ನವದೆಹಲಿ: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಗುರುವಾರ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಹಾಗೂ ಆಂಗ್ಲರ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ರಿಷಭ್ ಪಂತ್ ವ್ಯಾಕ್ಸಿನ್ ಪಡೆದುಕೊಳ್ಳುತ್ತಿರುವ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇಂದು ನನ್ನ ಮೊದಲ ಡೋಸ್ ಪಡೆದುಕೊಂಡಿದ್ದೇನೆ. ನೀವು ಅರ್ಹರಾಗಿದ್ದರೆ ದಯವಿಟ್ಟು ನೀವಾಗಿಯೇ ಮುಂದೆ ಬಂದು ವ್ಯಾಕ್ಸಿನ್ ಪಡೆದುಕೊಳ್ಳಿ. ಎಷ್ಟು ಬೇಗ ನಾವು ಲಸಿಕೆ ಪಡೆದುಕೊಳ್ಳುತ್ತೇವೋ ಅಷ್ಟು ಬೇಗ ನಾವು ವೈರಸ್ ಮಣಿಸಬಹುದು ಎಂದು ತಮ್ಮ ಟ್ವಿಟರ್ನಲ್ಲಿ ಲಸಿಕೆ ಪಡೆದುಕೊಳ್ಳುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
-
Got my first jab today. When you are eligible, please step up and get the vaccine. The sooner we do it, the sooner we can beat this Virus. pic.twitter.com/D8AC4WrESO
— Rishabh Pant (@RishabhPant17) May 13, 2021 " class="align-text-top noRightClick twitterSection" data="
">Got my first jab today. When you are eligible, please step up and get the vaccine. The sooner we do it, the sooner we can beat this Virus. pic.twitter.com/D8AC4WrESO
— Rishabh Pant (@RishabhPant17) May 13, 2021Got my first jab today. When you are eligible, please step up and get the vaccine. The sooner we do it, the sooner we can beat this Virus. pic.twitter.com/D8AC4WrESO
— Rishabh Pant (@RishabhPant17) May 13, 2021
ಪಂತ್ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಅವರು ಇತ್ತೀಚೆಗೆ ಭಾರತ ಗೆದ್ದ ಪ್ರಮುಖ 2 ಟೆಸ್ಟ್ ಸರಣಿಗಳ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಟೆಸ್ಟ್ ಶ್ರೇಯಾಂಕದಲ್ಲೂ ಅಗ್ರ 10ರೊಳಗೆ ಪ್ರವೇಶಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇನ್ನು ಪಂತ್ಗಿಂತ ಮುಂಚೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ವೇಗಿಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಇದನ್ನು ಓದಿ:2021ರ ಐಪಿಎಲ್ ಪುನಾರಂಭವಾದರೂ ನಾನು ಆಡುವುದಿಲ್ಲ: ಬೆನ್ ಸ್ಟೋಕ್ಸ್