ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಹಾಗೂ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ (74) ಅವರಿಗೆ ಪರಿಹಾರ ನಿಧಿ ಸಂಗ್ರಹಿಸುತ್ತಿರುವ ವೇಳೆ ಹೃದಯಾಘಾತವಾಗಿದ್ದು, ಅಡಿಲೇಡ್ ಆಸ್ಪತ್ರೆಯೊಂದರಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
1970 ರಿಂದ 1984 ರವರೆಗೆ ಆಸ್ಟ್ರೇಲಿಯಾ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿದ ಮಾರ್ಷ್ ಅವರು ಅಡಿಲೇಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಸ್ಪೋರ್ಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ದೃಢಪಡಿಸಿದೆ.
ಇವರು ಆಸ್ಟ್ರೇಲಿಯಾದ ಮಾಜಿ ಬೌಲರ್ ಡೇನಿಸ್ ಲಿಲ್ಲೀ ಬೌಲಿಂಗ್‍ನಲ್ಲಿ 95 ರನ್‍ಗಳನ್ನು ಒಳಗೊಂಡಂತೆ ತಮ್ಮ ವಿಕೆಟ್ ಕೀಪರ್ ಶೈಲಿಯಿಂದ 355 ಟೆಸ್ಟ್ ಕ್ಯಾಚ್‍ಗಳನ್ನು ಹಿಡಿದು ದಾಖಲೆ ಮಾಡಿದ್ದಾರೆ. 1984 ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗುವ ಮೊದಲು ತಂಡಕ್ಕಾಗಿ 92 ಏಕದಿನ ಪಂದ್ಯಗಳನ್ನು ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಎಂಬ ಖ್ಯಾತಿ ಪಡೆದಿದ್ದರು.