ಭಾರತ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಮೈದಾನ ಸಿಬ್ಬಂದಿಯನ್ನು ಅವಮಾನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ. ಅವರನ್ನು ಕ್ರಿಕೆಟ್ನಿಂದಲೇ ನಿಷೇಧಿಸುವಂತೆಯೂ ಒತ್ತಾಯಿಸಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಿಂದ ರದ್ದಾದ 5ನೇ ಟಿ-20 ಪಂದ್ಯ ಆರಂಭಕ್ಕೂ ಮುನ್ನ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಡಗ್ಔಟ್ನಲ್ಲಿ ಕುಳಿತಿದ್ದಾಗ ಅವರ ಬಳಿಗೆ ಬಂದ ಮೈದಾನದ ಸಿಬ್ಬಂದಿ ಗಾಯಕ್ವಾಡ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹತ್ತಿರ ಬಂದಾಗ ದೂರ ಸರಿಯುವಂತೆ ಸೂಚಿಸಿ ಅವಮಾನಿಸಿದ್ದಾರೆ.
-
Very bad and disrespectful gesture by Ruturaj Gaikwad. Sad to see these groundsmen getting treated like this 😔#RuturajGaikwad pic.twitter.com/jIXWvUdqIX
— Arnav (@imarnav_904) June 19, 2022 " class="align-text-top noRightClick twitterSection" data="
">Very bad and disrespectful gesture by Ruturaj Gaikwad. Sad to see these groundsmen getting treated like this 😔#RuturajGaikwad pic.twitter.com/jIXWvUdqIX
— Arnav (@imarnav_904) June 19, 2022Very bad and disrespectful gesture by Ruturaj Gaikwad. Sad to see these groundsmen getting treated like this 😔#RuturajGaikwad pic.twitter.com/jIXWvUdqIX
— Arnav (@imarnav_904) June 19, 2022
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಗಾಯಕ್ವಾಡ್ರ ಈ ವರ್ತನೆಗೆ ಕಟು ಟೀಕೆ ವ್ಯಕ್ತವಾಗಿದೆ. ಮೈದಾನದ ಸಿಬ್ಬಂದಿ ಮಳೆಯ ಮಧ್ಯೆಯೂ ಕೆಲಸ ಮಾಡಿ ಆಟಕ್ಕೆ ಮೈದಾನ ಸಿದ್ಧಪಡಿಸಲು ಶ್ರಮಿಸಿದ್ದಾರೆ. ಅಂತಹ ವ್ಯಕ್ತಿ ಸೆಲ್ಫಿ ಕೇಳಲು ಬಂದಾಗ ನಿರಾಕರಿಸಿ, ದೂರ ದೂಡಿ ಅವಮಾನಿಸಿದ್ದಕ್ಕೆ ಆಟಗಾರನ ವಿರುದ್ಧ ನೆಟಿಜನ್ಸ್ ಟೀಕಾಪ್ರಹಾರ ನಡೆಸಿದ್ದಾರೆ.
'ಗ್ರೌಂಡ್ಸ್‌ಮನ್‌ಗಳು ಮಳೆಯಲ್ಲಿಯೇ ಕೆಲಸ ಮಾಡಿ ಮೈದಾನ ಸಿದ್ಧಪಡಿಸಿದರೆ, ಗಾಯಕ್ವಾಡ್ ಅಂತಹ ಶ್ರಮಜೀವಿಯನ್ನೇ ಮುಟ್ಟದಂತೆ ದೂರ ದೂಡಿದ್ದು ಸರಿಯಲ್ಲ. ಈತನನ್ನು ಕ್ರಿಕೆಟ್ನಿಂದಲೇ ನಿಷೇಧಿಸಿ' ಎಂದು ಟ್ವಿಟ್ಟರ್ ಬಳಕೆದಾರ ಅವನೀತ್ ಎಂಬುವವರು ಆಗ್ರಹಿಸಿದ್ದಾರೆ.
ಮತ್ತೊಬ್ಬ ಬಳಕೆದಾರ ಅಮಯ್‌ಪ್ರೇಮ್ "ಋತುರಾಜ್ ಗ್ರೌಂಡ್‌ಮೆನ್‌ರನ್ನು ಜಾತಿ ಆಧಾರದ ಮೇಲೆ ನೋಡಿಕೊಂಡಿದ್ದಾರೆ. ಅವರ ಕೆಟ್ಟ ನಡವಳಿಕೆಗೆ ಬಿಸಿಸಿಐ ದಂಡ ವಿಧಿಸಬೇಕು' ಎಂದು ಕೋರಿದ್ದಾರೆ.
'ಋತುರಾಜ್ ಗಾಯಕ್ವಾಡ್, ಕೌಶಲ್ಯ ಮತ್ತು ಆಟಕ್ಕಿಂತ ವರ್ತನೆ ಮುಖ್ಯ. ನಿಮ್ಮ ಈ ವರ್ತನೆಯಿಂದ ನೀವು ಎಂದಿಗೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಸಚಿನ್, ಧೋನಿ ಮತ್ತು ಕೊಹ್ಲಿಯಂತಹ ಆಟಗಾರರು ಇಂದಿಗೂ ಜನಮಾನಸದಲ್ಲಿ ಲೆಜೆಂಡ್ಸ್ ಆಗಿ ಉಳಿದಿದ್ದಾರೆ. ಅದಕ್ಕೆ ಕಾರಣ ಅವರ ನಡವಳಿಕೆ. ಮಾನವರನ್ನು ಗೌರವಿಸುವುದನ್ನು ಕಲಿಯಿರಿ' ಎಂದು ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ಬುದ್ಧಿ ಹೇಳಿದ್ದಾರೆ.
ಈ ಘಟನೆಯ ಕುರಿತಾಗಿ ಯಾವೊಬ್ಬ ಕ್ರಿಕೆಟರ್ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮಳೆಯಿಂದ ರದ್ದಾದ ಪಂದ್ಯ ಸುದ್ದಿಯಾಗಿದ್ದಕ್ಕಿಂತಲೂ ಮಳೆ ವಿರಾಮದ ವೇಳೆ ನಡೆದ ಈ ಘಟನೆ ಹೆಚ್ಚು ಸದ್ದು ಮಾಡಿದೆ. ಋತುರಾಜ್ ಗಾಯಕ್ವಾಡ್ ಮಳೆ ಬಿಡುವು ಬಳಿಕ ಆಟ ಆರಂಭವಾದಾಗ 10 ರನ್ ಗಳಿಸಿ ಔಟಾದರು. ಇಡೀ ಸರಣಿಯಲ್ಲಿ ಒಂದು ಅರ್ಧಶತಕ ಸಮೇತ 150 ರನ್ ಮಾತ್ರ ಗಳಿಸಿದ್ದಾರೆ.
ಓದಿ; ಕಳೆದ 8 ತಿಂಗಳಲ್ಲಿ 6 ನಾಯಕರನ್ನು ಬದಲಾಯಿಸಿದ ಟೀಂ ಇಂಡಿಯಾ! ತಂಡದ ಮುಂದಿನ ನಾಯಕ ಇವರೇನಾ?