ETV Bharat / sports

ಬಣ್ಣದಲ್ಲಿ ಮಿಂದೆದ್ದ ರಾಯಲ್​ ಬೆಡಗಿಯರು: ವುಮೆನ್ಸ್​ ಐಪಿಎಲ್​ನ ಹೋಳಿ ಸಂಭ್ರಮ

author img

By

Published : Mar 7, 2023, 6:06 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೋಳಿ ಆರಚರಣೆ - ಬಣ್ಣದಲ್ಲಿ ಮಿಂದೆದ್ದ ಮಂಧಾನ ಪಡೆಯ ಬೆಡಗಿಯರು - ವುಮೆನ್ಸ್ ಪ್ರೀಮಿಯರ್​ ಲೀಗ್​ನಿಂದ ಹೋಳಿ ಶುಭಾಶಯ

Royal Challengers Bangalore team Holi celebration
ಬಣ್ಣದಲ್ಲಿ ಮಿಂದೆದ್ದ ರಾಯಲ್​ ಬೆಡಗಿಯರು

ಮುಂಬೈ: ದೇಶದೆಲ್ಲೆಡೆ ಹೋಳಿಯನ್ನು ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಈ ಆಚರಣೆಯಲ್ಲಿ ಎಲ್ಲಾ ಸೆಲೆಬ್ರೆಟಿಗಳೂ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಭರ್ಜರಿಯಾಗಿ ಹೋಳಿ ಆಡಿ ಸಂಭ್ರಮಿಸಿದೆ. ವಿದೇಶಿ ಆಟಗಾರರೊಂದಿಗೆ ಸೇರಿ ಬಣ್ಣದ ನೀರಿನಲ್ಲಿ ತಂಡದ ಆಟಗಾರು ಮಿಂದೆದಿದ್ದಾರೆ. ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರಿ, ಸೋಫಿ ಡಿವೈನ್ ಮತ್ತು ಹೀದರ್ ನೈಟ್ ಬಣ್ಣ ಹಚ್ಚಿಕೊಳ್ಳುತ್ತಿರುವ ಫೋಟೋ ಮತ್ತು ಗ್ರೂಪ್​ ಫೋಟೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ವುಮೆನ್ಸ್​ ಪ್ರೀಮಿಯರ್​ ಲೀಗ್​ನಿಂದ ಶುಭಾಶಯ: ವುಮೆನ್ಸ್ ಪ್ರೀಮಿಯರ್​ ಲೀಗ್​ನ "ಯೇ ತೋ ಬಸ್​ ಶುರುವಾತಿ ಹೈ" ಗೀತೆಯೊಂದಿಗೆ ಈ ವರ್ಷದ ಹೋಳಿಯನ್ನು ಸಂಭ್ರಮಿಸಿ ಎಂದು ಡಬ್ಲ್ಯೂಪಿಎಲ್​ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಶುಭಾಶಯ ತಿಳಿಸಿದ್ದಾರೆ. ವಿಡಿಯೋದಲ್ಲಿ ಡಬ್ಲ್ಯೂಪಿಎಲ್ ಗೀತೆಯಲ್ಲಿ ಹಾಡಿದ ನೀತಿ ಮೋಹನ್ ಮತ್ತು ಹರ್ದೀಪ್ ಕೌರ್ ಕೂಡ ಕಾಣಿಸಿಕೊಂಡು ವಿಶ್​ ಮಾಡಿದ್ದಾರೆ.

