ETV Bharat / sports

ಗಾಯಕ್ವಾಡ್​ ಸಿಡಿಲಬ್ಬರದ ಶತಕ:ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನಕ್ಕೆ 190 ರನ್​ಗಳ ಬೃಹತ್​ ಗುರಿ - RR Squad Today

ಗಾಯಕ್ವಾಡ್​ 60 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್​ಗಳ ನೆರವಿನಿಂದ ಅಜೇಯ 101 ರನ್​ ಸಿಡಿಸಿ ರಾಯಲ್ಸ್​ಗೆ 190 ರನ್​ಗಳ ಬೃಹತ್ ಗುರಿ ನೀಡಲು ನೆರವಾದರು.

ಚೆನ್ನೈ ಸೂಪರ್​ ಕಿಂಗ್ಸ್​ vs ರಾಜಸ್ಥಾನ್​ ರಾಯಲ್ಸ್​

author img

By

Published : Oct 2, 2021, 9:46 PM IST

ಅಬುಧಾಬಿ: ರುತುರಾಜ್​ ಗಾಯಕ್ವಾಡ್(101) ಅವರ ಶತಕದ ನೆರವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ರಾಜಸ್ಥಾನ್​ ರಾಯಲ್ಸ್​ ವಿರುದ್ಧ 189 ರನ್​ಗಳ ಬೃಹತ್​ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಸಿಎಸ್​ಕೆ ಉತ್ತಮ ಆರಂಭ ಪಡೆಯಿತು. ಪ್ಲೆಸಿಸ್​(25) ಮತ್ತು ಗಾಯಕ್ವಾಡ್​ ಮೊದಲ ವಿಕೆಟ್​ಗೆ 47 ರನ್​ಗಳ ಜೊತೆಯಾಟ ನೀಡಿದರು. ಪ್ಲೆಸಿಸ್​ 19 ಎಸೆತಗಳಲ್ಲಿ 25 ರನ್​ಗಳಿಸಿ ಔಟಾದರು. ನಂತರ ಬಂದ ರೈನಾ 3 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರು. ಮೊಯೀನ್ ಅಲಿ 17 ಎಸೆತಗಳಲ್ಲಿ 21 ರನ್​ಗಳಿಸಿದರು. ಈ ಮೂರು ವಿಕೆಟ್​ ರಾಹುಲ್ ತೆವಾಟಿಯಾ ಪಾಲಾದವು. ಅಂಬಾಟಿ ರಾಯುಡು 2 ರನ್​ಗಳಿಸಿ ಸಕಾರಿಯಾಗೆ ವಿಕೆಟ್​ ಒಪ್ಪಿಸಿದರು.

ಅಬ್ಬರಿಸಿದ ಜಡೇಜಾ-ಗಾಯಕ್ವಾಡ್​:

134ಕ್ಕೆ4 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಗಾಯ್ಕವಾಡ್​ ಜೊತೆ ಸೇರಿದ ಜಡೇಜಾ ಕೊನೆಯ 22 ಎಸೆಗಳಲ್ಲಿ 55 ರನ್​ ಸೂರೆಗೈದರು. ಜಡೇಜಾ ಕೇವಲ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 32 ರನ್​ಗಳಿಸಿದರೆ, ರುತುರಾಜ್ ಗಾಯಕ್ವಾಡ್​ 60 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ ಅಜೇಯ 101 ರನ್​ಗಳಿಸಿದರು.

ಇದನ್ನು ಓದಿ:ಮುಂಬೈ ವಿರುದ್ಧ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.