ETV Bharat / sports

ವಿರಾಟ್​ ಮತ್ತೆ ವಿಫಲ: ಮಾಜಿ ನಾಯಕನ ಬೆಂಬಲಕ್ಕೆ ನಿಂತ ಕ್ಯಾಪ್ಟನ್​ ರೋಹಿತ್​ ಹೀಗಂದ್ರು..

author img

By

Published : Jul 11, 2022, 8:09 AM IST

ನ್ಯಾಟಿಂಗ್​ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಸೋಲುಂಡಿದೆ. ಪಂದ್ಯದ ಬಳಿಕ ನಾಯಕ ರೋಹಿತ್​ ಶರ್ಮಾ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.

Rohit Sharma defends Virat Kohli slump in form, says former India captain did everything right
ವಿರಾಟ್​ ಮತ್ತೆ ವಿಫಲ: ಮಾಜಿ ನಾಯಕನ ಬೆಂಬಲಕ್ಕೆ ನಿಂತ ಕ್ಯಾಪ್ಟನ್​ ರೋಹಿತ್​ ಶರ್ಮಾ

ನ್ಯಾಟಿಂಗ್​ಹ್ಯಾಮ್​: ರನ್​ ಮಷಿನ್​ ಎಂದೇ ಹೆಸರುವಾಸಿಯಾಗಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಇತ್ತೀಚೆಗೆ​ ಮಂಕಾಗಿದೆ. ಕಳೆದ ಕೆಲ ತಿಂಗಳುಗಳಿಂದ ಶತಕವಿರಲಿ ಅರ್ಧಶತಕ ಗಳಿಸುವಲ್ಲಿಯೂ ವಿರಾಟ್​​ ಎಡವುತ್ತಿದ್ದಾರೆ. ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲೂ ಕೂಡ ಕೊಹ್ಲಿ ವೈಫಲ್ಯತೆ ಮುಂದುವರೆದಿದ್ದು ಕೆಲ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ ನಾಯಕ ರೋಹಿತ್​ ಶರ್ಮಾ ಮಾಜಿ ಕ್ಯಾಪ್ಟನ್​ ಬೆಂಬಲಕ್ಕೆ ನಿಂತಿದ್ದಾರೆ.

ಸದ್ಯ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮ್ ಟೆಸ್ಟ್‌ನಲ್ಲಿ ಕೊಹ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದರು. ಅಲ್ಲದೆ, ಎರಡು ಟಿ-20 ಪಂದ್ಯಗಳಲ್ಲಿಯೂ ರನ್​ ಬರ ನೀಗಿಸುವಲ್ಲಿ ಎಡವಿದ ವಿರಾಟ್​​ ಕೇವಲ 1 ಮತ್ತು 11 ರನ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಮೊದಲೆರಡು ಟಿ-20 ಪಂದ್ಯ ಗೆದ್ದ ಭಾರತ, ಮೂರನೇ ಪಂದ್ಯದಲ್ಲಿ 17 ರನ್​ಗಳಿಂದ ಸೋತು ಸರಣಿ ಕ್ಲೀನ್​ ಸ್ವೀಪ್​ ಅವಕಾಶ ಕೈಚೆಲ್ಲಿತು.

