ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ವೇಗವಾಗಿ 100 ಬ್ಯಾಟರ್ಗಳನ್ನು ಔಟ್ ಮಾಡಿದ ಭಾರತದ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಿಗ್ಗಜ ಎಂ ಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಈ ಪಂದ್ಯಕ್ಕೂ ಮುನ್ನ ವಿಕೆಟ್ ಕೀಪರ್ ಆಗಿ 89 ಕ್ಯಾಚ್‌ಗಳು ಹಾಗೂ ಎಂಟು ಸ್ಟಂಪ್ ಔಟ್ ಸೇರಿ 97 ಬಾರಿ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ಗಟ್ಟಿದ್ದ ರಿಷಭ್ ಪಂತ್‌ಗೆ ಬಾಕ್ಸಿಂಗ್ ಡೇ ಪಂದ್ಯದಲ್ಲಿ 3 ಕ್ಯಾಚ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 100ನೇ ಬಲಿ ಪಡೆದರು. ಅಲ್ಲದೆ ಕೇವಲ 26ನೇ ಟೆಸ್ಟ್ನಲ್ಲಿ ಈ ವಿಶೇಷ ಮೈಲಿಗಲ್ಲನ್ನು ಸ್ಥಾಪಿಸುವ ಮೂಲಕ ಭಾರತದ ಪರ ಅತಿ ವೇಗವಾಗಿ 100 ಬಲಿ ಪಡೆದ ಭಾರತದ ವಿಕೆಟ್ ಕೀಪರ್ ಎನಿಸಿಕೊಂಡರು.
-
A century of dismissals for @RishabhPant17 from behind the stumps in whites👏👏
— BCCI (@BCCI) December 28, 2021 " class="align-text-top noRightClick twitterSection" data="
He becomes the fastest Indian wicket-keeper to achieve this feat.#SAvIND pic.twitter.com/6pHpfnLDO1
">A century of dismissals for @RishabhPant17 from behind the stumps in whites👏👏
— BCCI (@BCCI) December 28, 2021
He becomes the fastest Indian wicket-keeper to achieve this feat.#SAvIND pic.twitter.com/6pHpfnLDO1A century of dismissals for @RishabhPant17 from behind the stumps in whites👏👏
— BCCI (@BCCI) December 28, 2021
He becomes the fastest Indian wicket-keeper to achieve this feat.#SAvIND pic.twitter.com/6pHpfnLDO1
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸ್ಟಂಪ್‌ಗಳ ಹಿಂದೆ 100 ಬಲಿ ಪಡೆಯಲು 36 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದರು. ಇದೀಗ ಪಂತ್ 26 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ರಿಷಭ್ ಪಂತ್ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್, ಟೆಂಬ ಬವೂಮ ಮತ್ತು ವಿಯಾನ್ ಮಲ್ಡರ್ರನ್ನು ಅದ್ಭುತ ಕ್ಯಾಚ್ ಪಡೆದು ಪೆವಿಲಿಯನ್ಗಟ್ಟಿದರು.
ಭಾರತದ ಪರ 100 ಬಲಿ ಪಡೆದ ವಿಕೆಟ್ ಕೀಪರ್
- ರಿಷಭ್ ಪಂತ್-26 ಪಂದ್ಯ
- ಎಂಎಸ್ ಧೋನಿ/ವೃದ್ಧಿಮಾನ್ ಸಹಾ-36
- ಕಿರಣ್ ಮೋರೆ- 39
- ನಯನ್ ಮೊಂಗಿಯಾ-41
- ಸೈಯದ್ ಕೀರ್ಮಾನಿ-42
ವೇಗವಾಗಿ 100 ವಿಕೆಟ್ ಪಡೆದ ವಿಕೆಟ್ ಕೀಪರ್
- ಆ್ಯಡಂ ಗಿಲ್ಕ್ರಿಸ್ಟ್(AUS)-22,
- ಕ್ವಿಂಟನ್ ಡಿಕಾಕ್(SA)- 22
- ಮಾರ್ಕ್ ಬೌಷರ್(SA)23
- ವ್ಯಾಲೆ ಗ್ರೌಟ್(AUS)24
- ಡೇವಿಡ್ ರಿಚರ್ಡ್ಸನ್(SA) 24
- ಬ್ರಾಡ್ ಹಡ್ಡಿನ್(AUS) 25
ಇದನ್ನೂ ಓದಿ:ಇನ್ನೂ 3 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ, ಈ ತಂಡದ ಪರ ಐಪಿಎಲ್ನಲ್ಲಿ ಆಡುವಾಸೆ: ಅಂಬಾಟಿ ರಾಯುಡು