ಮುಂಬೈ (ಮಹಾರಾಷ್ಟ್ರ): ನನ್ನ ತವರು ಮೈದಾನದಲ್ಲಿ ಬಂದ ಈ ಪ್ರದರ್ಶನ ನನಗೆ ಕೇಕ್ ಮೇಲೆ ಐಸ್ಕ್ರೀಮ್ ಹಾಕಿ ಕೊಟ್ಟಷ್ಟು ಸಂತಸ ತಂದಿದೆ ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯ ಶತಕದ ಬಗ್ಗೆ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದಾರೆ.
2023ರ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಕಾದಾಡುತ್ತಿವೆ. ನಡೆಯುತ್ತಿರುವ ವಿಶ್ವಕಪ್ನ ರಾಯಭಾರಿ ಆಗಿರುವ ಸಚಿನ್ ತಮ್ಮ ತವರು ಮೈದಾನದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆ ಮುರಿದಿದ್ದಾರೆ. ಇದನ್ನು ಸ್ವತಃ ಸಚಿನ್ ಕಣ್ತುಂಬಿಕೊಂಡಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿಯ ಆಟಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
-
The first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.
— Sachin Tendulkar (@sachin_rt) November 15, 2023 " class="align-text-top noRightClick twitterSection" data="
I… pic.twitter.com/KcdoPwgzkX
">The first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.
— Sachin Tendulkar (@sachin_rt) November 15, 2023
I… pic.twitter.com/KcdoPwgzkXThe first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.
— Sachin Tendulkar (@sachin_rt) November 15, 2023
I… pic.twitter.com/KcdoPwgzkX
ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ನ 50ನೇ ಶತಕವನ್ನು ದಾಖಲಿಸಿದರು. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕ ಗಳಿಸಿದ ಮೈಲಿಗಲ್ಲು ಸ್ಥಾಪಿಸಿದ್ದರು. ಇದನ್ನು ವಿರಾಟ್ ದಾಟಿದ್ದಾರೆ. ಅಲ್ಲದೇ ಒಂದು ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಮೈಲಿಗಲ್ಲನ್ನು ಸಚಿನ್ ಮಾಡಿದ್ದರು. 2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿದ್ದ 673 ರನ್ ಗಳಿಸಿದ್ದು ಅತಿ ಹೆಚ್ಚಿನ ರನ್ ಆಗಿತ್ತು. ಪ್ರಸ್ತುತ ವಿರಾಟ್ ಇದನ್ನು ದಾಟಿದ್ದಲ್ಲದೇ 711* ರನ್ ಗಳಿಸಿದ್ದಾರೆ. ವಿಶ್ವಕಪ್ನಲ್ಲಿ ಭಾರತಕ್ಕೆ ಇನ್ನೂ ಒಂದು ಪಂದ್ಯ ಆಡುವ ಅವಕಾಶ ಇದ್ದು, ವಿರಾಟ್ ಈ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಇದೆ.
-
Well played Virat.
— Sachin Tendulkar (@sachin_rt) November 5, 2023 " class="align-text-top noRightClick twitterSection" data="
It took me 365 days to go from 49 to 50 earlier this year. I hope you go from 49 to 50 and break my record in the next few days.
Congratulations!!#INDvSA pic.twitter.com/PVe4iXfGFk
">Well played Virat.
— Sachin Tendulkar (@sachin_rt) November 5, 2023
It took me 365 days to go from 49 to 50 earlier this year. I hope you go from 49 to 50 and break my record in the next few days.
Congratulations!!#INDvSA pic.twitter.com/PVe4iXfGFkWell played Virat.
— Sachin Tendulkar (@sachin_rt) November 5, 2023
It took me 365 days to go from 49 to 50 earlier this year. I hope you go from 49 to 50 and break my record in the next few days.
Congratulations!!#INDvSA pic.twitter.com/PVe4iXfGFk
ಕ್ರಿಕೆಟ್ ದೇವರಿಂದ ಮೆಚ್ಚುಗೆ: ವಿರಾಟ್ ಶತಕವನ್ನು ಮೈದಾನದಲ್ಲೇ ನೋಡಿದ ಸಚಿನ್, ಇನ್ನಿಂಗ್ಸ್ ಮುಗಿದ ನಂತರ ಕೊಹ್ಲಿಯನ್ನು ಭೇಟಿ ಆಗಿ ಶುಭಾಶಯ ತಿಳಿಸಿದ್ದಾರೆ. ಹಾಗೇ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. 'ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ನನ್ನ ಪಾದಗಳನ್ನು ಮುಟ್ಟುವಂತೆ ಇತರ ತಂಡದ ಸದಸ್ಯರು ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಿರಲಿಲ್ಲ. ಆದರೆ ಶೀಘ್ರದಲ್ಲೇ, ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯವನ್ನು ತಲುಪಿದಿರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಒಬ್ಬ ಭಾರತೀಯ ನನ್ನ ದಾಖಲೆಯನ್ನು ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡುತ್ತೇನೆ. ದೊಡ್ಡ ವೇದಿಕೆ, ವಿಶ್ವಕಪ್ ಸೆಮಿಫೈನಲ್ ಮತ್ತು ನನ್ನ ತವರು ಮೈದಾನದಲ್ಲಿ ಇದನ್ನು ಮಾಡಿದ್ದು ನನಗೆ ಕೇಕ್ ಮೇಲೆ ಐಸ್ಕ್ರಿಮ್ ಹಾಕಿದಂತಿದೆ' ಎಂದು ಬರೆದುಕೊಂಡಿದ್ದಾರೆ.
ಸಚಿನ್ ಮಾತು ಪಾಲಿಸಿದ ವಿರಾಟ್: 49ನೇ ಶತಕವನ್ನು ವಿರಾಟ್ ಗಳಿಸಿದಾಗ ಸಚಿನ್ ತೆಂಡೂಲ್ಕರ್ 'ನನಗೆ 49 ರಿಂದ 50ಕ್ಕೆ (ವರ್ಷ) ಬರಲು 365 ದಿನ ಬೇಕಾಯಿತು. ನೀನು ಇದನ್ನು ವೇಗವಾಗಿ ಸಾಧಿಸುವೆ' ಎಂದು ಬರೆದು ಇತ್ತೀಚೆಗೆ ವಿಶ್ ಮಾಡಿದ್ದರು. ಅದರಂತೆ ವಿರಾಟ್ ಕೊಹ್ಲಿ ವಾರಗಳ ಅಂತರದಲ್ಲಿ 49 ರಿಂದ 50ನೇ ಶತಕ ಗಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಹೆಚ್ಚು ರನ್ಗಳ ದಾಖಲೆ ಬರೆದ ‘ವಿರಾಟ’: ಸಚಿನ್ ತೆಂಡೂಲ್ಕರ್ ರೆಕಾರ್ಡ್ ಮುರಿದ ಕಿಂಗ್ ಕೊಹ್ಲಿ