ಜೋಹನ್ಸ್ಬರ್ಗ್: ಸೆಂಚುರಿಯನ್ ಟೆಸ್ಟ್ನಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಭಾರತ ತಂಡ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವುದಕ್ಕಾಗಿ ಹೊಸ ವರ್ಷದ ದಿನವೇ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದೆ.
ಭಾರತ ತಂಡ ಸೆಂಚುರಿಯನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು 113 ರನ್ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. 2021ಅನ್ನು ಅವಿಸ್ಮರಣೀಯ ಗೆಲುವಿನೊಂದಿಗೆ ಮುಗಿಸಿರುವ ಕೊಹ್ಲಿ ಪಡೆ 2022ರಲ್ಲಿ ಅಭೂತಪರ್ವ ಜಯಕ್ಕಾಗಿ ಹಾತೊರೆಯುತ್ತಿದೆ. ಒಂದು ವೇಳೆ ಜೋಹನ್ಸ್ಬರ್ಗ್ನಲ್ಲಿ ಭಾರತ ಗೆದ್ದರೆ ಹರಿಣಗಳ ನಾಡಿನಲ್ಲಿ ಭಾರತಕ್ಕೆ ಚೊಚ್ಚಲ ಸರಣಿ ಗೆದ್ದಂತಾಗುತ್ತದೆ.
-
We are here at The Wanderers to prepare for the 2nd Test 🏟️
— BCCI (@BCCI) January 1, 2022 " class="align-text-top noRightClick twitterSection" data="
New Day 🌞
New Year 👌
New Start 😃
Same Focus 💪
Lets GO #TeamIndia | #SAvIND pic.twitter.com/S2vXnumhMD
">We are here at The Wanderers to prepare for the 2nd Test 🏟️
— BCCI (@BCCI) January 1, 2022
New Day 🌞
New Year 👌
New Start 😃
Same Focus 💪
Lets GO #TeamIndia | #SAvIND pic.twitter.com/S2vXnumhMDWe are here at The Wanderers to prepare for the 2nd Test 🏟️
— BCCI (@BCCI) January 1, 2022
New Day 🌞
New Year 👌
New Start 😃
Same Focus 💪
Lets GO #TeamIndia | #SAvIND pic.twitter.com/S2vXnumhMD
ನಾವು 2ನೇ ಟೆಸ್ಟ್ಗೆ ತಯಾರಿಗಾಗಿ ವಾಂಡರರ್ಸ್ನಲ್ಲಿದ್ದೇವೆ.ಹೊಸ ದಿನ, ಹೊಸ ವರ್ಷ , ಹೊಸ ಆರಂಭ. ಅದೇ ಗಮನ, ಹೀಗೆ ಮುನ್ನುಗ್ಗು ಟೀಮ್ ಇಂಡಿಯಾ ಎಂದು ಬಿಸಿಸಿಐ 32 ಸೆಕೆಂಡ್ಗಳ ವಿಡಿಯೋ ಜೊತೆಗೆ ಒಂದಷ್ಟು ಅಭ್ಯಾಸ ಫೋಟೋಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ಈ ವಿಡಿಯೋದಲ್ಲಿ ಆಟಗಾರರೆಲ್ಲಾ ಮೈದಾನದಲ್ಲಿ ಓಡುತ್ತಿರುವುದು ಸೀನಿಯರ್ ಬೌಲರ್ ಇಶಾಂತ್ ಶರ್ಮಾ ಬೌಲಿಂಗ್ ಮಾಡುತ್ತಿರುವುದು, ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮತ್ತು ಮುಖ್ಯಕೋಚ್ ರಾಹುಲ್ ದ್ರಾವಿಡ್ ಹಿರಿಯ ಬ್ಯಾಟರ್ ಚೇತೇಶ್ವರ್ ಪೂಜಾರ ಅವರೊಂದಿಗೆ ಮಾತನಾಡುತ್ತಿರುವು ತುಣಕುಗಳು ಸೇರಿವೆ.
ಇದನ್ನೂ ಓದಿ:2022 ಭಾರತೀಯ ಕ್ರಿಕೆಟ್ಗೆ ಅತ್ಯಂತ ಬಿಡುವಿಲ್ಲದ ವರ್ಷ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