ಜಾರ್ಜ್‌ಟೌನ್ (ಗಯಾನಾ): ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಆಂಧ್ರ ಪ್ರದೇಶದ ಬ್ಯಾಟರ್ ತಿಲಕ್ ವರ್ಮಾ, ತಮ್ಮ ಉತ್ತಮ ಪ್ರದರ್ಶನಕ್ಕೆ ರೋಹಿತ್ ಶರ್ಮಾ ಪ್ರೇರಣೆ ಎಂದು ಹೇಳಿದ್ದಾರೆ. ಐಪಿಎಲ್ನ ಗೋಲ್ಡನ್ ಫಾರ್ಮ್ ಮುಂದುವರೆಸಿರುವ ವರ್ಮಾ, ತಾವು ಆಡಿರುವ ಎರಡು ಪಂದ್ಯಗಳಿಂದ 90 ರನ್ ಕಲೆಹಾಕಿದ್ದಾರೆ. ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಅರ್ಧಶತಕವನ್ನೂ ದಾಖಲಿಸಿದ್ದಾರೆ.
ವಿಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದ ನಂತರ ಮಾತನಾಡಿದ ಅವರು, "ರೋಹಿತ್ ಶರ್ಮಾ ನನಗೆ ಬೆಂಬಲ ನೀಡಿದ್ದಾರೆ. ನನ್ನ ಆಟವನ್ನು ಸುಧಾರಿಸಲು ಸಹಾಯ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡಬೇಕೆಂದು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ರೋಹಿತ್ ಶರ್ಮಾರಿಂದ ಹೆಚ್ಚು ಕಲಿತೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರು ನನಗೆ ಸಾಕಷ್ಟು ವಿಚಾರಗಳನ್ನು ಹೇಳಿಕೊಟ್ಟರು" ಎಂದು ನೆನಪಿಸಿಕೊಂಡರು.
-
A special fifty 👍
— BCCI (@BCCI) August 6, 2023 " class="align-text-top noRightClick twitterSection" data="
A special celebration for someone special from the Rohit Sharma family ☺️#TeamIndia | #WIvIND | @ImRo45 | @TilakV9 pic.twitter.com/G7knVbziNI
">A special fifty 👍
— BCCI (@BCCI) August 6, 2023
A special celebration for someone special from the Rohit Sharma family ☺️#TeamIndia | #WIvIND | @ImRo45 | @TilakV9 pic.twitter.com/G7knVbziNIA special fifty 👍
— BCCI (@BCCI) August 6, 2023
A special celebration for someone special from the Rohit Sharma family ☺️#TeamIndia | #WIvIND | @ImRo45 | @TilakV9 pic.twitter.com/G7knVbziNI
ಅರ್ಧಶತಕದ ನಂತರ ಪ್ರದರ್ಶಿಸಿರುವ ವಿಶಿಷ್ಠ ರೀತಿಯ ಸಂಭ್ರಮಾಚರಣೆ ಬಗ್ಗೆ ಕೇಳಿದಾಗ, "ಆ ಆಚರಣೆ ರೋಹಿತ್ ಶರ್ಮಾ ಅವರ ಪುತ್ರಿ ಸಮ್ಮಿ (ಸಮೈರಾ) ಅವರಿಗಾಗಿ. ನಾನು ಸಮ್ಮಿಯ ಜೊತೆ ಹೆಚ್ಚು ಕಾಲ ಕಳೆದಿದ್ದೇನೆ. ನಾನು ಶತಕ ಅಥವಾ ಅರ್ಧಶತಕ ಬಾರಿಸಿದಾಗ ಆಕೆಗಾಗಿ ಹೀಗೆ ಸಂಭ್ರಮಾಚರಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ" ಎಂದು ಹೇಳಿದರು.
