ನವದೆಹಲಿ: ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಕ್ರಿಕೆಟರ್ ಅಪ್‌ಡೇಟ್ ಮಾಡಿದ್ದಾರೆ. ಊರುಗೋಲು ಇಲ್ಲದೆ ನಡೆಯುವ ವಿಡಿಯೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ರಿಷಭ್ ಪಂತ್ ಪೋಸ್ಟ್ ಮಾಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾದ ಕಿರು ವಿಡಿಯೋದಲ್ಲಿ, ಪಂತ್ ಅವರು ಪ್ರಸ್ತುತ ಪುನರ್ವಸತಿಯಲ್ಲಿರುವ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಊರುಗೋಲನ್ನು ಎಸೆಯುವುದನ್ನು ಮತ್ತು ಬೇರೆ ಯಾವುದೇ ಬೆಂಬಲವಿಲ್ಲದೆ ತಮ್ಮ ಕಾಲುಗಳ ಮೇಲೆ ನಡೆಯುವುದನ್ನು ಕಾಣಬಹುದು. "ಹ್ಯಾಪಿ ನೋ ಮೋರ್ ಕ್ರಚಸ್ (ಊರುಗೋಲು) ಡೇ!" ಎಂಬ ಶೀರ್ಷಿಕೆಯಲ್ಲಿ ಪಂತ್ ವಿಡಿಯೋ ಹಂಚಿಕೊಂಡಿದ್ದಾರೆ.
ಸೀಮ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಸೂರ್ಯ ಕುಮಾರ್ ಯಾದವ್, "ಸ್ಪೈಡೆ ಮರಳಿದ್ದಾರೆ! ಹೆಚ್ಚಿನ ಶಕ್ತಿಯೊಂದಿಗೆ" ಎಂದು ಬರೆದಿದ್ದಾರೆ. ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ "ಹೌದು ಬ್ರೋ" ಎಂದು ಬರೆದರೆ, ಕುಲದೀಪ್ ಯಾದವ್ ಎರಡು ಹೃದಯ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಭಾರತದ ಮಾಜಿ ಬೌಲರ್ ಶ್ರೀಶಾಂತ್ "ಲವ್ ಯು ಬ್ರದರ್ ನಂಬಿಕೆಯನ್ನು ಹೀಗೇ ಮುಂದುವರೆಸು" ಎಂದು ಬರೆದಿದ್ದಾರೆ.
-
Happy NO MORE CRUTCHES Day!#RP17 pic.twitter.com/mYbd8OmXQx
— Rishabh Pant (@RishabhPant17) May 5, 2023 " class="align-text-top noRightClick twitterSection" data="
">Happy NO MORE CRUTCHES Day!#RP17 pic.twitter.com/mYbd8OmXQx
— Rishabh Pant (@RishabhPant17) May 5, 2023Happy NO MORE CRUTCHES Day!#RP17 pic.twitter.com/mYbd8OmXQx
— Rishabh Pant (@RishabhPant17) May 5, 2023
ಕಳೆದ ವರ್ಷ ಡಿಸೆಂಬರ್ 30 ರಂದು ಬೆಳಗ್ಗೆ, 25 ವರ್ಷದ ಪಂತ್ ತನ್ನ ತವರು ರೂರ್ಕಿಗೆ ತೆರಳುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿತ್ತು. ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಭೀಕರ ಕಾರು ಅಪಘಾತ ಸಂಭವಿಸಿತ್ತು.
ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸುವ ಮೊದಲು ಪಂತ್ ಅವರನ್ನು ಆರಂಭದಲ್ಲಿ ಮಲ್ಟಿಸ್ಪೆಷಾಲಿಟಿ ಸಕ್ಷಮ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಅಪಘಾತದ ನಂತರ ಬಿಸಿಸಿಐಯಿಂದ ವೈದ್ಯಕೀಯ ಅಪ್‌ಡೇಟ್‌ನ ಪ್ರಕಾರ, ಬಲ ಮೊಣಕಾಲಿನ ಅಸ್ಥಿರಜ್ಜು ಹೊರತಾಗಿ, ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿದ್ದವು ಮತ್ತು ಅವರ ಬೆನ್ನಿನ ಮೇಲೆ ಹಾಗೂ ಮಣಿಕಟ್ಟು, ಪಾದದ, ಟೋ ಸಹ ಗಾಯಗೊಂಡಿತ್ತು.
ಜನವರಿ 4 ರಂದು ಬಿಸಿಸಿಐ ಪಂತ್ ಅವರನ್ನು ಶಸ್ತ್ರಚಿಕಿತ್ಸೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರಿಸಿತ್ತು. ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ಆರ್ತ್ರೋಸ್ಕೊಪಿ ಮತ್ತು ಭುಜದ ನಿರ್ದೇಶಕರಾದ ಡಾ. ದಿನ್ಶಾ ಪರ್ದಿವಾಲಾ ಅವರ ನೇರ ಮೇಲ್ವಿಚಾರಣೆಯಲ್ಲಿ ಪಂತ್ಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.
ಆಸ್ಪ್ರತೆಯ ಯಶ್ವಸಿ ಚಿಕಿತ್ಸೆಯ ನಂತರ, ಪಂತ್ ಊರು ಗೋಲಿನ ಸಹಾಯದಿಂದ ನಡೆದಾಡುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಸ್ವಿಮಿಂಗ್ ಪೂಲ್ನಲ್ಲಿ ಊರುಗೋಲಿನ ಸಹಾಯದಿಂದ ನಡೆಯುವ ವಿಡಿಯೋ ಹಂಚಿಕೊಂಡಿದ್ದರು. ಏಪ್ರಿಲ್ 4 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೀಕ್ಷಣೆಗೆ ಬಂದಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯಲ್ಲಿದ್ದ ಪಂತ್, ಡೆಲ್ಲಿ ತಂಡ ಬೆಂಗಳೂರಿಗೆ ಬಂದಿದ್ದಾಗ ತಂಡದ ಆಟಗಾರರನ್ನು ಭೇಟಿಯಾಗಿ ಮಾತನಾಡಿಸಿದ್ದರು.
ಇದನ್ನೂ ಓದಿ: ಫುಟ್‌ಬಾಲ್‌ನಂತೆ ಕಬ್ಲ್ಗಳಿಗೆ ಕ್ರಿಕೆಟ್ ಸೀಮಿತವಾಗಲಿದೆ: ರವಿ ಶಾಸ್ತ್ರಿ