ETV Bharat / sports

ರೋಹಿತ್​ ಶರ್ಮಾಗೆ ಕೋವಿಡ್​ ನೆಗೆಟಿವ್​: ಟಿ-20ಗೆ ಹಿಟ್​ ಮ್ಯಾನ್​ ಎಂಟ್ರಿ - India vs England

ಅಭ್ಯಾಸ ಪಂದ್ಯಕ್ಕೂ ಮುನ್ನ ಕೋವಿಡ್​ ಪಾಸಿಟಿವ್​ ಬಂದು ಟೆಸ್ಟ್​ ನಿಂದ ರೋಹಿತ್​ ಶರ್ಮಾ ಹೊರಗುಳಿದಿದ್ದರು. ಬಿಸಿಸಿಐ ಮೂಲಗಳ ಪ್ರಕಾರ ರೋಹಿತ್​ ಶರ್ಮಾ ಕೋವಿಡ್​ನಿಂದ ಗುಣಮುಖರಾಗಿದ್ದು, ಮೊದಲ ಟಿ-20ಗೆ ಲಭ್ಯರಿದ್ದಾರೆ.

Rohith Sharma
ರೋಹಿತ್​ ಶರ್ಮಾ
author img

By

Published : Jul 3, 2022, 9:12 PM IST

ಬರ್ಮಿಂಗ್​ಹ್ಯಾಮ್​: ಭಾರತದ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿದೆ. ಅವರ ಕ್ವಾರಂಟೈನ್ ಅವಧಿ ಮುಗಿದಿದ್ದು, ಐಸೋಲೇಶನ್​ನಿಂದ ಹೊರಗಿದ್ದಾರೆ. ಜುಲೈ 7 ರಿಂದ ಆರಂಭವಾಗಲಿರುವ ಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ.

ಇಂಗ್ಲೆಂಡ್​ನ ವಿರುದ್ಧ ಮರು ನಿಗದಿಯಾಗಿದ್ದ ಐದನೇ ಟೆಸ್ಟ್​ಗೂ ಮುನ್ನ ಲೀಸೆಸ್ಟರ್‌ಶೈರ್ ವಿರುದ್ಧದ ನಾಲ್ಕು ದಿನಗಳ ಅಭ್ಯಾಸ ಪಂದ್ಯದ ವೇಳೆ ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟಿವ್​ ಕಾಣಿಸಿಕೊಂಡಿತ್ತು. ಇದರಿಂದಾಗಿ ಐದನೇ ಟೆಸ್ಟ್​ನಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಜುಲೈ 1ರಿಂದ ಪ್ರಾರಂಭವಾದ ಟೆಸ್ಟ್​ಗೆ ಉಪನಾಯಕನ ಸ್ಥಾನದಲ್ಲಿದ್ದ, ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವ ಕೊಡಲಾಯಿತು.

"ಹೌದು, ರೋಹಿತ್ ಅವರಿಗೆ ಕೊವಿಡ್​ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿದೆ ಮತ್ತು ವೈದ್ಯಕೀಯ ಪ್ರೋಟೋಕಾಲ್‌ಗಳ ಪ್ರಕಾರ ಈಗ ಕ್ವಾರಂಟೈನ್‌ನಿಂದ ಹೊರಗಿದ್ದಾರೆ. ಆದಾಗ್ಯೂ, ಅವರು ನಾರ್ಥಾಂಪ್ಟನ್‌ಶೈರ್ ವಿರುದ್ಧ ಇಂದಿನ ಟಿ-20 ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಏಕೆಂದರೆ ಅವರಿಗೆ ಮೊದಲ ಟಿ-20ಗೂ ಮೊದಲು ಚೇತರಿಸಿ ಕೊಳ್ಳುವ ಅಗತ್ಯವಿದೆ" ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ರೋಹಿತ್​ ಶರ್ಮಾ ಆಡಲಿದ್ದಾರೆ. ವಿರಾಟ್ ಕೊಹ್ಲಿ, ಬುಮ್ರಾ, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಎರಡನೇ ಪಂದ್ಯದಿಂದ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜುಲೈ 5ರಂದು ಟೆಸ್ಟ್​ ಪಂದ್ಯ ಅಂತ್ಯವಾಗಲಿದೆ. ಜುಲೈ 7ರಿಂದ ಮೂರು ಟಿ-20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ.

ಇದನ್ನೂ ಓದಿ: ಬೂಮ್​.. ಬೂಮ್​.. ಬುಮ್ರಾಗೆ ಬ್ರಿಯಾನ್​ ಲಾರಾ ಮೆಚ್ಚುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.