ETV Bharat / sports

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಸಚಿನ್​- ಲಾರಾ  ಮುಖಾಮುಖಿಗೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಸಜ್ಜು - Etv Bharat Kannada

ಸೆಪ್ಟೆಂಬರ್ 10ರಂದು ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ನ ಇಂಡಿಯಾ ಲೆಜೆಂಡ್ಸ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್ ನಡುವಿನ ಮೊದಲ ಪಂದ್ಯ ನಡೆಯಲಿದೆ.

sachin-tendulkar-and-brian-lara-will-face-each-other-at-kanpur-greenpark-stadium
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಲೆಜೆಂಡ್ಸ್ ಪಂದ್ಯಗಳಿಗೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಸಜ್ಜು
author img

By

Published : Sep 7, 2022, 6:38 PM IST

ಕಾನ್ಪುರ (ಉತ್ತರ ಪ್ರದೇಶ): ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2022ಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 10ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂಡಿಯಾ ಲೆಜೆಂಡ್ಸ್ ಮತ್ತು ಸೌತ್ ಆಫ್ರಿಕಾ ಲೆಜೆಂಡ್ಸ್ ನಡುವಿನ ಪಂದ್ಯದೊಂದಿಗೆ ಈ ಸರಣಿ ಪ್ರಾರಂಭವಾಗಲಿದೆ. ಮೊದಲ ಪಂದ್ಯಕ್ಕಾಗಿ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣ ಸಜ್ಜಾಗಿದೆ.

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಲೆಜೆಂಡ್ಸ್ ಪಂದ್ಯಗಳಿಗೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಸಜ್ಜು

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ನಲ್ಲಿ ಈ ಬಾರಿ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶದ ದಿಗ್ಗಜ ಕ್ರಿಕೆಟಿಗರು ಭಾಗವಹಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಇಯಾನ್ ಬೆಲ್, ರಾಸ್ ಟೇಲರ್, ಶೇನ್ ವ್ಯಾಟ್ಸನ್, ಬ್ರೆಟ್ ಲೀ, ಜಾಂಟಿ ರೋಡ್ಸ್, ಟಿಎಂ ದಿಲ್ಶನ್ ಸೇರಿದಂತೆ ಹಲವು ಖ್ಯಾತ ಆಟಗಾರರನ್ನು ಅಭಿಮಾನಿಗಳು ಮತ್ತೆ ಮೈದಾನದಲ್ಲಿ ನೋಡಬಹುದು.

ಈ ಟೂರ್ನಿಯ ಮೊದಲ ಏಳು ಪಂದ್ಯಗಳು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ನಿಟ್ಟಿನಲ್ಲಿ ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಹಾಗೂ ಸಂಘಟಕರು ಮತ್ತು ಇತರ ಆಡಳಿತಾಧಿಕಾರಿಗಳು ಬುಧವಾರ ಕ್ರೀಡಾಂಗಣದಲ್ಲಿ ಭದ್ರತಾ ಪರಿಶೀಲನೆ ನಡೆಸಿದರು.

ಈ ವೇಳೆ ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಪೊಲೀಸ್​ ಆಯುಕ್ತರು, ಸ್ಟೇಡಿಯಂನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಪಂದ್ಯಗಳ ಸಮಯದಲ್ಲಿ ಆಟಗಾರರು ಸುರಕ್ಷತೆ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧೀನ ಅಧಿಕಾರಿಗಳಿಗೆ ಮಾರ್ಗದ ವ್ಯವಸ್ಥೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಮದುವೆಗೆ ಪುಷ್ಠಿ ಕೊಟ್ಟ 'ಬಿಸಿಸಿಐ'

ಅಲ್ಲದೇ, ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಇತರ ಆಟಗಾರರು ನೆಟ್ ಅಭ್ಯಾಸ ನಡೆಸಲಿದ್ದಾರೆ. ಹಲವು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಚಿನ್ ತೆಂಡೂಲ್ಕರ್ ಹೋಟೆಲ್ ಲ್ಯಾಂಡ್‌ಮಾರ್ಕ್‌ನಲ್ಲಿ ತಂಗಲಿದ್ದಾರೆ. ಭಾri ಭದ್ರತಾ ವ್ಯವಸ್ಥೆಗಳ ನಡುವೆ ಸಚಿನ್ ತೆಂಡೂಲ್ಕರ್ ಮತ್ತು ಇತರ ಆಟಗಾರರನ್ನು ಗ್ರೀನ್‌ಪಾರ್ಕ್ ಸ್ಟೇಡಿಯಂಗೆ ಕರೆತರಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕ್ರಿಕೆಟ್​ ಆಟಗಾರರು ಮಾತ್ರವಲ್ಲದೆ, ಕಾರ್ತಿಕ್ ಆರ್ಯನ್, ಶ್ರದ್ಧಾ ಕಪೂರ್ ಸೇರಿದಂತೆ ಬಾಲಿವುಡ್‌ನ ಅನೇಕ ನಟ - ನಟಿಯರು ಸಹ ಕಾನ್ಪುರಕ್ಕೆ ಬರಲಿದ್ದು, ಪಂದ್ಯಗಳ ಮೂಲಕ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲಿದ್ದಾರೆ. ಈ ಬಾರಿಯ ಸರಣಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಲೀಗ್​ ಹಂತದ ಏಳು ಪಂದ್ಯಗಳು ಕಾನ್ಪುರದಲ್ಲಿ ನಡೆಯಲಿದೆ.

ನಂತರ ಮುಂದಿನ ಐದು ಪಂದ್ಯಗಳು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಜರುಗಲಿವೆ. ಇದಾದ ಬಳಿಕ 13ರಿಂದ 18ರ ಪಂದ್ಯಗಳು ಡೆಹ್ರಾಡೂನ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ಸೆಮಿ ಫೈನಲ್​ ಹಾಗೂ ಫೈನಲ್​ ಪಂದ್ಯಗಳು ರಾಯಪುರದಲ್ಲಿ ಜರುಗಲಿವೆ.

ಇದನ್ನೂ ಓದಿ: ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​: 8 ತಂಡಗಳ ಮಧ್ಯೆ ಸೆಣಸಾಟ, ವೇಳಾಪಟ್ಟಿ ಪ್ರಕಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.