ETV Bharat / sports

ಹರಿಣಗಳ ನಾಡಲ್ಲಿ ರಿಷಭ್ ಹೊಸ ದಾಖಲೆ.. 21 ವರ್ಷದ ನಂತರ ಕೋಚ್​​ ದ್ರಾವಿಡ್ ದಾಖಲೆ ಬ್ರೇಕ್! - Rishabh Pant Goes Past Rahul Dravid

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಂತ್ ಶತಕವಂಚಿತರಾಗಿದ್ದರೂ ಕೂಡ ಮಹತ್ವದ ಮೈಲುಗಲ್ಲು ನಿರ್ಮಿಸಿದ್ದು, ಈ ಹಿಂದೆ ಕೋಚ್​ ರಾಹುಲ್​​ ದ್ರಾವಿಡ್​ ನಿರ್ಮಿಸಿದ್ದ ದಾಖಲೆ ಬ್ರೇಕ್ ಮಾಡಿದ್ದಾರೆ..

Rishabh Pant Goes Past Rahul Dravid
Rishabh Pant Goes Past Rahul Dravid
author img

By

Published : Jan 21, 2022, 10:03 PM IST

ಪಾರ್ಲ್​(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್​​ ರಿಷಭ್ ಪಂತ್​ ಆರ್ಭಟಿಸಿದ್ದು, ಶತಕ ವಂಚಿತರಾದರೂ 85ರನ್​ಗಳ ಕಾಣಿಕೆ ನೀಡಿ ತಂಡದ ರನ್​​ ಏರಿಕೆಯಲ್ಲಿ ಸಹಾಯ ಮಾಡಿದರು. ಇದರ ಜೊತೆಗೆ ಹರಿಣಗಳ ನಾಡಲ್ಲಿ ಭಾರತೀಯ ವಿಕೆಟ್ ಕೀಪರ್​ಗಳ ಪೈಕಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ವಿರಾಟ್​ ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆ ಮೈದಾನಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ತಾವು ಎದುರಿಸಿದ 71 ಎಸೆತಗಳಲ್ಲಿ 2 ಸಿಕ್ಸರ್​, 10 ಬೌಂಡರಿ ಸೇರಿದಂತೆ 85 ರನ್​ ಗಳಿಸಿದರು. ಈ ಮೂಲಕ ಈ ಹಿಂದೆ ರಾಹುಲ್​ ದ್ರಾವಿಡ್(ವಿಕೆಟ್ ಕೀಪರ್​) ನಿರ್ಮಿಸಿದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಈ ಹಿಂದೆ 2001ರಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ರಾಹುಲ್​ ದ್ರಾವಿಡ್ ಡರ್ಬನ್​​ನಲ್ಲಿ 77ರನ್​ಗಳಿಸಿದ್ದ ದಾಖಲೆ ಬ್ರೇಕ್ ಮಾಡಿದರು. ಹರಿಣಗಳ ನಾಡಲ್ಲಿ 85ರನ್​ಗಳಿಕೆ ಮಾಡಿರುವ ಪಂತ್​​ ಇದೀಗ ಭಾರತೀಯ ವಿಕೆಟ್ ಕೀಪರ್​​​ನಿಂದ ಮೂಡಿ ಬಂದಿರುವ ಗರಿಷ್ಠ ಏಕದಿನ ಸ್ಕೋರ್​​ ಆಗಿದೆ.

2013ರಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಜೋಹಾನ್ಸ್​ಬರ್ಗ್​​ ಮೈದಾನದಲ್ಲಿ ಹರಿಣಗಳ ವಿರುದ್ಧ 65ರನ್​ಗಳಿಕೆ ಮಾಡಿದ್ದರು. ಇದಾದ ಬಳಿಕ ಟೀಂ ಇಂಡಿಯಾದ ಯಾವುದೇ ವಿಕೆಟ್ ಕೀಪರ್​ ಗರಿಷ್ಠ ರನ್​ಗಳಿಕೆ ಮಾಡಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿರಿ: 'ಶ್ರೀವಲ್ಲಿ' ಕನ್ನಡ ಹಾಡಿಗೆ ಡೇವಿಡ್ ವಾರ್ನರ್​ ಹೆಜ್ಜೆ.. ಕ್ರಿಕೆಟರ್​​ ಹುಕ್​​ ಸ್ಟೆಪ್​ಗೆ ಅಲ್ಲು ಫಿದಾ!

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 287ರನ್​ಗಳಿಕೆ ಮಾಡಿದೆ. ತಂಡದ ಪರ ರಿಷಭ್ ಪಂತ್​ 85ರನ್​ಗಳಿಕೆ ಮಾಡಿ ಗರಿಷ್ಠ ಸ್ಕೋರ್​​ರ ಆಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.