ETV Bharat / sports

ಒಂದೇ ಟೆಸ್ಟ್​ನಲ್ಲಿ ಶತಕ, ಅರ್ಧಶತಕ: 72 ವರ್ಷಗಳ ಹಳೆಯ ದಾಖಲೆ ಬ್ರೇಕ್​ ಮಾಡಿದ ರಿಷಭ್ ಪಂತ್ - ರಿಷಭ್ ಪಂತ್ ರೆಕಾರ್ಡ್​​

ಅಮೋಘ ಫಾರ್ಮ್​​ನಲ್ಲಿರುವ ಟೀಂ ಇಂಡಿಯಾ ರಿಷಭ್ ಪಂತ್, ಆಂಗ್ಲರ ನೆಲದಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿರುವ ಭಾರತದ ಎರಡನೇ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ್ದಾರೆ.

Rishabh Pant record
Rishabh Pant record
author img

By

Published : Jul 4, 2022, 5:46 PM IST

ಬರ್ಮಿಂಗ್​ಹ್ಯಾಮ್​​(ಎಡ್ಜಬಾಸ್ಟನ್​): ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಮೊದಲ ಇನ್ನಿಂಗ್ಸ್​​ನಲ್ಲಿ 146 ರನ್​​ಗಳಿಸಿದ್ದ ಈ ಪ್ಲೇಯರ್​ ಎರಡನೇ ಇನ್ನಿಂಗ್ಸ್​​​ನಲ್ಲಿ 57ರನ್​​ಗಳಿಕೆ ಮಾಡಿದ್ದು, ಈ ಮೂಲಕ 72 ವರ್ಷಗಳ ಹಳೆಯ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ.

ಭಾರತದ ವಿಕೆಟ್ ಕೀಪರ್​​ ಫರೋಖ್​ ಇಂಜಿನಿಯರ್​ ನಂತರ ಒಂದೇ ಟೆಸ್ಟ್​ ಪಂದ್ಯದಲ್ಲಿ ಶತಕ ಮತ್ತು ಅರ್ಧಶತಕ ಸಿಡಿಸಿರುವ ಎರಡನೇ ವಿಕೆಟ್ ಕೀಪರ್(ಭಾರತದ) ಆಗಿ ಪಂತ್ ಹೊರಹೊಮ್ಮಿದ್ದಾರೆ. ಜೊತೆಗೆ ಟೆಸ್ಟ್​ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್​ಗಳಿಸಿದ ವಿಕೆಟ್ ಕೀಪರ್​ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ 1973ರಲ್ಲಿ ಫರೋಖ್​ ಇಂಗ್ಲೆಂಡ್​ ವಿರುದ್ಧ ಕ್ರಮವಾಗಿ 121ಹಾಗೂ 66ರನ್​​ಗಳಿಕೆ ಮಾಡಿದ್ದರು.

ಈ ಹಿಂದೆ 2011ರಲ್ಲಿ ಇಂಗ್ಲೆಂಡ್​ ವಿರುದ್ಧ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಕ್ರಮವಾಗಿ 77 ಮತ್ತು 74ರನ್​​ಗಳಿಕೆ ಮಾಡಿದ್ದರು. ಆದರೆ, ಇದೀಗ ಪಂತ್ ಆ ದಾಖಲೆ ಸಹ ಅಳಿಸಿ ಹಾಕಿದ್ದಾರೆ.ಎಡ್ಜಬಾಸ್ಟನ್ ಮೈದಾನದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 146ರನ್​ಗಳಿಕೆ ಮಾಡಿದ್ದ ಪಂತ್​, ಎರಡನೇ ಇನ್ನಿಂಗ್ಸ್​​ನಲ್ಲಿ 57ರನ್​​ ಬಾರಿಸಿದ್ದಾರೆ. ಈ ಮೂಲಕ ವಿದೇಶಿ ನೆಲದಲ್ಲಿನ ಟೆಸ್ಟ್​ನ ಪಂದ್ಯವೊಂದರಲ್ಲಿ ಗರಿಷ್ಠ ರನ್​ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ.

ಇದನ್ನೂ ಓದಿರಿ: 'ಟೆಸ್ಟ್​​ ಕ್ರಿಕೆಟ್​​ನಲ್ಲಿ ನಾನು ನೋಡಿದ ಅತ್ಯುತ್ತಮ ಜೊತೆಯಾಟ': ಪಂತ್​ - ಜಡೇಜಾ ಆಟಕ್ಕೆ ಎಬಿಡಿ ಪ್ರಶಂಸೆ

ಇಂಗ್ಲೆಂಡ್ ವಿರುದ್ಧ ಮರುನಿಗದಿಯಾಗಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ 416 ರನ್​​ಗಳಿಸಿದ್ದು, 132ರನ್​​ಗಳ ಮುನ್ನಡೆ ಪಡೆದುಕೊಂಡಿದೆ. ಸದ್ಯ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ನಡೆಸಿದ್ದು, 360ರನ್​ಗಳ ಮುನ್ನಡೆಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.