ಪರ್ತ: (ಆಸ್ಟ್ರೇಲಿಯಾ): ಎದೆನೋವು ಕಾರಣದಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಸ್ಪತ್ರೆ ದಾಖಲಾಗಿದ್ದಾರೆ. ಇಲ್ಲಿಯ ಪರ್ತ್ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದು ವೈದ್ಯರು ತಪಾಸಣೆ ನಡೆಸಿದ್ದಾರೆ. ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್‌ನ ಮೂರನೇ ದಿನದ ಕಾಮೆಂಟ್ ಮಾಡುತ್ತಿದ್ದಾಗ ಎದುನೋವು ಕಾಣಿಸಿಕೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಗಿದೆ.
ಚಾನೆಲ್ 7 ಜೊತೆ ಅವರು ಕಾಮೆಂಟೇಟರ್ ಆಗಿ ಒಪ್ಪಂದ ಮಾಡಿಕೊಂಡಿದ್ದು ಊಟದ ವೇಳೆ ಎದೆನೋವು ಕಾಣಿಸಿಕೊಂಡಿತು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಕಾಮೆಂಟರಿ ಸಹೋದ್ಯೋಗಿಗಳಿಗೆ ತಾವು ಆರೋಗ್ಯವಾಗಿರುವುದಾಗಿ ರಿಕಿ ಪಾಂಟಿಂಗ್ ತಿಳಿಸಿದ್ದಾರೆ ಎಂದು ಫಾಕ್ಸ್ ಸ್ಪೋರ್ಟ್ಸ್‌ನ ವರದಿ ಮಾಡಿದೆ.
-
Former Australia skipper Ricky Ponting taken to hospital after heart scare while commentating during day three of Australia's first test against West Indies at Perth Stadium, reports Reuters.
— ANI (@ANI) December 2, 2022 " class="align-text-top noRightClick twitterSection" data="
(Photo source: Ponting's Twitter handle) pic.twitter.com/EyKFEzrLsl
">Former Australia skipper Ricky Ponting taken to hospital after heart scare while commentating during day three of Australia's first test against West Indies at Perth Stadium, reports Reuters.
— ANI (@ANI) December 2, 2022
(Photo source: Ponting's Twitter handle) pic.twitter.com/EyKFEzrLslFormer Australia skipper Ricky Ponting taken to hospital after heart scare while commentating during day three of Australia's first test against West Indies at Perth Stadium, reports Reuters.
— ANI (@ANI) December 2, 2022
(Photo source: Ponting's Twitter handle) pic.twitter.com/EyKFEzrLsl
ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದರಿಂದ ಸದ್ಯ ಕಾಮೆಂಟರಿ ವಿಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಾಳೆ ಅಥವಾ ಮುಂದಿನ ಪಂದ್ಯದಲ್ಲಿ ಅವರು ಕಾಣಿಸಿಕೊಳ್ಳಬಹುದು. ಯಾವು ಭೀತಿಗೊಳಗಾವುದು ಬೇಡ ಎಂದು ಚಾನೆಲ್ 7 ವಕ್ತಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಆರೋಗ್ಯವಾಗಿದ್ದ ಶೇನ್ ವಾರ್ನ್, ರಾಡ್ ಮಾರ್ಷ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಡೀನ್ ಜೋನ್ಸ್ ಅವರ ದಿಢೀರ್ ನಿಧನದಿಂದ ಇತ್ತೀಚೆಗೆ ಆಸ್ಟ್ರೇಲಿಯಾದ ಕ್ರಿಕೆಟ್ ಸಮುದಾಯವು ಭಯದಲ್ಲಿದೆ. ಆಸ್ಟ್ರೇಲಿಯಾದ ಹಲವು ಆಟಗಾರರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಐಪಿಎಲ್ ಮಿನಿ ಆ್ಯಕ್ಷನ್: ಯಾರಿಗೆ ಎಷ್ಟು ಕೋಟಿಯ ಮೂಲ ಬೆಲೆ, ಯಾರೆಲ್ಲಾ ಐಪಿಎಲ್ನಿಂದ ದೂರ..