ನವದೆಹಲಿ: ಕೇರಳ ಎಕ್ಸ್ಪ್ರೆಸ್ ಎಂದೇ ಖ್ಯಾತಿಯಾಗಿದ್ದ ಎಸ್. ಶ್ರೀಶಾಂತ್ ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 2011 ರ ಐಸಿಸಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಶ್ರೀಶಾಂತ್, ದೇಶೀಯ ಕ್ರಿಕೆಟ್ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
'ಇಂದು ನನಗೆ ಕಷ್ಟದ ದಿನವಾಗಿದೆ. ಆದರೆ, ಇಂತಹದೊಂದು ದಿನ ಬಂದೇ ಬರಲಿದೆ ಎಂದು ತಿಳಿದಿದ್ದೆ. ಭಾರತ ತಂಡ ಸೇರಿದಂತೆ ವಿವಿಧ ತಂಡಗಳ ಜೊತೆ ಆಡಿದ ದಿನಗಳು ಸ್ಮರಣೀಯ. ಇದೀಗ ನನ್ನ 25 ವರ್ಷಗಳ ಕ್ರಿಕೆಟ್ ಜೀವನದಿಂದ ದೂರ ಸರಿದು, ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಚಿಸಿದ್ದೇನೆ. ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಐಸಿಸಿ, ಬಿಸಿಸಿಐಗೆ ಧನ್ಯವಾದಗಳು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
-
Today is a difficult day for me, but it is also a day of reflection and gratitude. Playing for Ecc, Ernakulam district,varies diff. League and tournament teams, Kerala state cricket association,Bcci, Warwickshire county cricket team,Indian airlines cricket team,Bpcl , and ICC
— Sreesanth (@sreesanth36) March 9, 2022 " class="align-text-top noRightClick twitterSection" data="
">Today is a difficult day for me, but it is also a day of reflection and gratitude. Playing for Ecc, Ernakulam district,varies diff. League and tournament teams, Kerala state cricket association,Bcci, Warwickshire county cricket team,Indian airlines cricket team,Bpcl , and ICC
— Sreesanth (@sreesanth36) March 9, 2022Today is a difficult day for me, but it is also a day of reflection and gratitude. Playing for Ecc, Ernakulam district,varies diff. League and tournament teams, Kerala state cricket association,Bcci, Warwickshire county cricket team,Indian airlines cricket team,Bpcl , and ICC
— Sreesanth (@sreesanth36) March 9, 2022
ಕೇರಳದ ವೇಗದ ಬೌಲರ್ ಎಸ್. ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಮತ್ತು 10 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2007ರಲ್ಲಿ ಟಿ-20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತದ ತಂಡದಲ್ಲಿದ್ದರು. ಇದಲ್ಲದೇ, ಇಸಿಸಿ, ಎರ್ನಾಕುಲಂ ಜಿಲ್ಲಾ ತಂಡ, ಲೀಗ್ ಮತ್ತು ಟೂರ್ನಮೆಂಟ್ ತಂಡಗಳು, ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ, ವಾರ್ವಿಕ್‌ಷೈರ್ ಕೌಂಟಿ ಕ್ರಿಕೆಟ್ ತಂಡ, ಇಂಡಿಯನ್ ಏರ್‌ಲೈನ್ಸ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.
ಓದಿ: ಕ್ರಿಕೆಟ್ ದಂತಕತೆ ಶೇನ್ ವಾರ್ನ್ಗೆ ಮಾ.30ರಂದು ಎಂಸಿಜಿಯಲ್ಲಿ ಸ್ಮರಣಾ ಕಾರ್ಯಕ್ರಮ