ETV Bharat / sports

ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಮಾಡಲು ರೋಹಿತ್​ಗೆ ಬೇಕು ಕೇವಲ 18ರನ್​​! - Rohit 1000 runs against KKR

ಕೆಕೆಆರ್ ವಿರುದ್ಧ ಮುಂಬೈ ಮುಖಾಮುಖಿಯಲ್ಲಿ ಭಾರಿ ಮುಂದಿದೆ. ಆಡಿರುವ 28 ಪಂದ್ಯಗಳಲ್ಲಿ 22 ಪಂದ್ಯ ಮುಂಬೈ ಗೆದ್ದಿದ್ದರೆ, ಕೆಕೆಆರ್ ಕೇವಲ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮುಂಬೈ ಮಾತ್ರವಲ್ಲದೆ, ರೋಹಿತ್ ಕೂಡ ಕೆಕೆಆರ್​ ವಿರುದ್ಧ ಪ್ರಾಬಲ್ಯ ಸಾಧಿಸಿದ್ದಾರೆ. 46.76ರ ಸರಾಸರಿಯಲ್ಲಿ ಅವರು 982 ರನ್​ಗಳಿಸಿದ್ದಾರೆ.

Rohit Sharma record
ರೋಹಿತ್ ಶರ್ಮಾ
author img

By

Published : Sep 23, 2021, 5:41 PM IST

Updated : Sep 23, 2021, 8:34 PM IST

ಅಬುದಾಭಿ: ಯುಎಇಯಲ್ಲಿ ಆರಂಭವಾಗಿರುವ 2021ರ 2ನೇ ಹಂತದ ಐಪಿಎಲ್​​ನ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಸಿಎಸ್​ಕೆ ವಿರುದ್ಧ 20 ರನ್​ಗಳಿಂದ ಸೋಲು ಕಂಡಿತ್ತು. ಇದೀಗ 2ನೇ ಪಂದ್ಯದಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿ ಮುಂಬೈ ಇದೆ. ಜೊತೆಗೆ ಈ ಪಂದ್ಯದಲ್ಲಿ ನಾಯಕ ರೋಹಿತ್​ ಕೂಡ ಪ್ರಮುಖ ದಾಖಲೆಗಳನ್ನು ಬ್ರೇಕ್​ ಮಾಡಿ ಇತಿಹಾಸ ನಿರ್ಮಿಸುವ ಅವಕಾಶವಿದೆ.

ಕೆಕೆಆರ್ ವಿರುದ್ಧ ಮುಂಬೈ ಮುಖಾಮುಖಿಯಲ್ಲಿ ಭಾರಿ ಮುಂದಿದೆ. ಆಡಿರುವ 28 ಪಂದ್ಯಗಳಲ್ಲಿ 22 ಪಂದ್ಯ ಮುಂಬೈ ಗೆದ್ದಿದ್ದರೆ, ಕೆಕೆಆರ್ ಕೇವಲ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮುಂಬೈ ಮಾತ್ರವಲ್ಲದೆ ರೋಹಿತ್ ಕೂಡ ಕೆಕೆಆರ್​ ವಿರುದ್ಧ ಪ್ರಾಬಲ್ಯ ಸಾಧಿಸಿದ್ದಾರೆ. 46.76ರ ಸರಾಸರಿಯಲ್ಲಿ ಅವರು 982 ರನ್​ಗಳಿಸಿದ್ದಾರೆ.

ಈಗಾಗಲೆ ರೋಹಿತ್​ ಶರ್ಮಾ ಕೆಕೆಆರ್​ ವಿರುದ್ಧ ಗರಿಷ್ಠ ರನ್​ಗಳಿಸಿದ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಕೇವಲ 18 ರನ್​ಗಳಿಸಿದರೆ ಐಪಿಎಲ್ ಒಂದು ತಂಡದ ವಿರುದ್ಧ 1000 ರನ್​ ಗಳಿಸಿದ ಮೊದಲ ಬ್ಯಾಟರ್​ ಎಂಬ ದಾಖಲೆ ಬರೆಯಲಿದ್ದಾರೆ.

ಟಿ20ಯಲ್ಲಿ 400 ಸಿಕ್ಸರ್​ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್

ರೋಹಿತ್ ಶರ್ಮಾ ಸ್ಫೋಟಕ ಬ್ಯಾಟರ್​ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದಕ್ಕೆ ಪೂರಕವೆಂಬಂತೆ ಅವರು ಚುಟುಕು ಕ್ರಿಕೆಟ್​ನಲ್ಲಿ 397 ಸಿಕ್ಸರ್​ ಸಿಡಿಸುವ ಮೂಲಕ ಭಾರತೀಯ ಬ್ಯಾಟರ್​​ಗಳ ಪೈಕಿ ಗರಿಷ್ಠ ಸಿಕ್ಸರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 3 ಸಿಕ್ಸರ್​ ಸಿಡಿಸಿದರೆ ಟಿ20ಯಲ್ಲಿ 400 ಸಿಕ್ಸರ್​ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಳ್ಳಲಿದ್ದಾರೆ.

ರೈನಾ ದಾಖಲೆ ಮುರಿಯಲು 16 ರನ್​, 5500 ರನ್​ ಪೂರೈಸಲು ಬೇಕು 20 ರನ್​

​ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 16 ರನ್​ಗಳಿಸಿದರೆ ಐಪಿಎಲ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟರ್​ಗಳ ಲಿಸ್ಟ್​ನಲ್ಲಿ ರೈನಾರನ್ನು(5495) ಹಿಂದಿಕ್ಕಿ 3ನೇ ಸ್ಥಾನಕ್ಕೇರಲಿದ್ದಾರೆ. ಇದರ ಜೊತೆಗೆ 20 ರನ್​ಗಳಿಸಿದರೆ ಕೊಹ್ಲಿ(6081), ಧವನ್​(5619) ನಂತರ 5500 ರನ್​ಗಳಿಸಿ 3ನೇ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ.​

ಇದನ್ನೂ ಓದಿ: IPLನಲ್ಲಿ ರನ್‌ 'ಶಿಖರ': ಸತತ 6ನೇ ಐಪಿಎಲ್​ನಲ್ಲೂ 400 ರನ್​ ಗಡಿದಾಟಿದ ಡೆಲ್ಲಿ ಓಪನರ್‌

Last Updated : Sep 23, 2021, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.