯ್ಕೆಗಳಲ್ಲಿ ಒಬ್ಬರು ಎಂದು ಮಾಜಿ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಈ ಸಲ ಕಪ್ ಆರ್​ಸಿಬಿಯದ್ದೇ'.. ಭವಿಷ್ಯ ನುಡಿದ ಹರ್ಭಜನ್ ಸಿಂಗ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.