ಜೈಯ್​ ಶಾ ಶುಭಾಶಯ: ವುಮೆನ್​ ಪ್ರೀಮಿಯರ್​​ ಲೀಗ್​ಗಾಗಿ ಮಾಡಲಾಗಿದ್ದ ವಿಶೇಷ ಕಾರ್ಟೂನ್​ ಬಳಸಿ ಜಯ್​ ಶಾ ವಿಶ್​ ಮಾಡಿದ್ದಾರೆ. ಹೆಣ್ಣು ಹುಲಿಯ ಕಾರ್ಟೂನ್​ ಇದಾಗಿದ್ದು, ಇದಕ್ಕೂ ಮೊದಲು ಡಬ್ಲ್ಯೂಪಿಎಲ್​​ ಪ್ರಮೋಷನ್​ಗೆ ಈ ಕಾರ್ಟೂನ್​ ಮಾಡಲಾಗಿತ್ತು. ಹೊಸ ಆರಂಭ ಈ ವರ್ಷದಿಂದ ಆಗಿದೆ ಎಲ್ಲರಿಗೂ ಹೋಳಿಯ ಶುಭಾಶಯ ಎಂದು ಜೈಯ್​ ಶಾ ಟ್ವೀಟ್​​ ಮಾಡಿದ್ದಾರೆ.

ಪ್ರೀಮಿಯರ್​ ಲೀಗ್​ನಲ್ಲಿ ಆರ್​ಸಿಬಿಗೆ ಎರಡು ಸೋಲು: ಆರ್​ಸಿಬಿ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್​ ಎದುರು 60 ರನ್​ನಿಂದ ಸೋಲನುಭವಿಸಿದರೆ. ನಿನ್ನೆ ಮುಂಬೈ ಎದುರಿನ ಮ್ಯಾಚ್​ನಲ್ಲಿ 9 ವಿಕೆಟ್​ಗಳ ಸೋಲು ಎದುರಿಸಿದೆ.

ಡೆಲ್ಲಿ ಎದುರು 223 ರನ್​ನ ಬೃಹತ್​ ಗುರಿಯನ್ನು ಬೆನ್ನು ಹತ್ತಿದ್ದ ಆರ್​ಸಿಬಿಗೆ ಬ್ಯಾಟಿಂಗ್​ ವೈಫಲ್ಯ ಕಾಡಿತ್ತು. 223 ರನ್​ ಬೆನ್ನು ಹತ್ತಿದ್ದ ಆರ್​ಸಿಬಿ ತಂಡ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 163 ರನ್ ಗಳಿಸಿತ್ತು. ಮಂಧಾನ, ನೈಟ್​ ಮತ್ತು ಸ್ಕಾಟ್​ 30+ ರನ್​ ದಾಖಲಿಸಿದರು. ಪಂದ್ಯದ ಸೋಲಿನ ನಂತರ ನಾಯಕಿ ಮಂಧಾನ ಬೃಹತ್​ ರನ್​ಗಳ ಜೊತೆಯಾಟ ಮಾಡಲಾಗದಿದ್ದು ಸೋಲಿಗೆ ಕಾರಣ ಎಂದಿದ್ದರು.

ನಿನ್ನೆ ಅದೇ ಪಿಚ್​ನಲ್ಲಿ ಮುಂಬೈ ಎದುರು ಸೋಲನುಭವಿಸಿತು. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದ ಆರ್​ಸಿಬಿ ಬೃಹತ್​ ರನ್​ ಕಲೆ ಹಾಕುವ ಅಂದಾಜಿನಲ್ಲಿ ಕ್ರೀಸ್​ಗೆ ಇಳಿದಿತ್ತು ಆದರೆ ಯೋಜನೆಯಂತೆ ಆಡಲಾಗದೇ 18.4 ಓವರ್​ಗೆ 155 ರನ್​ಗೆ ಆಲ್​ ಔಟ್​ ಆಯಿತು. ಈ ಮೊತ್ತವನ್ನು ಮುಂಬೈ ತಂಡ 14.2 ಓವರ್​ನಲ್ಲಿ ಗಳಿಸಿತು. ಹೇಲಿ ಮ್ಯಾಥ್ಯೂಸ್ ಆಲ್​ ರೌಂಡರ್​ ಆಟ ಆಡಿದರು. ಬೌಲಿಂಗ್​ನಲ್ಲಿ 3 ವಿಕೆಟ್​ ಪಡೆದರೆ ಬ್ಯಾಟಿಂಗ್​ನಲ್ಲಿ 77 ರನ್​ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ: ಹೋಳಿ 2023: ಬಣ್ಣದ ಹಬ್ಬದಲ್ಲಿ ಬಾಲಿವುಡ್​ ತಾರೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.