ಹೈದರಾಬಾದ್: ಭಾರತದಲ್ಲಿ ಕ್ರಿಕೆಟ್ ಆಟ ಇದೆ ಎಂದು ತಿಳಿದದ್ದು ಕಪಿಲ್ ದೇವ್ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ 1983 ರ ವಿಶ್ವಕಪ್ ಎತ್ತಿ ಹಿಡಿದ ನಂತರ. 1983ರ ಜೂನ್ 25 ರಂದು 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದಿದ್ದ ಕಪಿಲ್ ಅಂಡ್ ಟೀಂ ವಿಶ್ವಕ್ರಿಕೆಟ್ನಲ್ಲಿ ತಮ್ಮ ಶಕ್ತಿಯನ್ನು ಅನಾವರಣ ಮಾಡಿತ್ತು. ಭಾರತಕ್ಕೆ ಮೊದಲ ವಿಶ್ವಕಪ್ ಸಂದು ಇಂದಿಗೆ 38 ವರ್ಷಗಳು ಸಂದಿವೆ.
ಕ್ರಿಕೆಟ್ ಶಿಶುವಾಗಿ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತ ತಂಡ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ನಂಬಲಾಸಾಧ್ಯ ರೀತಿಯಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ಕೋಟ್ಯಾಂತರ ಜನರಿಗೆ ಆಶ್ಚರ್ಯ ತಂದಿತ್ತು. ಭಾರತ ವಿಶ್ವಕಪ್ ಗೆಲ್ಲಲು ಸಮರ್ಥ ತಂಡವಲ್ಲ ಎಂದು ಕೊಂಡಿದ್ದ ಜನರ ಅಭಿಪ್ರಾಯ ತಪ್ಪೆಂದು ಕಪಿಲ್ ದೇವ್ ತಂಡ ತೋರಿಸಿಕೊಟ್ಟಿತ್ತು.
ಇನ್ನು, ಈ ವಿಶ್ವಕಪ್ ಗೆದ್ದ ನಂತರದ ಸರಣಿಯೊಂದರಲ್ಲಿ ದಿನವೊಂದಕ್ಕೆ ಭಾರತೀಯರು ಹಾಗೂ ತಂಡದ ಮ್ಯಾನೇಜರ್ಗಳು ಪಡೆಯುತ್ತಿದ್ದ ವೇತನ ಬಹಿರಂಗಗೊಂಡಿದ್ದು, 1983ರ ದಿನಕ್ಕೂ ಇಂದು ಕ್ರಿಕೆಟಿಗರು ಪಡೆಯುತ್ತಿರುವ ವೇತನಕ್ಕೂ ಇರುವ ವ್ಯತ್ಯಾಸ ನೋಡಿದರು ಖಂಡಿತ ಆಶ್ಚರ್ಯವಾಗುತ್ತದೆ.
ಇದನ್ನೂ ಓದಿ: 1983ರ ವಿಶ್ವಕಪ್ಗೆ 38ರ ಸಂಭ್ರಮ: ಭಾರತೀಯರ ಕನಸನ್ನು ಜೀವಂತವಾಗಿರಿಸಿತ್ತು ಕಪಿಲ್ರ ಆ ಇನ್ನಿಂಗ್ಸ್ !
1983ರಂದು ಪಾಕಿಸ್ತಾನದ ವಿರುದ್ಧದ ಸರಣಿಯ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಪಡೆದ ವೇತನದ ದಾಖಲೆ ಹೊಂದಿರುವ ಪತ್ರವೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಅದರ ಪ್ರಕಾರ ತಂಡದ ಪ್ರತಿಯೊಬ್ಬ ಆಟಗಾರ ದಿನ ಭತ್ಯೆಯಾಗಿ 200 ರೂ. ಹಾಗೂ ಒಂದು ಪಂದ್ಯ ಶುಲ್ಕ 1,500 ರೂ. ಸೇರಿ ಒಟ್ಟು 2,100 ರೂಪಾಯಿ ಪಡೆದಿದ್ದಾರೆ.
