ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಟೆಸ್ಟ್ ತಂಡದ ಇತರೆ ಸದಸ್ಯರು ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ಶುರು ಮಾಡಿದ್ದಾರೆ. ಬಿಸಿಸಿಐ ಆಟಗಾರರ ಪೂರ್ವಾಭ್ಯಾಸದ ಫೋಟೋಗಳನ್ನು ಹಂಚಿಕೊಂಡಿದೆ. ಜೂನ್ 1 ರಿಂದ 5 ರವರೆಗೆ ಟೆಸ್ಟ್ ನಡೆಯಲಿದೆ. ಇಂಗ್ಲೆಂಡ್ ವಿರುದ್ಧ ಜೂನ್ 1 ರಿಂದ ಆರಂಭವಾಗುವ ಮರುನಿಗದಿಯಾದ ಏಕೈಕ ಟೆಸ್ಟ್ಗಾಗಿ ಭಾರತ ತಂಡ ಅಭ್ಯಾಸ ಆರಂಭಿಸಿದೆ.
ಲೈಸೆಸ್ಟರ್‌ಶೈರ್ ಕ್ರಿಕೆಟ್ ಕ್ಲಬ್‌ನಲ್ಲಿ ಭಾರತದ ಟೆಸ್ಟ್ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೋಗಳನ್ನು ಬಿಸಿಸಿಐ ಹಂಚಿಕೊಂಡಿದೆ. ಟೆಸ್ಟ್ ಪಂದ್ಯ ಜೂನ್ 1 ರಿಂದ 5 ರವರೆಗೆ ನಡೆಯಲಿದ್ದು, ಅದಕ್ಕಾಗಿ ವಾರದ ಮುಂಚೆಯೇ ಪೂರ್ವಾಭ್ಯಾಸ ಆರಂಭಿಸಲಾಗಿದೆ.
-
Hello from Leicester and our training base for a week will be @leicsccc 🙌 #TeamIndia pic.twitter.com/MAX0fkQcuc
— BCCI (@BCCI) June 20, 2022 " class="align-text-top noRightClick twitterSection" data="
">Hello from Leicester and our training base for a week will be @leicsccc 🙌 #TeamIndia pic.twitter.com/MAX0fkQcuc
— BCCI (@BCCI) June 20, 2022Hello from Leicester and our training base for a week will be @leicsccc 🙌 #TeamIndia pic.twitter.com/MAX0fkQcuc
— BCCI (@BCCI) June 20, 2022
2021 ರಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಭಾರತ ತಂಡದ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು. ಇದೀಗ ಪಂದ್ಯವನ್ನು ಮರುನಿಗದಿ ಮಾಡಲಾಗಿದೆ. ಇನ್ನು ಸರಣಿಯಲ್ಲಿ ಭಾರತ 2-1 ರಲ್ಲಿ ಮುನ್ನಡೆ ಸಾಧಿಸಿದೆ.
ಇತ್ತಂಡಗಳಿಗೂ ಹೊಸ ನಾಯಕ, ಕೋಚ್: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಹೊಸ ನಾಯಕರ ಸಾರಥ್ಯದಲ್ಲಿ ಆಡಲಿವೆ. ಕಳೆದ ವರ್ಷ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತಕ್ಕೆ ಈಗ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದಾರೆ. ಇಂಗ್ಲೆಂಡ್ ತಂಡದ ನಾಯಕತ್ವದಿಂದ ಜೋ ರೂಟ್ ಕೆಳಗಿಳಿದಿದ್ದು, ಆಲ್ರೌಂಡರ್ ಬೆನ್ಸ್ಟ್ರೋಕ್ಸ್ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.
ಅಲ್ಲದೇ, ಉಭಯ ತಂಡಗಲು ಹೊಸ ಕೋಚ್ಗಳನ್ನು ಪಡೆದಿವೆ. ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಅವಧಿ ಕಳೆದ ವರ್ಷಕ್ಕೆ ಕೊನೆಗೊಂಡಿದ್ದು, ಇದೀಗ ರಾಹುಲ್ ದ್ರಾವಿಡ್ ಮುಖ್ಯ ತರಬೇತುದಾರರಾಗಿದ್ದಾರೆ. ಅದೇ ರೀತಿ ಇಂಗ್ಲೆಂಡ್ಗೆ ಬ್ರೆಂಡನ್ ಮೆಕಲಮ್ ಹೊಸ ಕೋಚ್ ಆಗಿ ನೇಮಕವಾಗಿದ್ದು, ಕ್ರಿಸ್ ಸಿಲ್ವರ್‌ವುಡ್ ಅವರನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಲು ಬಂದ ಮೈದಾನ ಸಿಬ್ಬಂದಿ ದೂಡಿದ ಋತುರಾಜ್ ಗಾಯಕ್ವಾಡ್.. ವಿಡಿಯೋ ವೈರಲ್, ಭಾರಿ ಟೀಕೆ