ETV Bharat / sports

IND vs SA 2nd Test: 202 ರನ್​ಗಳಿಗೆ ರಾಹುಲ್​ ಪಡೆ ಆಲೌಟ್, ದಿನದಾಟದ ಅಂತ್ಯಕ್ಕೆ ಆಫ್ರಿಕಾ 35/1

SA vs IND 2nd Test: ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಹರಿಣಗಳ ಪಡೆ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದು, ಮೊದಲ ದಿನವೇ ಟೀಂ ಇಂಡಿಯಾ ಎಲ್ಲ ವಿಕೆಟ್​ ಪಡೆದುಕೊಂಡು ಮೇಲುಗೈ ಸಾಧಿಸಿದೆ.

SA vs IND 2nd Test
SA vs IND 2nd Test
author img

By

Published : Jan 3, 2022, 10:15 PM IST

ಜೋಹಾನ್ಸ್​ಬರ್ಗ್​​(ದಕ್ಷಿಣ ಆಫ್ರಿಕಾ): ಟೀಂ ಇಂಡಿಯಾ ಕ್ಯಾಪ್ಟನ್​​ ಕೆ.ಎಲ್ ರಾಹುಲ್​ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನ ಹೊರತಾಗಿ ಕೂಡ ಭಾರತ ಎರಡನೇ ಟೆಸ್ಟ್​​​​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 202ರನ್​ಗಳಿಗೆ ಆಲೌಟ್​​ ಆಗಿದೆ. ಇದೀಗ ಬ್ಯಾಟಿಂಗ್​​ ಆರಂಭಿಸಿರುವ ದಕ್ಷಿಣ ಆಫ್ರಿಕಾ 1ವಿಕೆಟ್​ನಷ್ಟಕ್ಕೆ 35 ರನ್​​ಗಳಿಕೆ ಮಾಡಿದ್ದು, 167 ರನ್​ಗಳ ಹಿನ್ನಡೆಯಲ್ಲಿದೆ.

ಇಲ್ಲಿನ ವಾಂಡರರ್ಸ್​​​ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ರಾಹುಲ್​ ಹಾಗೂ ಮಯಾಂಕ್​​ ಅಗರವಾಲ್​(26) ರನ್​ಗಳ ನೆರವಿನಿಂದ ಮೊದಲ ವಿಕೆಟ್​ನಷ್ಟಕ್ಕೆ 36ರನ್​​ ಪೇರಿಸಿದರು. ಈ ವೇಳೆ ಮಯಾಂಕ್​ ವಿಕೆಟ್​ ಪತನವಾಯಿತು.

ಮೇಲಿಂದ ಮೇಲೆ ವಿಕೆಟ್​ ಕಳೆದುಕೊಂಡ ಟೀಂ ಇಂಡಿಯಾ

ಮಯಾಂಕ್​ ಬೆನ್ನಲ್ಲೇ ಬಂದ ಅನುಭವಿ ಆಟಗಾರ ಚೇತೇಶ್ವರ್​ ಪೂಜಾರಾ 3ರನ್​, ರಹಾನೆ ಸೊನ್ನೆ ಸುತ್ತಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬಂದ ಹನುಮ ವಿಹಾರಿ 20 ರನ್​ ಹಾಗೂ ರಿಷಭ್ ಪಂತ್​ 17ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ: IND vs SA: ಹರಿಣಗಳ ಬೌಲಿಂಗ್​ ದಾಳಿಗೆ ರಾಹುಲ್​ ಪಡೆ ತತ್ತರ, ಮೊದಲ ಇನ್ನಿಂಗ್ಸ್​​ನಲ್ಲಿ 202 ರನ್​ಗಳಿಗೆ ಆಲೌಟ್​

ಕೆಳ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಆರ್​.ಅಶ್ವಿನ್​ 46ರನ್​ಗಳಿಕೆ ಮಾಡಿ ತಂಡಕ್ಕೆ ನೆರವಾದರು. ಆದರೆ ಕೊನೆಯ ಹಂತದಲ್ಲಿ ಶಾರ್ದೂಲ್​ ಠಾಕೂರ್​​​ 0, ಮೊಹಮ್ಮದ್ ಶಮಿ 9, ಮೊಹಮ್ಮದ್ ಸಿರಾಜ್​ 1ರನ್​ಗಳಿಕೆ ಮಾಡಿದರು. ಉಪನಾಯಕ ಜಸ್ಪ್ರೀತ್​ ಬುಮ್ರಾ 14ರನ್​ಗಳಿಕೆ ಮಾಡಿದರು. ಹರಿಣಗಳ ಪರ ಬೌಲಿಂಗ್​ನಲ್ಲಿ ಮಿಂಚು ಹರಿಸಿದ ಮಾರ್ಕೋ ಜಾನ್ಸೆನ್​ 4 ವಿಕೆಟ್​, ರಬಾಡಾ, ಒಲಿವಿರ್ ತಲಾ​ 3 ವಿಕೆಟ್ ಪಡೆದುಕೊಂಡರು.

ಆಫ್ರಿಕಾಗೆ ಆರಂಭಿಕ ಆಘಾತ

ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೂ ಆರಂಭದಲ್ಲೇ ಆಘಾತವಾಯಿತು. 7ರನ್​ಗಳಿಕೆ ಮಾಡಿದ್ದ ವೇಳೆ ಮಾರ್ಕ್ರಾಮ್ ಶಮಿ ಓವರ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಕ್ಯಾಪ್ಟನ್​ ಎಲ್ಗರ್​ ಅಜೇಯ 11ರನ್​ ಹಾಗೂ ಪಿಟರ್ಸನ್​​ 14ರನ್​​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.