ಬೆಂಗಳೂರು: ಕಳೆದ ವರ್ಷ ಡಿಸೆಂಬರ್ 30ರಂದು ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಕ್ಕೆ ತುತ್ತಾದ ವಿಕೆಟ್ ಕೀಪರ್ ರಿಷಬ್ ಪಂತ್ ಆದಷ್ಟು ಬೇಗ ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ. ಅಪಘಾತದ ನಂತರ ಪಂತ್ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಚೇತರಿಸಿಕೊಳ್ಳುತ್ತಿರುವ ಅವರು ಬಳ್ಳಾರಿಯ ವಿಜಯನಗರದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಕಂಡುಬಂದರು.
ಇಂದು ಎಕ್ಸ್ ಆ್ಯಪ್ನಲ್ಲಿ, ಪಂತ್ ಮೈದಾನಕ್ಕಿಳಿದು ಆಡಿರುವ ವಿಡಿಯೋ ವೈರಲ್ ಆಗಿದೆ. ಇದು ರಿಷಬ್ ಪಂತ್ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ರಾಯಭಾರಿಯಾಗಿರುವ ಕಾರಣ ಜಾಹೀರಾತು ಶೂಟಿಂಗ್‌ಗಾಗಿ ಬಳ್ಳಾರಿಗೆ ಬಂದಿದ್ದರು ಎನ್ನಲಾಗಿದೆ. ತೋರಣಗಲ್ಲಿನ ಜಿಂದಾಲ್ ಘಟಕದಲ್ಲಿ ಪಂತ್ ಬ್ಯಾಟ್ ಬೀಸಿದ್ದಾರೆ. ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಪಂತ್ ಆಟದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ತುಣುಕಿನಲ್ಲಿ ಪಂತ್ ಲಾಂಗ್ ಆಫ್ ಕಡೆಗೆ ಶಾಟ್ ಹೊಡೆದಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ನೆರೆದಿದ್ದ ಪ್ರೇಕ್ಷಕರು ಹರ್ಷೋದ್ಗರಿಸಿ ಚಪ್ಪಾಳೆ ತಟ್ಟಿದ್ದಾರೆ.
-
Rishabh Pant has resumed batting practice.
— Mufaddal Vohra (@mufaddal_vohra) August 16, 2023 " class="align-text-top noRightClick twitterSection" data="
An excellent news for Indian cricket! pic.twitter.com/5I2Q6tsaeE
">Rishabh Pant has resumed batting practice.
— Mufaddal Vohra (@mufaddal_vohra) August 16, 2023
An excellent news for Indian cricket! pic.twitter.com/5I2Q6tsaeERishabh Pant has resumed batting practice.
— Mufaddal Vohra (@mufaddal_vohra) August 16, 2023
An excellent news for Indian cricket! pic.twitter.com/5I2Q6tsaeE
ಜುಲೈ 21ರಂದು ಬಿಸಿಸಿಐ, ಪಂತ್ ಕೀಪಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು. ಈಗ ಅವರು ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುತ್ತಿದ್ದಾರೆ. ರಿಷಬ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಎನ್ಸಿಎಯಲ್ಲಿ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ.
ಪಂತ್ ಅನುಪಸ್ಥಿತಿಯಲ್ಲಿ ಭಾರತ ಮೂರು ಮಹತ್ವದ ಟ್ರೋಫಿಗಳನ್ನು ಆಡುತ್ತಿದೆ. ಜೂನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪಂತ್ ಬದಲು ಶ್ರೀಕರ್ ಭರತ್ ಅವರನ್ನು ಕೀಪರ್ ಆಗಿ ಆಡಿಸಲಾಗಿತ್ತು. ಇದೇ ತಿಂಗಳಾಂತ್ಯದಿಂದ ಭಾರತ ಏಷ್ಯಾಕಪ್ ಆಡಲಿದೆ. ಅಕ್ಟೋಬರ್ 5ರಿಂದ ಭಾರತದಲ್ಲಿ ವಿಶ್ವಕಪ್ ಸಹ ಆರಂಭವಾಗಲಿದೆ. ಮುಂದೆ ನಡೆಯಲಿರುವ ಈ ಎರಡೂ ಮಹತ್ವದ ಟೂರ್ನಿಗಳಲ್ಲಿ ಪಂತ್ ಅನುಪಸ್ಥಿತಿ ಇರಲಿದೆ. ಇವರ ಬದಲಾಗಿ ಕಿಶಾನ್ ಕಿಶನ್ ಅಥವಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದರೆ ಕೆ.ಎಲ್.ರಾಹುಲ್ ಕೀಪಿಂಗ್ ನಿರ್ವಹಿಸುವರು.
ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೆಸ್ಟ್ ಒಂದು ಇನ್ನಿಂಗ್ಸ್ ಮತ್ತು ಒನ್ಡೇಯ ಮೂರು ಪಂದ್ಯದಲ್ಲಿ ಸೇರಿ ಒಟ್ಟು ನಾಲ್ಕು ಅರ್ಧಶತಕ ದಾಖಲಿಸಿದ್ದರು. ಅಲ್ಲದೇ ಕೀಪಿಂಗ್ನಲ್ಲೂ ಅದ್ಭುತ ಕೈಚಳಕ ತೋರಿದ್ದರು. ಹೀಗಾಗಿ ಏಕದಿನ ವಿಶ್ವಕಪ್ನ ತಂಡದಲ್ಲಿ ಅವರು ಎರಡನೇ ವಿಕೆಟ್ ಕೀಪರ್ ಆಗಿ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ಏಷ್ಯಾಕಪ್ನಲ್ಲಿ ರಾಹುಲ್ ತಂಡಕ್ಕೆ ಮರಳುತ್ತಾರೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಅವರ ಆಟದ ಆಧಾರದ ಮೇಲೆ ವಿಶ್ವಕಪ್ ತಂಡಕ್ಕೆ ಸ್ಥಾನ ಪಡೆಯಲಿದ್ದಾರೆ.
ಇದನ್ನೂ ಓದಿ: Maharaja Trophy: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯ ಸಾಧಿಸಿದ ಶಿವಮೊಗ್ಗ ಲಯನ್ಸ್