ಆದರೆ ಇಂದು ಕ್ರಿಕೆಟ್ ವಾಣಿಜ್ಯವಾಗಿ ಬೆಳೆದಿದೆ. ಅದರಲ್ಲೂ ಭಾರತ ಕ್ರಿಕೆಟ್ ಮಂಡಳಿ ವಿಶ್ವದಲ್ಲೇ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಪ್ರಸ್ತುತ ಇರುವ ಆಟಗಾರರು ಗ್ರೇಡ್ ಸರಣಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಎ+, ಎ, ಬಿ ಮತ್ತು ಸಿ ಶ್ರೇಣಿಯಲ್ಲಿ ಪ್ರತ್ಯೇಕ ವೇತನ ಪಡೆಯುತ್ತಿದ್ದಾರೆ. ಎ+ ನಲ್ಲಿರುವವರು ವಾರ್ಷಿಕವಾಗಿ 7 ಕೋಟಿ, ಎ ನಲ್ಲಿರುವರು 5 ಕೋಟಿ, ಬಿ ನಲ್ಲಿರುವವರಿಗೆ 3 ಕೋಟಿ ಹಾಗೂ ಸಿ ಗ್ರೇಡ್ನಲ್ಲಿರುವವರಿಗೆ 1 ಕೋಟಿ ರೂ. ಸಿಗಲಿದೆ.
ಇದನ್ನೂ ಓದಿ: 1983ರ ವಿಶ್ವಕಪ್ಗೆ 38ರ ಸವಿನೆನಪು.. ಬಲಿಷ್ಠ ವಿಂಡೀಸ್ ಮಣಿಸಿ ವಿಶ್ವಕ್ರಿಕೆಟ್ ತನ್ನತ್ತ ತಿರುಗುವಂತೆ ಮಾಡಿತ್ತು ಕಪಿಲ್ ಪಡೆ
ಇದಲ್ಲದೆ, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಭತ್ಯೆ ಪಡೆಯಲಿದ್ದಾರೆ. ರಾಷ್ಟ್ರೀಯ ತಂಡದ ಕ್ರಿಕೆಟಿಗರಲ್ಲದೆ ರಣಜಿ ಕ್ರಿಕೆಟ್ ಆಡುವವರು ಕೂಡ ದಿನವೊಂದಕ್ಕೆ 35,000 ರೂ. ಪಡೆಯಲಿದ್ದಾರೆ. ಜೊತೆಗೆ ನೇರಪ್ರಸಾರದಿಂದ ಬರುವ ಹಣದಲ್ಲೂ ಇಂತಿಷ್ಟು ಶೇಕಡಾವಾರು ಎಂದು ಪಡೆಯಲಿದ್ದಾರೆ. ದೇಶಿಯ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವ ಆಟಗಾರರು ಸರಾಸರಿ ಒಂದು ಪಂದ್ಯಕ್ಕೆ 3 ಲಕ್ಷ ಸಂಪಾದಿಸಲಿದ್ದಾರೆ.
1983 ಕ್ಕೂ ಇಂದಿಗೂ ಹೋಲಿಸಿದರೆ ಭಾರತದಲ್ಲಿ ಕ್ರಿಕೆಟ್ ವಾಣಿಜ್ಯ ಕ್ರೀಡೆಯಾಗಿ ಬದಲಾಗಿದೆ. ಐಪಿಎಲ್ನಂತಹ ಲೀಗ್ಗಳು ತಲೆಯತ್ತಿವೆ. ಇದರ ಜೊತೆಗೆ ಕೋಟ್ಯಾಂತರ ರೂ. ಜಾಹಿರಾತು ರಾಯಭಾರತ್ವದಿಂದ ಆಟಗಾರರು ಪಡೆಯುತ್ತಿದ್ದಾರೆ.