ETV Bharat / sports

ನಾಯಕತ್ವದ ರಣತಂತ್ರಗಳನ್ನು ಒಬ್ಬರನ್ನೊಬ್ಬರು ಕಾಪಿ ಮಾಡಿದ ರೋಹಿತ್-ಕೊಹ್ಲಿ!

ಕೆಕೆಆರ್​ ವಿರುದ್ಧ ಆರ್​ಸಿಬಿ ನಾಯಕ ಕೊಹ್ಲಿ ಕೇವಲ 3 ವಿದೇಶಿ ಕ್ರಿಕೆಟಿಗರನ್ನೊಳಗೊಂಡ ತಂಡದೊಂದಿಗೆ ಆಡಿದ್ದರು. ಯಾಕೆಂದರೆ,ಚೆಪಾಕ್​ನಲ್ಲಿ ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಹೆಚ್ಚುವರಿ ಬ್ಯಾಟ್ಸ್​ಮನ್​ಗೆ ಒತ್ತು ನೀಡಿ 3 ಸ್ಪಿನ್ನರ್​ಗಳನ್ನು ಆಯ್ಕೆ ಮಾಡಿದ್ದರು..

ವಿರಾಟ್ ಕೊಹ್ಲಿ ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ರೋಹಿತ್ ಶರ್ಮಾ
author img

By

Published : Apr 20, 2021, 8:13 PM IST

ಚೆನ್ನೈ : ಐಪಿಎಲ್​ನಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್​ ಶರ್ಮಾ ಮತ್ತು ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ನಾಯಕತ್ವ ನಿರ್ಧಾರದಲ್ಲಿ ಒಬ್ಬರನ್ನೊಬ್ಬರ ನಕಲು ಮಾಡಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಟಾಸ್​ ಗೆದ್ದ ಕೂಡಲೇ ನಾಯಕರು ಹೆಚ್ಚು ಚೇಸಿಂಗ್ ಮಾಡಲು ನಿರ್ಧರಿಸುತ್ತಾರೆ. ಈ ಐಪಿಎಲ್​ನಲ್ಲೂ ಮೊದಲ 8 ಪಂದ್ಯಗಳಲ್ಲಿ ಟಾಸ್​ ಗೆದ್ದ ತಂಡ ಬೌಲಿಂಗ್ ಮಾಡಲು ನಿರ್ಧರಿಸಿದ್ದವು. ಆದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.

ಅದರಂತೆ ಕೇವಲ 153 ರನ್​ಗಳ ಟಾರ್ಗೆಟ್‌ ನೀಡಿದರೂ 13 ರನ್​ಗಳ ಜಯ ಸಾಧಿಸಿತ್ತು. ಮಾರನೆಯ ದಿನ ಇದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಕೂಡ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಯಶಸ್ವಿಯಾದರು.

ಇಂದು ಕೊಹ್ಲಿಯ 3 ವಿದೇಶಿಗರ ಯೋಜನೆ ಅನುಸರಿಸಿದ ರೋಹಿತ್ : ಕೆಕೆಆರ್​ ವಿರುದ್ಧ ಆರ್​ಸಿಬಿ ನಾಯಕ ಕೊಹ್ಲಿ ಕೇವಲ 3 ವಿದೇಶಿ ಕ್ರಿಕೆಟಿಗರನ್ನೊಳಗೊಂಡ ತಂಡದೊಂದಿಗೆ ಆಡಿದ್ದರು. ಯಾಕೆಂದರೆ,ಚೆಪಾಕ್​ನಲ್ಲಿ ಸ್ಪಿನ್ನರ್​ಗಳು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಹೆಚ್ಚುವರಿ ಬ್ಯಾಟ್ಸ್​ಮನ್​ಗೆ ಒತ್ತು ನೀಡಿ 3 ಸ್ಪಿನ್ನರ್​ಗಳನ್ನು ಆಯ್ಕೆ ಮಾಡಿದ್ದರು. ಎಬಿಡಿ, ಮ್ಯಾಕ್ಸ್​ವೆಲ್ ಮತ್ತು ಜೆಮೀಸನ್​ ಮಾತ್ರ ಕೆಕೆಆರ್​ ವಿರುದ್ಧ ಆಡಿದ್ದರು.

ಇದೇ ಯೋಜನೆಯನ್ನು ಇಂದು ಮುಂಬೈ ಇಂಡಿಯನ್ಸ್ ಕೂಡ ಅನುಸರಿಸಿದೆ. ತಂಡದಲ್ಲಿ ನಾಲ್ಕನೇ ವಿದೇಶಿ ಆಟಗಾರನಾಗಿದ್ದ ಮಿಲ್ನೆಯನ್ನು ಹೊರಗಿಟ್ಟಿರುವ ರೋಹಿತ್ ಅವರ ಜಾಗದಲ್ಲಿ ಆಲ್​ರೌಂಡರ್ ಜಯಂತ್ ಯಾದವ್​ಗೆ ಅವಕಾಶ ನೀಡಿದ್ದಾರೆ.

ಇಂದಿನ ಪಂದ್ಯದಲ್ಲಿ ಪೊಲಾರ್ಡ್​, ಡಿಕಾಕ್ ಮತ್ತು ಬೌಲ್ಟ್​ ಮಾತ್ರ ಕಣಕ್ಕಿಳಿದಿದ್ದಾರೆ. ಐಪಿಎಲ್​ನಲ್ಲಿ ಒಂದು ತಂಡ ಗರಿಷ್ಠ ನಾಲ್ವರು ವಿದೇಶಿಗರನ್ನು ಆಡಿಸಲು ಅವಕಾಶವಿದೆ. ಕನಿಷ್ಠ ಎಷ್ಟಾದರೂ ಆಡಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.