ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಸಚಿನ್ ತೆಂಡೂಲ್ಕರ್ ಮಾತನಾಡಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಸಮಾನ ಅವಕಾಶ ಕಲ್ಪಿಸಿದ್ದರೆ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.
ಡಬ್ಲ್ಯೂಟಿಸಿ ಮ್ಯಾಚ್ಗಾಗಿ ಟೀಂ ಇಂಡಿಯಾ ಇಂಟ್ರಾ ಸ್ಕ್ವಾಡ್ ಪ್ರಾಕ್ಟಿಸ್ ಪಂದ್ಯಗಳ ಜೊತೆ ನೆಟ್ನಲ್ಲಿ ಬೆವರು ಹರಿಸುತ್ತಿದೆ. ಆದ್ರೆ ಕಿವೀಸ್ ತಂಡ ಇಂಗ್ಲೆಂಡ್ ಜೊತೆ ಟೆಸ್ಟ್ ಪಂದ್ಯಗಳನ್ನಾಡಿ 1-0 ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. ಈ ವಿಜಯ ಆ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹೀಗಾಗಿ ಬಹುಬೇಗನೆ ಇಂಗ್ಲೆಂಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅವರಿಗೆ ಸಹಾಯವಾಯಿತು.
ಈ ನಿಟ್ಟಿನಲ್ಲಿ ಫೈನಲ್ ನಂತರವೇ ಇಂಗ್ಲೆಂಡ್-ಕಿವಿಸ್ ಸರಣಿಯನ್ನು ನಡೆಸಬೇಕಿತ್ತು. ಆಗ ಎರಡೂ ತಂಡಗಳಿಗೆ ಸಮಾನ ಅವಕಾಶಗಳನ್ನು ನೀಡಿದಂತೆ ಆಗುತ್ತಿತ್ತು ಎಂದು ಸಚಿನ್ ಹೇಳಿದ್ದಾರೆ.
ಇಂಗ್ಲೆಂಡ್-ಕಿವೀಸ್ ಸರಣಿಯನ್ನು ಯಾವಾಗ ನಿರ್ಧರಿಸಲಾಗಿತ್ತು ಎಂದು ನನಗೆ ತಿಳಿದಿಲ್ಲ. ನ್ಯೂಜಿಲೆಂಡ್ ತಂಡ ಡಬ್ಲ್ಯೂಟಿಸಿ ಫೈನಲ್‌ಗೆ ಹೋಗುವ ಮೊದಲು ಇದನ್ನು ನಿರ್ಧರಿಸಲಾಗಿದೆ ಎಂದು ಭಾವಿಸುತ್ತೇನೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಮೂರು ಪಂದ್ಯಗಳಲ್ಲಿ ನಡೆಸಬೇಕು ಎಂದು ಮಾಜಿ ಕ್ರಿಕೆಟರ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸುತ್ತಾ, ಇದನ್ನು ಒಂದೇ ಪಂದ್ಯವೆಂದು ಪರಿಗಣಿಸಬಾರದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಸರಣಿ ಎಂದು ಪರಿಗಣಿಸಬೇಕು. ಅನೇಕ ಪಂದ್ಯಗಳನ್ನು ಆಡಿದಲ್ಲಿ ಮಾತ್ರ ಈ ಪಂದ್ಯಕ್ಕೆ ಅರ್ಹತೆ ಪಡೆಯುತ್ತಾರೆ ಎಂದಿದ್ದಾರೆ.