ಸದ್ಯ ಕೊಹ್ಲಿ ಫಾರ್ಮ್​ ಬಗ್ಗೆ ಎಲ್ಲೆಡೆ ಟೀಕೆ ಎದ್ದಿರುವ ಬೆನ್ನಲ್ಲೇ ನಾಯಕ ರೋಹಿತ್ ತಮ್ಮ ಹಿಂದಿನ ನಾಯಕ ಕೊಹ್ಲಿಗೆ ಬೆಂಬಲಿಸಿದ್ದಾರೆ. ಮೂರನೇ ಟಿ-20ಯಲ್ಲಿ ವಿರಾಟ್​​ ಬ್ಯಾಟಿಂಗ್ ಮಾಡಿದ ರೀತಿಯನ್ನು ಹಿಟ್​ಮ್ಯಾನ್​ ಸಮರ್ಥಿಸಿಕೊಂಡಿದ್ದಾರೆ. 'ಟಿ-20 ಕ್ರಿಕೆಟ್​ನಲ್ಲಿ ಅದರಲ್ಲೂ ಬಲಿಷ್ಠ ತಂಡದ ವಿರುದ್ಧ ಚೇಸಿಂಗ್​ ವೇಳೆ ನಿಮ್ಮ ಬ್ಯಾಟಿಂಗ್​ ಶೈಲಿ ಮುಖ್ಯವಾಗಿರುತ್ತದೆ. ಅದನ್ನೇ ಕೊಹ್ಲಿ ಕೂಡ ಮಾಡಿದ್ದಾರೆ, ಅದು ಒಬ್ಬ ಆಟಗಾರನ ಗುಣಮಟ್ಟವನ್ನು ಸೂಚಿಸುತ್ತದೆ' ಎಂದು ವಿರಾಟ್​ ಬೆನ್ನುತಟ್ಟಿದ್ದಾರೆ.

ಮೂರನೇ ಟಿ-20ಯಲ್ಲಿ ಪಂತ್​ ವಿಕೆಟ್​ ಪತನದ ಬಳಿಕ ಕ್ರೀಸ್​ಗಿಳಿದ ವಿರಾಟ್​ ಕೊಹ್ಲಿ ಅದ್ಭುತ ಹೊಡೆತಗಳ ಮೂಲಕ ತಲಾ ಬೌಂಡರಿ ಹಾಗೂ ಸಿಕ್ಸರ್​ ಸಿಡಿಸಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆದರೆ ಕೆಲ ಹೊತ್ತಲ್ಲೇ ಕವರ್​ ಮೇಲೆ ಬೌಂಡರಿ ಬಾರಿಸಲು ಯತ್ನಿಸಿ, ಜೇಸನ್​ ರಾಯ್​ ಹಿಡಿದ ಉತ್ತಮ ಕ್ಯಾಚ್​ನಿಂದ 11 ರನ್​ಗೆ ಔಟಾಗಿದ್ದರು.

ಮುಂದುವರಿದು ಮಾತನಾಡಿದ ರೋಹಿತ್​ ಸೂರ್ಯ ಕುಮಾರ್​ ಬ್ಯಾಟಿಂಗ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಾವು ಆರಂಭದಲ್ಲೇ ಮೂರು ವಿಕೆಟ್​ ಕಳೆದುಕೊಂಡಿದ್ದಾಗ ಜೊತೆಯಾಟದ ಅಗತ್ಯವಿತ್ತು. ಸೂರ್ಯಕುಮಾರ್​​ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್​ ಪ್ರದರ್ಶಿಸಿದ್ದಾರೆ. ಕೊನೆಯವರೆಗೂ ಕ್ರೀಸ್​ನಲ್ಲಿದ್ದು ತಂಡವನ್ನು ಗೆಲ್ಲಿಸಲು ಆಗದಿರುವುದು ಸ್ವಲ್ಪ ನಿರಾಶೆ ತಂದಿತು, ಆದರೆ ಅವರ ಇನ್ನಿಂಗ್ಸ್​ ಅದ್ಭುತವಾಗಿತ್ತು ಎಂದರು.

ನ್ಯಾಟಿಂಗ್​ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ 216 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಭಾರತ ಸೂರ್ಯಕುಮಾರ್​ ಸಿಡಿಲಬ್ಬರದ ಶತಕದ ನಡುವೆಯೂ 17 ರನ್​ಗಳಿಂದ ಸೋತಿದೆ. ನಾಳೆ ಮಂಗಳವಾರದಿಂದ ಆಂಗ್ಲರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಇದನ್ನೂ ಓದಿ: ಜೊಕೊವಿಕ್ ಮುಡಿಗೆ ವಿಂಬಲ್ಡನ್‌ ಕಿರೀಟ; ಸರ್ಬಿಯನ್‌ ಆಟಗಾರನಿದು 21ನೇ ಗ್ರ್ಯಾಂಡ್‌ ಸ್ಲಾಮ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.