ರಸ್ತೆ ಅಪಘಾತದಲ್ಲಿ ಗಾಯಗೊಂಡ ಭಾರತದ ಪ್ರತಿಭಾನ್ವಿತ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಬ್ ಪಂತ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಂತ್ ನಡೆದಾಡಲು ಶುರು ಮಾಡಿದ್ದಾರೆ.
ಈಜುಕೊಳದಲ್ಲಿ ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ವಿಡಿಯೋವನ್ನು ಪಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣದೇ ಆಗಿರಲಿ, ದೊಡ್ಡದೇ ಆಗಿರಲಿ ಎಲ್ಲದಕ್ಕೂ ನಾವು ಕೃತಜ್ಞರಾಗಿರಬೇಕು ಎಂದು ಒಕ್ಕಣೆ ಬರೆದಿದ್ದಾರೆ. ಇದನ್ನು ಅವರ ಅಭಿಮಾನಿಗಳೂ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಬೇಗನೆ ಗುಣಮುಖರಾಗಿ, ನಿಮ್ಮನ್ನು ಈ ರೀತಿ ಮೈದಾನದಲ್ಲಿ ಓಡಾಡಲು ನೋಡಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
-
Grateful for small thing, big things and everything in between. 🙏#RP17 pic.twitter.com/NE9Do72Thr
— Rishabh Pant (@RishabhPant17) March 15, 2023 " class="align-text-top noRightClick twitterSection" data="
">Grateful for small thing, big things and everything in between. 🙏#RP17 pic.twitter.com/NE9Do72Thr
— Rishabh Pant (@RishabhPant17) March 15, 2023Grateful for small thing, big things and everything in between. 🙏#RP17 pic.twitter.com/NE9Do72Thr
— Rishabh Pant (@RishabhPant17) March 15, 2023
ಶೀಘ್ರವೇ ಚೇತರಿಸಿಕೊಂಡು ಮತ್ತೆ ಭಾರತ ತಂಡಕ್ಕೆ ಸೇರಿಕೊಳ್ಳಿ. ನಿಮ್ಮ ಆಟವನ್ನು ನೋಡಲು ಕಾತುರರಾಗಿದ್ದೇವೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದೇ ವೇಳೆ ರಿಷಬ್ ಪಂತ್ ಟ್ವಿಟರ್ಗೆ ಬಳಕೆದಾರರೊಬ್ಬರು ವಿಡಿಯೋವೊಂದನ್ನು ಟ್ಯಾಗ್ ಮಾಡಿದ್ದು, ಮನೆಯಲ್ಲಿ ಮಗುವೊಂದು ಕ್ರಿಕೆಟ್ ಆಡುತ್ತಿರುವಾಗ ಬಲವಾದ ಹೊಡೆತದ ಬಳಿಕ "ನಾನು ರಿಷಬ್ ಪಂತ್ ರೀತಿ ಆಗುತ್ತೇನೆ" ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ. ಚೇತರಿಸಿಕೊಳ್ಳುತ್ತಿದ್ದೀರಿ ಎಂದು ನಂಬಿದ್ದೇನೆ ನನ್ನ ಪುತ್ರ ಆಯಾನ್, ನಿಮ್ಮಂತೆಯೇ ಕ್ರಿಕೆಟಿಗನಾಗಬೇಕು ಎಂದು ಬಯಸಿದ್ದಾನೆ. ಅವನು ನಿಮ್ಮ ದೊಡ್ಡ ಅಭಿಮಾನಿ. ನೀವು ಗಾಯಗೊಂಡ ದಿನದಿಂದ ಬೇಗನೇ ಗುಣಮುಖರಾಗಲಿ ಎಂದು ಕೋರುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಅಪಘಾತದ ನಂತರ ಅವರ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಅಪ್‌ಡೇಟ್ ಮಾಡಲು ಪಂತ್ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹರಿಬಿಡುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ನಡೆದಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಭೀಕರ ಅಪಘಾತದ ಕಹಿನೆನಪು: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ರಿಷಬ್ ಪಂತ್ ಅವರು ಕಳೆದ ವರ್ಷಾಂತ್ಯದಲ್ಲಿ ತೀವ್ರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ (ಡಿಸೆಂಬರ್ 30) ಹೋಗುತ್ತಿದ್ದಾಗ ಬೆಳಗಿನ ಜಾವ 5.30 ರ ಸುಮಾರಿನಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿತ್ತು. ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಪಂತ್ ಗಾಯಗೊಂಡಿದ್ದರೂ ಕಾರಿನ ಗಾಜು ಹೊಡೆದು ಹೊರಬಿದ್ದು ಪ್ರಾಣ ಉಳಿಸಿಕೊಂಡಿದ್ದರು. ಸುದೈವವಶಾತ್ ಇದೇ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಸೇರಿ ಆಂಬ್ಯುಲೆನ್ಸ್ಗೆ ಕರೆಮಾಡಿ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ಪಂತ್ರನ್ನು ಸೇರಿಸಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಏರ್ ಲಿಫ್ಟ್ ಮಾಡಲಾಗಿತ್ತು. ಇಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಪಂತ್ರ ಹಣೆ ಮೇಲೆ ಎರಡು ಗಾಯ, ಬಲ ಮೊಣಕಾಲು, ಪಾದ ಮತ್ತು ಬೆನ್ನಿನ ಅಸ್ಥಿರಜ್ಜುವಿಗೆ ಪೆಟ್ಟಾಗಿತ್ತು ಎಂದು ಬಿಸಿಸಿಐ ತಿಳಿಸಿತ್ತು. ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಪಂತ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: 'ರಿಷಬ್ಗಾಗಿ ಪ್ರಾರ್ಥಿಸುತ್ತಿರುವೆ': ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