ದುಬೈ: 2ನೇ ಹಂತದ ಐಪಿಎಲ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ಯುಎಇ ತಲುಪಿದೆ.
ಆರ್ಸಿಬಿ ತನ್ನ ಟ್ವಿಟರ್ ಖಾತೆಯಲ್ಲಿ ದೇವದತ್ ಪಡಿಕ್ಕಲ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಯುಜ್ವೇಂದ್ರ ಚಹಲ್ ಸೇರಿದಂತೆ ಆರ್ಸಿಬಿ ಬಳಗ ಬೆಂಗಳೂರಿನಿಂದ ದುಬೈ ಪ್ರಯಾಣ ಬೆಳೆಸಿತ್ತು. ಇದೀಗ ದುಬೈ ತಲುಪಿರುವ ಆರ್ಸಿಬಿ ಬಳಗ, ತರಬೇತಿ ಆರಂಭಿಸುವ ಮುನ್ನ ದುಬೈನಲ್ಲಿ 6 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದೆ.
-
#TravelDay ft. Royal Challengers. 🇮🇳 ✈️ 🇦🇪
— Royal Challengers Bangalore (@RCBTweets) August 29, 2021 " class="align-text-top noRightClick twitterSection" data="
The team has reached UAE and will quarantine for 6️⃣ days before starting preparations for the second half of #IPL2021. 👊🏻#PlayBold #WeAreChallengers pic.twitter.com/QoJZXhNqbX
">#TravelDay ft. Royal Challengers. 🇮🇳 ✈️ 🇦🇪
— Royal Challengers Bangalore (@RCBTweets) August 29, 2021
The team has reached UAE and will quarantine for 6️⃣ days before starting preparations for the second half of #IPL2021. 👊🏻#PlayBold #WeAreChallengers pic.twitter.com/QoJZXhNqbX#TravelDay ft. Royal Challengers. 🇮🇳 ✈️ 🇦🇪
— Royal Challengers Bangalore (@RCBTweets) August 29, 2021
The team has reached UAE and will quarantine for 6️⃣ days before starting preparations for the second half of #IPL2021. 👊🏻#PlayBold #WeAreChallengers pic.twitter.com/QoJZXhNqbX
ಬೆಂಗಳೂರು ತಂಡ ಸೆಪ್ಟೆಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ದ್ವಿತೀಯ ಹಂತದ ಲೀಗ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಬದಲೀ ಆಟಗಾರರಾಗಿರುವ ಶ್ರೀಲಂಕಾದ ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರ ಸೆಪ್ಟೆಂಬರ್ 20ರಂದು ಯುಎಇಗೆ ಪಯಣ ಬೆಳಸಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆ ಯುಎಇಯಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆರ್ಸಿಬಿ ಪ್ರಸ್ತುತ 7 ಪಂದ್ಯಗಳಿಂದ 5 ಗೆಲುವು ಮತ್ತು 2 ಸೋಲುಗಳಿಂದ 10 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.
ಇದನ್ನು ಓದಿ:ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಹಸರಂಗ, ಚಮೀರಾಗೆ NOC ನೀಡಿದ ಶ್ರೀಲಂಕಾ ಕ್ರಿಕೆಟ್