''ಅಂತಾರಾಷ್ಟ್ರೀಯ ಕ್ರಿಕೆಟ್ ಸುಲಭವಲ್ಲ. ಇದರಲ್ಲಿ ಹೆಚ್ಚು ಕಾಲ ಉಳಿಯಲು ನೀವು ಸ್ಥಿರ ಪ್ರದರ್ಶನ ನೀಡಬೇಕು. ಮೈದಾನ ಮತ್ತು ಹೊರಗೆ ಶಿಸ್ತುಬದ್ಧವಾಗಿರಬೇಕು. ನಾನು ಈ ವಿಷಯಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಲು ಇಷ್ಟಪಡುತ್ತೇನೆ. 2023ರ ಐಪಿಎಲ್ ನನ್ನ ಜೀವನದಲ್ಲೊಂದು ಮಹತ್ವದ ತಿರುವು ಕೊಟ್ಟಿದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆ ಫಾರ್ಮ್ ಮುಂದುವರೆಸಿಕೊಂಡು ಹೋಗುತ್ತೇನೆ" ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿದ ವರ್ಮಾ, "ನಾನು 18 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್‌ನಿಂದಲೂ ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಡಿ ಆಡಿದ್ದೇನೆ. ಅವರು ಯಾವಾಗಲೂ ಕ್ರೀಸ್ನಲ್ಲಿ ಹೆಚ್ಚು ಸಮಯ ಕಳೆಯಲು ಸಲಹೆ ನೀಡುತ್ತಿರುತ್ತಾರೆ. ನಾಯಕ ಹಾರ್ದಿಕ್ ಪಾಂಡ್ಯ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ" ಎಂದು ಇದೇ ವೇಳೆ ತಿಳಿಸಿದರು.
-
Maiden T20I FIFTY for @TilakV9 👏👏
— BCCI (@BCCI) August 6, 2023 " class="align-text-top noRightClick twitterSection" data="
What a fine knock this has been by the youngster.
Live - https://t.co/mhKN4Dq5T0… #WIvIND pic.twitter.com/JpYUP2M7ho
">Maiden T20I FIFTY for @TilakV9 👏👏
— BCCI (@BCCI) August 6, 2023
What a fine knock this has been by the youngster.
Live - https://t.co/mhKN4Dq5T0… #WIvIND pic.twitter.com/JpYUP2M7hoMaiden T20I FIFTY for @TilakV9 👏👏
— BCCI (@BCCI) August 6, 2023
What a fine knock this has been by the youngster.
Live - https://t.co/mhKN4Dq5T0… #WIvIND pic.twitter.com/JpYUP2M7ho
ಎರಡನೇ ಪಂದ್ಯದ ಬಗ್ಗೆ ಮಾತನಾಡುತ್ತಾ, "ವಿಕೆಟ್ ನಿಧಾನವಾಗಿತ್ತು. ನಾವು 160 ರನ್ಗಳ ಗುರಿ ನೀಡುವ ಲೆಕ್ಕಾಚಾರದಲ್ಲಿದ್ದೆವು. ಈ ಪಿಚ್‌ನಲ್ಲಿ 160 ಪ್ಲಸ್ ರನ್ ಯೋಗ್ಯ ಮೊತ್ತವಾಗುತ್ತಿತ್ತು. ಆದರೆ ನಾವು 10 ರನ್ ಕಡಿಮೆ ಗಳಿಸಿದೆವು. ಇದು ಸೋಲಿಗೆ ಕಾರಣವಾಯಿತು. ನಿಕೋಲಸ್ ಪೂರನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಗೆಲುವಿನ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಅವರ ಬೌಲರ್ಗಳು ನಮ್ಮ ತಂಡದ ಮೇಲೆ ಒತ್ತಡ ಹಾಕಿದರು" ಎಂದು ಪಂದ್ಯವನ್ನು ವಿಶ್ಲೇಷಿಸಿದರು.
ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20ಯನ್ನೂ ಭಾರತ ಗೆಲುವಿನ ಸನಿಹದಲ್ಲಿ ಕಳೆದುಕೊಂಡಿತು. ವಿಂಡೀಸ್ 5 ಟಿ20 ಪಂದ್ಯಗಳ ಸರಣಿಯಲ್ಲಿ 2-0ಯಿಂದ ಮುನ್ನಡೆಯಲ್ಲಿದೆ.
ಇದನ್ನೂ ಓದಿ: IND vs WI, 2nd T20: ಭಾರತಕ್ಕೆ ತಿಲಕ್ ವರ್ಮಾ ಆಸರೆ; ವೆಸ್ಟ್ ಇಂಡೀಸ್‌ಗೆ 153 ರನ್ ಗುರಿ