ಸೌತಾಂಪ್ಟನ್: ನ್ಯೂಜಿಲೆಂಡ್ ತಂಡ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿದ್ದು, ಇಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆಡಲಿದೆ.
ಈ ನಡುವೆ, ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ರಾಸ್ ಟೇಲರ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ. ನಾನು ನಿವೃತ್ತಿ ಹೊಂದುವ ಮನಸ್ಥಿತಿಯಲ್ಲಿಲ್ಲ. ಏಕೆಂದರೆ "ವಯಸ್ಸು ಕೇವಲ ಒಂದು ಸಂಖ್ಯೆ" ಎಂದು ಭಾವಿಸುತ್ತೇನೆ. ನನ್ನ ದೇಶಕ್ಕಾಗಿ ಆಟವಾಡುವುದರಲ್ಲಿ ಸಂತೋಷ ಕಂಡುಕೊಂಡಿದ್ದೇನೆ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಟೇಲರ್ ಹೇಳಿದರು.
"ನೀವು 30ನೇ ವಯಸ್ಸು ಬಂತೆಂದರೆ ನಿವೃತ್ತಿ ಬಗ್ಗೆ ಯೋಚಿಸುತ್ತೀರಿ. ಆದರೆ ನಾನು ಯಾವಾಗಲೂ 35 ನೇ ಸಂಖ್ಯೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ. ಏಕೆಂದು ನನಗೆ ತಿಳಿದಿಲ್ಲ, ಬಹುಶಃ 2019 ರ ವಿಶ್ವಕಪ್ ಕಾರಣವಿರಬಹುದು" ಟೇಲರ್ ಹೇಳುತ್ತಾರೆ.
"ವಿಶ್ವಕಪ್ ನಂತರ ಎಲ್ಲರೂ ನಾನು ನಿವೃತ್ತಿ ಆಗುತ್ತೇನೆ ಅಂದುಕೊಂಡಿದ್ದರು. ಆದರೆ ಅದು ನಿವೃತ್ತಿ ಹೊಂದುವ ಸಮಯ ಎಂದು ನಾನು ಯೋಚಿಸಲಿಲ್ಲ. ನನ್ನ ಮನಸ್ಸಿನಲ್ಲಿ ಒಂದು ಸಂಖ್ಯೆ ಸಿಕ್ಕಿಲ್ಲ. ಸರಿಯಾದ ಸಮಯ ಬಂದಾಗ ಆ ಬಗ್ಗೆ ಯೋಚಿಸುತ್ತೇನೆ" ಎಂದು ಅವರು ಹೇಳಿದರು.
ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ ಕಿವೀಸ್ ತಂಡಕ್ಕೆ ಡಬ್ಲ್ಯೂಟಿಸಿ ಫೈನಲ್ ಸ್ವಲ್ಪ ಪ್ರಯೋಜನವಾಗಲಿದೆ ಎಂದು ಅವರು ಹೇಳುತ್ತಾರೆ.
"ಈ ಎರಡು ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ ನಮಗೆ ಸ್ವಲ್ಪ ಅನುಕೂಲವಾಗುತ್ತದೆ. ಆದರೆ ಭಾರತೀಯ ತಂಡವು ದೀರ್ಘಕಾಲದವರೆಗೆ ವಿಶ್ವದಲ್ಲೇ ನಂ.1 ತಂಡ ಮತ್ತು ಇಲ್ಲಿ [ಇಂಗ್ಲೆಂಡ್‌ನಲ್ಲಿ] ಸಾಕಷ್ಟು ಯಶಸ್ಸನ್ನು ಕಂಡಿದೆ" ಎಂದು ಟೇಲರ್ ಹೇಳಿದರು.