ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು- ಕಿಂಗ್ಸ್ ಪಂಜಾಬ್ ತಂಡ ಮುಖಾಮುಖಿಯಾಗಿವೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ದುಕೊಂಡಿದೆ.
ಆಡುವ 11 ಬಳಗ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ(ಕ್ಯಾಪ್ಟನ್), ದೇವದತ್ ಪಡಿಕ್ಕಲ್, ರಜತ್ ಪಟೀದಾರ್, ಗ್ಲೇನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್(ವಿ,ಕೀ), ಶಹ್ಬಾಜ್ ಅಹ್ಮದ್, ಡೇನಿಯಲ್ ಸ್ಯಾಮ್ಸ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್
-
Toss Update: @imVkohli has won the toss & @RCBTweets have elected to bowl against @PunjabKingsIPL. #VIVOIPL #PBKSvRCB
— IndianPremierLeague (@IPL) April 30, 2021 " class="align-text-top noRightClick twitterSection" data="
Follow the match 👉 https://t.co/GezBF86RCb pic.twitter.com/TfpPY6zRbz
">Toss Update: @imVkohli has won the toss & @RCBTweets have elected to bowl against @PunjabKingsIPL. #VIVOIPL #PBKSvRCB
— IndianPremierLeague (@IPL) April 30, 2021
Follow the match 👉 https://t.co/GezBF86RCb pic.twitter.com/TfpPY6zRbzToss Update: @imVkohli has won the toss & @RCBTweets have elected to bowl against @PunjabKingsIPL. #VIVOIPL #PBKSvRCB
— IndianPremierLeague (@IPL) April 30, 2021
Follow the match 👉 https://t.co/GezBF86RCb pic.twitter.com/TfpPY6zRbz
ಪಂಜಾಬ್ ಕಿಂಗ್ಸ್: ಕೆ.ಎಲ್ ರಾಹುಲ್(ಕ್ಯಾಪ್ಟನ್, ವಿ,ಕೀ), ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೂಲಸ್ ಪೂರನ್, ಪ್ರಭ್ಸಿಮ್ರಾನ್ ಸಿಂಗ್, ಶಾರುಖ್ ಖಾನ್, ಕ್ರಿಸ್ ಜೋರ್ಡನ್, ಮೆರಿಡೆತ್, ರವಿ ಬಿಷ್ಣೊಯ್, ಮೊಹಮ್ಮದ್ ಶಮಿ, ಹರ್ಪ್ರೀತ್ ಬ್ರಾರ್
ಇಂದಿನ ಪಂದ್ಯಕ್ಕಾಗಿ ಪಂಜಾಬ್ ತಂಡ ಪ್ರಮುಖ ಮೂರು ಬದಲಾವಣೆ ಮಾಡಿಕೊಂಡಿದೆ. ಹೆನ್ರಿಕೆನ್ಸ್, ಅರ್ಷದೀಪ್ ಹಾಗೂ ಮಯಾಂಕ್ ಬದಲಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆರ್ಸಿಬಿ ಸುಂದರ್ ಸ್ಥಾನಕ್ಕೆ ಸಹ್ಬಾಜ್ಗೆ ಅವಕಾಶ ನೀಡಿದೆ.
ಈ ಬಾರಿಯ ಐಪಿಎಲ್ನಲ್ಲಿ ಸತತ 4 ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ನಲ್ಲಿರುವ ಆರ್ಸಿಬಿ ತಂಡ ಆಡಿದ ಆರು ಪಂದ್ಯಗಳಲ್ಲಿ 5 ರಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಭಾರತದಲ್ಲಿ ಕೋವಿಡ್ ಹೆಚ್ಚಾದ್ರೆ ವಿಶ್ವಕಪ್ಗಾಗಿ ಪ್ಲಾನ್ 'ಬಿ'.. ಈ ದೇಶದಲ್ಲಿ ಟೂರ್ನಿ!?
ಇತ್ತ ಪಂಜಾಬ್ ತಂಡ ಆಡಿದ ಆರು ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದು, ಗೆಲುವಿನ ಕಾತುರದಲ್ಲಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ಕೆ.ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಉದ್ದೇಶದಿಂದ ಕಣಕ್ಕಿಳಿದಿವೆ.