ಮುಂಬೈ: ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ 10 ಸಾವಿರ ರನ್ಗಳಿಸಿದ 2ನೇ ಹಾಗೂ ವಿಶ್ವದ7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ 25 ರನ್ಗಳಿಸುತ್ತಿದ್ದಂತೆ ಹಿಟ್ಮ್ಯಾನ್ ಈ ವಿಶೇಷ ದಾಖಲೆಗೆ ಪಾತ್ರರಾದರು. ರೋಹಿತ್ ಈ ಮೈಲಿಗಲ್ಲನ್ನು 375ನೇ ಇನ್ನಿಂಗ್ಸ್ನಲ್ಲಿ ತಲುಪಿದರು. ಟಿ20 ಕ್ರಿಕೆಟ್‌ನಲ್ಲಿ ಅವರು 6 ಶತಕ ಹಾಗೂ 69 ಅರ್ಧಶತಕದ ಸೇರಿವೆ.
ರೋಹಿತ್ಗೂ ಮುನ್ನ ಭಾರತ ಮತ್ತು ಆರ್ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಪ್ರಸ್ತುತ ವಿರಾಟ್ 330 ಪಂದ್ಯಗಳಿಂದ 10379 ರನ್ಗಳಿಸಿದ್ದಾರೆ. ಅವರು 5 ಶತಕ ಮತ್ತು 76 ಅರ್ಧಶತಕ ಸಿಡಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿರುವ ದಾಖಲೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 463 ಪಂದ್ಯಗಳಿಂದ 22 ಶತಕ 88 ಅರ್ಧಶತಕ ಸಹಿತ 14,562 ರನ್ ಸಿಡಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಕ್ರಿಕೆಟಿಗರು:
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) : 14,562 ರನ್
- ಶೋಯೆಬ್ ಮಲಿಕ್ (ಪಾಕಿಸ್ತಾನ): 11,698 ರನ್
- ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್): 11,484 ರನ್
- ಆ್ಯರನ್ ಫಿಂಚ್ (ಆಸ್ಟ್ರೇಲಿಯಾ): 10,499 ರನ್
- ವಿರಾಟ್ ಕೊಹ್ಲಿ (ಭಾರತ): 10,379 ರನ್
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 10,373 ರನ್
- ರೋಹಿತ್ ಶರ್ಮಾ (ಭಾರತ): 10,003 ರನ್
ಇದನ್ನೂ ಓದಿ:ಇಂಗ್ಲೆಂಡ್ನ ಕೌಂಟಿಯಲ್ಲಿ ಒಂದೇ ತಂಡದ ಪರ ಆಡಲಿದ್ದಾರೆ ಪೂಜಾರ-ರಿಜ್ವಾನ್